ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಚಲನಚಿತ್ರೋತ್ಸವಕ್ಕೆ ಹೋಗ್ಬೇಕಾ? ನೀವು ಮಾಡ್ಬೇಕಾಗಿದ್ದು ಇಷ್ಟೆ

ಮೈಸೂರು ಅಂತರಾಷ್ಟ್ರೀಯ ಚಲಚಿತ್ರೋತ್ಸವ ಫೆಬ್ರವರಿ 2ರಿಂದ 9ರವರೆಗೆ ನಡೆಯಲಿದ್ದು ನೋಂದಣಿ ಕಾರ್ಯ ಆರಂಭವಾಗಿದೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜನವರಿ 24: ಮೈಸೂರು ಮತ್ತು ಬೆಂಗಲೂರಿನ ಜನತೆಗೆ ದೇಶ-ವಿದೇಶಗಳ, ವಿವಿಧ ಭಾಷೆಗಳ ಚಿತ್ರಗಳನ್ನು ನೋಡುವ ಸದಾವಕಾಶ ಮತ್ತೆ ಬಂದಿದೆ. ಫೆಬ್ರವರಿ 2 ರಿಂದ 9 ರವರೆಗೆ 'ಮಾಲ್ ಆಫ್ ಮೈಸೂರು'ನ ಐನಾಕ್ಸ್ ಚಿತ್ರಮಂದಿರ ಮತ್ತು ಬೆಂಗಲೂರಿನ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್ ನ ಪಿವಿಆರ್ ಚಿತ್ರ ಮಂದಿರದಲ್ಲಿ ಮನೋರಂಜನಾತ್ಮಕ, ಪ್ರಯೋಗಾತ್ಮಕ ಮತ್ತು ಕಲಾತ್ಮಕ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಮೈಸೂರಿನ ಐನಾಕ್ಸ್ ಚಿತ್ರ ಮಂದಿರದ ನಾಲ್ಕು, ಹಾಗೂ ಬೆಂಗಳೂರಿನ ಪಿವಿಆರ್ ಚಿತ್ರ ಮಂದಿರದ 11 ಪರದೆಗಳಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಸಿನಿಮಾಗಳ ಪ್ರದರ್ಶನ ನಡೆಯಲಿದ್ದು ನೋಂದಣಿ ಕಾರ್ಯ ಈಗಾಗಲೆ ಆರಂಭವಾಗಿದೆ.

Mysuru: International Film Festival registration started

ನೋಂದಣಿಗೆ ಮಾಡಬೇಕಾಗಿದ್ದಿಷ್ಟೆ

ಈಗಾಗಲೇ ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನೋಂದಣಿ ಆರಂಭವಾಗಿದೆ. ಇನ್ನು ಬೆಂಗಳೂರಿನ ಎನ್.ಆರ್ ರಸ್ತೆಯಲ್ಲಿರುವ ಚಲನಚಿತ್ರ ಅಕಾಡೆಮಿ ಕಾರ್ಯಾಲಯ, ಸುಚಿತ್ರಾ ಚಿತ್ರ ಸಮಾಜದದಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು. ಜನವರಿ 26 ರಂದು ಸಹ ನೋಂದಣಿ ಕಾರ್ಯ ಬೆಳಿಗ್ಗೆ 10-30 ರಿಂದ ಸಂಜೆ 5-30 ರವರೆಗೆ ನಡೆಯಲಿದೆ. ಚಲನಚಿತ್ರೋತ್ಸವಕ್ಕೆ ನೋಂದಾಯಿತ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿದ್ದು, 18 ವರ್ಷ ಮೇಲ್ಪಟ್ಟವರು ಮಾತ್ರ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಸರು ನೋಂದಾಯಿಸಿಕೊಳ್ಳುವವರು ಎರಡು ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.

ನೋಂದಣಿ ದರ:

ಸಾರ್ವಜನಿಕರಿಗೆ 600/-ರೂ,

ವಿದ್ಯಾರ್ಥಿಗಳಿಗೆ, ಚಿತ್ರ ಸಮಾಜದ ಸದಸ್ಯರಿಗೆ, ಹಿರಿಯ ನಾಗರಿಕರಿಗೆ ಮತ್ತು ಚಿತ್ರೋದ್ಯಮದ ಪ್ರತಿನಿಧಿಗಳಿಗೆ 300/- ರೂ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2423251, ಮೊಬೈಲ್ ಸಂಖ್ಯೆ 9980154528, 8970543203 ನ್ನು ಸಂಪರ್ಕಿಸಬೇಕಾಗಿ ವಾರ್ತಾ ಇಲಾಖೆ ಕೋರಿಕೊಂಡಿದೆ.

ವೆಬ್‍ಸೈಟ್ ವಿಳಾಸ http://biffes.in/ ನಲ್ಲಿ ಆನ್‍ಲೈನ್ ಮೂಲಕವೂ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಹೆಸರು ನೊಂದಾಯಿಸಿಕೊಂಡವರು ಬೆಂಗಳೂರಿನ ರಾಜಾಜಿನಗರದ ಓರಿಯನ್ ಮಾಲ್‍ನ ಪಿವಿಆರ್ ಸಿನಿಮಾದ 11 ತೆರೆಗಳಲ್ಲಿ ಹಾಗೂ ಮೈಸೂರಿನ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ 4 ತೆರೆಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಬಹುದು.

English summary
Registration for Mysuru International Film Festival was started. People can register and enjoy National and International films in City of Mysuru mall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X