ಬಂಡವಾಳ ಹೂಡಿಕೆದಾರರ ಸಮಾವೇಶ: 7.6ಲಕ್ಷ‌ ಕೋಟಿ ಒಪ್ಪಂದಕ್ಕೆ ಸಹಿ

ಬೆಂಗಳೂರು, ನವೆಂಬರ್‌2: ಕೈಗಾರಿಕಾ ಇಲಾಖೆಯಲ್ಲಿ ಇಂದು ನೆನಪಿಡಬೇಕಾದ ದಿನ. 2010ರಲ್ಲಿ ಇದೇ ಜಾಗದಲ್ಲಿ ಹೂಡಿಕೆ ಸಮಾವೇಶ ಮಾಡಿದ್ದೆವು. 3.8 ಲಕ್ಷ ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ್ದೆವು. 2013 ರಲ್ಲಿ 7.6 ಲಕ್ಷ‌ ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದೆವು. ಇಂದು ನಡೆಯುತ್ತಿರುವ ಸಮಾವೇಶದಲ್ಲಿ 7.6 ಲಕ್ಷ ಕೋಟಿಗಿಂತ ಹೆಚ್ಚು ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾದ ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸಮಾವೇಶದ ಮೊದಲ ದಿನದ ಬಗ್ಗೆ ಮಾತನಾಡಿದ್ದಾರೆ.

ನವೆಂಬರ್‌ 4ರಂದು ಸಮಾರೋಪ ಸಮಾರಂಭ ಕಾರ್ಯಕ್ರಮದಂದು ಸಂಪೂರ್ಣ ಮಾಹಿತಿ ನೀಡುತ್ತೇವೆ. ಆಹ್ವಾನ ನೀಡಿದ ಎಲ್ಲ ಅತಿಥಿಗಳು ಇಂದು ಸಮಾವೇಶಕ್ಕೆ ಹಾಜರಾಗಿದ್ದರು. ಪ್ರಧಾನಿಗಳು 10.30 ವರ್ಚುವಲ್ ಮೂಲಕ ಭಾಗಿಯಾಗಿದ್ದರು. ಮೊದಲ ದಿನ ಬಹಳ ಅಚ್ಚುಕಟ್ಟಾಗಿ ನಡೆದಿದೆ ಎಂದರು.

Murugesh Nirani Reaction On Global Investors Meet

ಇನ್ನು ಎಲ್ಲಾ ಹೂಡಿಕೆದಾರರು ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ರಿನೆವೆಬಲ್ ಎನರ್ಜಿ,ಮತ್ತು ಬಿಯಾಂಡ್ ಬೆಂಗಳೂರು ಬಗ್ಗೆ ಅತಿ ಹೆಚ್ಚು ಹೂಡಿಕೆ ಬಂದಿದೆ. 2ನೇ ಹಂತದ ನಗರಗಳಲ್ಲಿ ಹೂಡಿಕೆ ಬಂದಿರುವುದು ಖುಷಿ. ಇದೇ ವರ್ಷ ಶಿವಮೊಗ್ಗ, ಹಾಸನ, ವಿಜಯಪುರದಲ್ಲಿ ವಿಮಾನ ನಿಲ್ದಾಣ ಬರಲಿದೆ. ವಿಮಾನ ನಿಲ್ದಾಣ ನಿರ್ಮಾಣ, ರೈಲ್ವೇ ಅಭಿವೃದ್ಧಿ ಬಗ್ಗೆ ನಮ್ಮ ಸರ್ಕಾರ ಗಮನ ಹರಿಸಿದೆ

ಒಡಂಬಡಿಕೆಗಳು ಹೆಚ್ಚು ಅನುಷ್ಠಾನವಾಗುವ ನೀರಿಕ್ಷೆ ಇದೆ. ಈ ಹಿಂದಿನ ಹೂಡಿಕೆ ಸಮಾವೇಶಕ್ಕಿಂತ ಹೆಚ್ಚಿನ ಒಪ್ಪಂದಗಳು ಈ ಬಾರಿ ಕನ್ವರ್ಷನ್ ಆಗಲಿದೆ. ಉದ್ಯಮ ಕ್ಷೇತ್ರದ ದಿಗ್ಗಜರು ಇಂದು ವೇದಿಕೆ ಅಲಂಕರಿಸಿದ್ದಾರೆ. ದುಬೈ, ದಾವೋಸ್, ಜಪಾನ್, ಜರ್ಮನಿ, ದೆಹಲಿ, ಮುಂಬೈಗಳಲ್ಲಿ ನಾವು ಶೋ ಮಾಡಿದ್ದೇವು. ನವೆಂಬರ್‌ 4ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಇನ್ನು ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವ ಗುರಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ್ದಾರೆ. ಮುಖ್ಯಮಂತ್ರಿಗಳು ಒಂದು ಟ್ರಿಲಿಯನ್ ಆರ್ಥಿಕತೆ ತಲುಪುವುದಾಗಿ ಹೇಳಿದ್ದಾರೆ. ಕರ್ನಾಟಕ ಸರ್ಕಾರ ನೂರಕ್ಕೆ ನೂರಾರಷ್ಟು ವಿವಿಧ ಸೆಕ್ಟರ್‌ನಲ್ಲಿ ಆ ಗುರಿಯನ್ನು ತಲುಪಲಿದೆ ಎನ್ನುವ ಭರವಸೆಯನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+