‘ಸಮಯ ಪ್ರಜ್ಞೆ ಇಲ್ವೇನ್ರೀ?’ ಎಂದು ತನ್ವೀರ್ ಸೇಠ್; ತಡವಾಗಿ ಬಂದಿದ್ದಕ್ಕೆ ಯತೀಂದ್ರ ಕೊಟ್ಟ ಕಾರಣವೇನು?

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆರಂಭದಲ್ಲೇ ಕಾಂಗ್ರೆಸ್ ನಾಯಕರ ನಡುವಿನ ಅಸಮಾಧಾನ ಬಹಿರಂಗವಾಗಿದೆ. ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿ ಕುಟುಂಬದವರಿಗೆ ಆಯೋಜಿಸಿದ್ದ ಉಪಾಹಾರ ಕೂಟಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಡವಾಗಿ ಆಗಮಿಸಿದ್ದು, ಶಾಸಕ ತನ್ವೀರ್ ಸೇಠ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು ಅರಮನೆ ಆವರಣದಲ್ಲಿ ಸೆಪ್ಟೆಂಬರ್ 28ರಂದು ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿ ಕುಟುಂಬದವರಿಗೆ ಜಿಲ್ಲಾಡಳಿತದ ವತಿಯಿಂದ ಉಪಾಹಾರ ಕೂಟ ಮತ್ತು ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಇದಕ್ಕಾಗಿ ಮಾವುತರು ಮತ್ತು ಕಾವಾಡಿಗಳನ್ನು ಕೂರಿಸಿ, ಬಾಳೆ ಎಲೆಗಳನ್ನು ಹಾಕಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

Mysuru Dasara Tanveer Sait Questions Yathindra Delay at Dasara Event Minister Explains Why He Was Late

ಆದರೆ, ಸಚಿವ ಯತೀಂದ್ರ ಸಿದ್ದರಾಮಯ್ಯ ನಿಗದಿತ ಸಮಯಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಗೊಂದಲ ಉಂಟಾಯಿತು. ಸಚಿವರಿಗಾಗಿ ಕಾಯುತ್ತಿದ್ದ ಶಾಸಕ ತನ್ವೀರ್ ಸೇಠ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

'ಸಮಯ ಪ್ರಜ್ಞೆ ಇಲ್ವೇನ್ರೀ?'

ಕಾರ್ಯಕ್ರಮಕ್ಕೆ ಸಚಿವರು ತಡವಾಗಿ ಬಂದಿದ್ದಕ್ಕೆ ಅಸಮಾಧಾನಗೊಂಡ ತನ್ವೀರ್ ಸೇಠ್, ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಮ್ಮ ಆಕ್ರೋಶ ಹೊರಹಾಕಿದರು. "ಸಮಯ ಪ್ರಜ್ಞೆ ಇರಬೇಕು. ಸಮಯ ಪ್ರಜ್ಞೆ ಇಲ್ಲ ಅಂದ್ರೆ ಏನ್ಮಾಡಬೇಕು? ಬೇರೆ ಕಾರ್ಯಕ್ರಮ ಆಗಿದ್ದರೆ ಹೇಗೋ ಸರಿ. ಇಂತಹ ಕಾರ್ಯಕ್ರಮಕ್ಕೆ ತಡವಾಗಿ ಬಂದರೆ ಅದರ ಅರ್ಥ ಏನು? ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಇದನ್ನೆಲ್ಲ ಸಹಿಸಿಕೊಳ್ಳಲು ಆಗಲ್ಲ" ಎಂದು ಕಿಡಿಕಾರಿದರು.

ಮಾವುತರು ಮತ್ತು ಕಾವಾಡಿಗಳನ್ನು ಈ ರೀತಿ ಕಾಯಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕ ತನ್ವೀರ್ ಸೇಠ್ ಅವರು, "ನೋ ನೋ, ನಾನು ಇಲ್ಲಿಂದ ಹೊರಡುತ್ತೇನೆ" ಎಂದು ಹೇಳಿ ಕಾರ್ಯಕ್ರಮದ ಸ್ಥಳದಿಂದ ನಿರ್ಗಮಿಸಿದರು.

Mysuru Dasara: 1 ಗಂಟೆ 15 ನಿಮಿಷ ತಡವಾಗಿ ಬಂದ ಯತೀಂದ್ರ

ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಬೆಳಗ್ಗೆ 10.15ರ ಸುಮಾರಿಗೆ ಆಗಮಿಸಿದರು. ಅಂದರೆ, ನಿಗದಿತ ಸಮಯಕ್ಕಿಂತ ಸುಮಾರು 1 ಗಂಟೆ 15 ನಿಮಿಷ ತಡವಾಗಿತ್ತು.

ಈ ಹಿನ್ನೆಲೆಯಲ್ಲಿ ಮಾವುತರು ಮತ್ತು ಕಾವಾಡಿಗಳು ಬಾಳೆ ಎಲೆಗಳ ಮುಂದೆ ಕುಳಿತು ಸಚಿವರಿಗಾಗಿ ಕಾಯಬೇಕಾಯಿತು. ದಸರಾ ಮಹೋತ್ಸವದ ಪ್ರಮುಖ ಭಾಗವಾಗಿರುವ ಗಜಪಡೆಯನ್ನು ನೋಡಿಕೊಳ್ಳುವ ಮಾವುತರು ಹಾಗೂ ಕಾವಾಡಿ ಕುಟುಂಬದವರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲೇ ಇಂತಹ ವಿಳಂಬವಾಗಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು.

ತಡವಾಗಿ ಬಂದಿದ್ದಕ್ಕೆ ಯತೀಂದ್ರ ಕೊಟ್ಟ ಕಾರಣವೇನು?

ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಬಗ್ಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತಾವು ಉದ್ದೇಶಪೂರ್ವಕವಾಗಿ ತಡವಾಗಿ ಬಂದಿಲ್ಲ ಎಂದು ಹೇಳಿರುವ ಅವರು, ಹೊಸ ಮನೆಗೆ ಸಂಬಂಧಿಸಿದ ಕೆಲಸಗಳೇ ವಿಳಂಬಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ನಮ್ಮದು ಹೊಸ ಮನೆ. ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಮನೆಯಲ್ಲಿ ಅಮ್ಮ ಇರಲಿಲ್ಲ, ಕೆಲಸಗಾರರೂ ಇರಲಿಲ್ಲ. ಹೀಗಾಗಿ ಕೆಲವೊಂದಿಷ್ಟು ವ್ಯವಸ್ಥೆ ಮಾಡಿಕೊಂಡು ಬರುವುದರಲ್ಲಿ ತಡವಾಯಿತು. ಉದ್ದೇಶಪೂರ್ವಕವಾಗಿ ನಾನು ತಡವಾಗಿ ಬಂದಿಲ್ಲ ಎಂದು ಹೇಳಿದ್ದಾರೆ.

Mysuru Dasara: ದಸರಾ ಆರಂಭದಲ್ಲೇ ಬಹಿರಂಗವಾದ ಅಸಮಾಧಾನ

ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮಾವುತರು ಮತ್ತು ಕಾವಾಡಿಗಳ ಉಪಾಹಾರ ಕೂಟದಲ್ಲಿ ನಡೆದ ಈ ಘಟನೆ ಗಮನ ಸೆಳೆದಿದೆ. ಕಾರ್ಯಕ್ರಮಕ್ಕೆ ಸಚಿವರು ತಡವಾಗಿ ಬಂದಿದ್ದಕ್ಕೆ ತನ್ವೀರ್ ಸೇಠ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರೆ, ಯತೀಂದ್ರ ಸಿದ್ದರಾಮಯ್ಯ ತಮ್ಮ ವಿಳಂಬಕ್ಕೆ ವೈಯಕ್ತಿಕ ಕಾರಣ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+