ಇನ್ನೆರಡು ದಿನಗಳಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು.. ಇಲ್ಲದೇ ಹೋದರೆ...: ಸ್ಪೋಟಕ ಭವಿಷ್ಯ‌

ಮೈಸೂರು, ನವೆಂಬರ್‌ 26: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕದನ ಕೋಲಾಹಲಕಾರಿ ತಿರುವು ಪಡೆಯುತ್ತಿದೆ. ಎರಡು ಬಣಗಳ ನಡುವೆ ಮುಖ್ಯಮಂತ್ರಿ ಕುರ್ಚಿ ಕದನ ಮುಂದುವರೆದಿದ್ದು, ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಶಾಸಕರ ಬಲಾಬಲ ಪ್ರದರ್ಶನ ಶುರುವಾಗಿದೆ. ಈ ಮಧ್ಯೆ ನಾಡಿನ ಹಲವು ಮಠಾಧೀಶರು, ಧಾರ್ಮಿಕ ಮುಖಂಡರು ಕೂಡ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮೈಸೂರಿನಲ್ಲಿ ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗ್ರಹಗತಿಗಳ ಪ್ರಕಾರ, ಇನ್ನೆರಡು ದಿನಗಳಲ್ಲಿ ಡಿಕೆಶಿ ಸಿಎಂ ಆಗಬೇಕು, ಇಲ್ಲದಿದ್ದರೆ ಈ ಜನ್ಮದಲ್ಲಿ ಆ ಯೋಗವಿಲ್ಲ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Mysore swamiji say DK Shivakumar should become CM in the next two days

ಇನ್ನೂ ಡಿಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಮೈಸೂರಿನಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜ್ಯಲಕ್ಷ್ಮಿ ಪೀಠ ಪ್ರಾಪ್ತ್ಯರ್ಥ ಸಂಕಲ್ಪ ಪೂಜೆ ನೆರನೇರಿಕೆ ಮಾಡಲಾಗಿದೆ.. ಗಣಪತಿ ಹಾಗೂ ಲಲಿತಾ ತ್ರಿಪುರಸುಂದರಿ ದೇವಿಗೆ ಪೂಜೆ ಮಾಡಲಾಗಿದೆ. ಪೂಜೆ ಮೂಲಕ ಮುಖ್ಯಮಂತ್ರಿ ಪದವಿ ಪ್ರಾಪ್ತಿಗೆ ಸಂಕಲ್ಪ ಮಾಡಿಕೊಳ್ಳಲಾಗಿದೆ. ನವಗ್ರಹ ಸಹಿತ ಬಲಮುರಿ‌ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲಾಗಿದೆ

ಇನ್ನು ಎರಡು ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಅದಕ್ಕಾಗಿ ಸಂಕಲ್ಪ ಪೂಜೆ ಮಾಡಿದ್ದೇವೆ. ದೇವಿ ಕೂಡ ಬಲಗಡೆಯಿಂದ ಹೂ ವರ ಕೊಟ್ಟು ಆಶಿರ್ವಾದ ಮಾಡಿದ್ದಾಳೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಖಂಡಿತ ಮುಖ್ಯಮಂತ್ರಿ ಆಗುತ್ತಾರೆ. ಇದು ನೂರಕ್ಕೆ ಸಾವಿರ ಪಟ್ಟು ಆಗುತ್ತೆ‌. ಯಾರು ಏನೇ ಮಾಡಿದರೂ ದೈವ ಸಂಕಲ್ಪದ ಮುಂದೆ ಯಾವುದೂ ನಡೆಯೋದಿಲ್ಲ ಎಂದು ಮೈಸೂರಿನಲ್ಲಿ ಲಲಿತಾ ಭಾರತಿ ವಿಜಯೇಂದ್ರ ತೀರ್ಥ ಗುರುಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+