Pramod Mutalik: ಅಯೋಧ್ಯೆಗೆ ತೆರಳುವವರ ಮೇಲೆ ಮುಸ್ಲಿಂರಿಂದ ಗಲಭೆ ಮಾಡಿಸಲು ಹೇಳಿರಬಹುದು: ಮುತಾಲಿಕ್
ಬೆಂಗಳೂರು, ಜನವರಿ 04: ಕಾಂಗ್ರೆಸ್ ನಾಯಕರಿಂದ ಹಿಂದೂಗಳ ಮತ್ತು ಅಯೋಧ್ಯೆಗೆ ತೆರಳುವವರಲ್ಲಿ ಭೀತಿ ಮೂಡಿಸುವ ಕೆಲಸ ಆಗುತ್ತಿದೆ. ಗೋದ್ರಾ ಮಾದರಿಯಲ್ಲಿ ಗಲಭೆಯಾಗಲಿದೆ ಎನ್ನುವ ಮೂಲಕ ಹಿಂದೂಗಳನ್ನು ಹೆದರಿಸುವ ಕೆಲಸವಿದು ಎಂದು ಶ್ರೀರಾಮ್ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲೀಕ್ ಹೇಳಿದರು.
ರಾಮಜನ್ಮಭೂಮಿ ಪ್ರಕರಣದಲ್ಲಿ ಬಂಧಿತರಾಗಿರುವ ಶ್ರಿಕಾಂತ್ ಪೂಜಾರಿ ಅವರ ಹುಬ್ಬಳ್ಳಿಯಲ್ಲಿ ನಾರಾಯಣ ಪೇಟೆಯಲ್ಲಿನ ನಿವಾಸಕ್ಕೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯೂ ಕೂಡ ಹಿಂದುಗಳು ಹಾಗೂ ಅಯೋಧ್ಯೆಗೆ ತೆರಳುವವರಲ್ಲಿ ಭೀತಿ ಮೂಡಿಸುತ್ತಿದೆ. ಗೋದ್ರಾ ಮಾದರಿಯಲ್ಲಿ ಗಲಭೆಯಾಗಲಿದೆ ಎನ್ನುವ ಮೂಲಕ ಹಿಂದೂಗಳನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಗೋದ್ರಾ ಘಟನೆಯಲ್ಲಿ ಪಾಲ್ಗೊಂಡವರು ಯಾರು? ಇದೀಗ ಅಯೋಧ್ಯಕ್ಕೆ ಹೋಗುವ ರೈಲಿನ ಮೇಲೆ ಮುಸ್ಲಿಂರ ಮೂಲಕ ಗಲಭೆ ಮಾಡಿಸುವ ಹೇಳಿಕೆ ಇರಬಹುದು ಎಂದು ತಿರುಗೇಟು ಕೊಟ್ಟ ಮುತಾಲಿಕ್, ಮೊದಲು ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಎಂ, ಗೃಹ ಸಚಿವರು ದಾರಿ ತಪ್ಪಿಸುತ್ತಿದ್ದಾರೆ
ಶ್ರೀಕಾಂತ್ ಪೂಜಾರಿ ದುಡಿಯುವ ವ್ಯಕ್ತಿ. ಆತನ ಬಿಡುಗಡೆ ಕುರಿತು ಕುಟುಂಬದವರು ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಆತನನ್ನು ಅಮಾನವೀಯವಾಗಿ ಬಂಧನ ಮಾಡಿದ್ದನ್ನು ಶ್ರೀರಾಮ್ ಸೇನೆ ಖಂಡಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರು ಸೇರಿ ಹಲವು ಸ್ಥಳೀಯ ನಾಯಕರು ದಾರಿ ತಪ್ಪಿಸುತ್ತಿದ್ದಾರೆ. ಅಬ್ಬಯ್ಯನೋ, ಅಬ್ದುಲ್ಲಾನೋ (ಪ್ರಸಾದ್ ಅಬ್ಬಯ್ಯ) ಅವರು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಶ್ರೀಕಾಂತ್ ಪೂಜಾರಿ ಅಪರಾಧಿ ಅಲ್ಲ
ಶ್ರೀಕಾಂತ್ ಪೂಜಾರಿ ಅವರು ಎಲ್ಲ ಕೇಸ್ ಗಳಲ್ಲೂ ಆತ ನೀರ್ದೋಷಿಯಾಗಿ ಹೊರ ಬಂದಿದ್ದಾರೆ. 1992 ನಂತರ 13 ಕೇಸ್ ಗಳು ಆಗಿವೆ. ನ್ಯಾಯಾಲಯ ಅವರನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿದೆ. ಹೀಗಿದ್ದರೂ ದಾರಿ ತಪ್ಪಿಸುವ ಕೆಲಸವಾಗುತ್ತಿದೆ.

ಕಾಂಗ್ರೆಸ್ ವ್ಯವಸ್ಥಿತವಾಗಿ ಸುಳ್ಳು ಕೇಸ್ ಹಾಕಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನನ್ನ ಮೇಲೆ 110 ಕೇಸ್ ಇವೆ, ನನ್ನನ್ನು ಗಲ್ಲಿಗೆ ಏರಿಸಬೇಕಿತ್ತು. ಹಾಗಾದ್ರೆ ನಾನು ಕೂಡ ಗುಂಡಾ ನಾ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ರಾಮಮಯ ಸಹಿಸದ ಕಾಂಗ್ರೆಸ್: ಮುತಾಲಿಕ್
ಬೇರೆಯವರು ದುಡ್ಡು ಕೊಟ್ಟಿದ್ದಾರೆ ಅದಕ್ಕೆ ಬಂಧನ ಅವರನ್ನು ಮಾಡಿಲ್ಲ. ಇವರಿಗೆ ದುಡ್ಡು ಕೊಡಲು ಆಗಿಲ್ಲ ಅದಕ್ಕೆ ಇವರನ್ನು ಬಂಧಿಸಿದ್ದಾರೆ. ದೊಂಬಿ ಕೇಸ್ ಅಂತಾ ಹಾಕಿದ್ದಾರೆ. ಯಾವ ಆಧಾರದ ಮೇಲೆ ದೊಂಬಿ ಪ್ರಕರಣ ಎಂದು ಹೇಳುತ್ತಿದ್ದಾರೆ. ದೇಶವೇ ರಾಮಮಯವಾಗುತ್ತಿದೆ. ಇದನ್ನು ಸಹಿಸಕೊಳ್ಳದೇ ಹೊಟ್ಟೆ ಉರಿಗೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇವರಿಗೆ ಲೋಕಸಭಾ ಚುನಾವಣೆ ಭಯ ಶುರುವಾಗಿದೆ. ಬಂಧಿತ ಪೂಜಾರಿ ರೌಡಿ ಶೀಟರ್ ಅಲ್ಲಾ, ಅಪರಾಧಿ ಅಲ್ಲಾ ಮುಖ್ಯಮಂತ್ರಿಗಳೇ ಆರೋಪಿ. ಕೋರ್ಟ್ ಇವರನ್ನು ಯಾವ ಪ್ರಕರಣದಲ್ಲೂ ಅಪರಾಧಿ ಎಂಧು ಹೇಳಿಲ್ಲ. ನಿಮ್ಮ ಟಾರ್ಗೆಟ್ ಟಾರ್ಗೆಟ್ ಹಿಂದುತ್ವ, ರಾಮ ಭಕ್ತರ ಮೇಲೆ ಎಂದು ತಿಳಿಸಿದರು.
ತಾಕತ್ತಿದ್ದವರು ಹಿಂದೂರಾಷ್ಟ್ರ ಮಾಡುವುದನ್ನು ತಡೆಯಿರಿ
ಅಪ್ಪನ ಲುಂಗಿ ಹಿಡಕೊಂಡು ಬಂದವರು ಇವರು. ಭಾರತವು ಸಹ ಪಾಕಿಸ್ತಾನ್, ಅಪಘಾನಿಸ್ಥಾನ ರೀತಿ ಆಗುತ್ತದೆ ಎಂದರೆ ಇಲ್ಲಿ ಆರ್ಥಿಕ ದಿವಾಳಿ ಆಗಿದೆ ಅಂತಾನಾ?. ನಾವು ಹಿಂದೂ ರಾಷ್ಟ್ರ ಮಾಡೇ ಮಾಡತ್ತೇವೆ. ತಾಕತ್ತು ಇರುವವರು ತಡೆಯಿರಿ ನೋಡೋಣ ಎಂದು ಮುತಾಲಿಕ್ ಸವಾಲು ಹಾಕಿದರು.
ಇನ್ನೂ ಈ ಪ್ರಕರಣ ಸಂಬಂಧ ಪೂಜಾರಿ ಅವರನ್ನು ಜೈಲಿಗೆ ಹೋಗಿ ಭೇಟಿ ಮಾಡುತ್ತೇನೆ. ಕೋರ್ಟ್ ಪ್ರೊಸೆಸ್ ಇರುವುದರಿಂದ ಯಾವ ಸರ್ಕಾರವು ಕೇಸ್‌ನ್ನು ಹಿಂಪಡೆಯಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಲ್ಲದೇ ಅವರಿಗೆ ಜಾಮೀನು ಸಿಕ್ಕ ನಂತರ ಕೇಸ್ ರದ್ದಿಗೆ ಮನವಿ ಮಾಡುತ್ತೇನೆ ಎಂದರು.
ನಂತರ ಅವರು ಹುಬ್ಬಳ್ಳಿಯ ಚನ್ನಪೇಟನಲ್ಲೆ ಇರುವ ಮತ್ತೊಬ್ಬ ಹೋರಾಟಗಾರನ ಮನೆಗೆ ಭೇಟಿ ನೀಡಿದರು. ಪ್ರಕರಣದಲ್ಲಿ ಎಂಟನೇ ಆರೋಪಿ ಎನ್ನಲಾಗುತ್ತಿರುವ 77 ವರ್ಷದ ವಯಸ್ಸಿನ ರಾಮಚಂದ್ರ ಕಲಬುರ್ಗಿ ಮನೆಗೆ ಭೇಟಿ ನೀಡಿದ ಮುತಾಲಿಕ್ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications