• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಸದ ಪ್ರತಾಪ್ ಸಿಂಹ ಕಸ್ಟಡಿ ಪಡೆದ ಜನಪ್ರತಿನಿಧಿಗಳ ಕೋರ್ಟ್

|

ಬೆಂಗಳೂರು, ಮಾರ್ಚ್ 08 : ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರನ್ನು ಕೋರ್ಟ್ ಕಸ್ಟಡಿಗೆ ಪಡೆದಿದೆ. ನಟ ಪ್ರಕಾಶ್ ರಾಜ್ ಅವರು ಸಂಸದರ ವಿರುದ್ಧ ಮಾನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

ಶುಕ್ರವಾರ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಪ್ರತಾಪ್ ಸಿಂಹ ಅವರನ್ನು ಕಸ್ಟಡಿಗೆ ಪಡೆದಿದ್ದು ಪೊಲೀಸರ ಜೊತೆ ಹೊರಗೆ ಕೂರುವಂತೆ ಆದೇಶ ನೀಡಿದೆ.

ಮಾನನಷ್ಟ ಮೊಕದ್ದಮೆ; ಸಂಸದ ಪ್ರತಾಪ್ ಸಿಂಹಗೆ ವಾರಂಟ್

ಪ್ರಕಾಶ್ ರಾಜ್ ಸಲ್ಲಿಸಿದ್ದ ಮಾನಷ್ಟ ಮೊಕದ್ದಮೆಯಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಜಾಮೀನು ರಹಿತ ವಾರೆಂಟೆ ಜಾರಿಯಾಗಿತ್ತು. ಶುಕ್ರವಾರ ಸಂಸದರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಆಗ ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ್ ಪೊಲೀಸರ ಜೊತೆ ಹೊರಗೆ ಕೂರುವಂತೆ ಆದೇಶಿಸಿದರು.

ಪ್ರತಾಪ್ ಸಿಂಹ ಅವರು ನ್ಯಾಯಾಲಯಕ್ಕೆ ಹಾಜರಾದ ಹಿನ್ನಲೆಯಲ್ಲಿ ಜಾಮೀನು ರಹಿತ ವಾರೆಂಟ್ ವಾಪಸ್ ಪಡೆಯುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಕಳೆದ ವರ್ಷ ಪ್ರಕಾಶ್ ರಾಜ್ ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಪ್ರಕಾಶ್ ರಾಜ್ ಅವರ ಕುಟುಂಬದ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು. ಆದ್ದರಿಂದ, ಅವರ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿದೆ.

English summary
Mysuru Kodagu BJP MP Pratap Simha is under the custody of Special Court of elected representatives. Actor Prakash Raj filed a defamation case against Pratap Simha over his comments about his personal life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X