Munirathna Naidu: ಒಕ್ಕಲಿಗರು & ದಲಿತರನ್ನು ಹೊಡೆದು ಓಡಿಸು ಅಂತಿದ್ದರಾ ಮುನಿರತ್ನ ನಾಯ್ಡು?
ಮುನಿರತ್ನಂ ನಾಯ್ಡು ವಿರುದ್ಧ ಭಾರಿ ಗಂಭೀರ ಆರೋಪಗಳೇ ಕೇಳಿಬರುತ್ತಿವೆ. ಅದರಲ್ಲೂ ಮುನಿರತ್ನಂ ನಾಯ್ಡು ದಲಿತರು & ಒಕ್ಕಲಿಗರ ಮೇಲೆ ಎಷ್ಟೆಲ್ಲಾ ದ್ವೇಷ ಇಟ್ಟುಕೊಂಡಿದ್ದರು? ಎಂಬುದಕ್ಕೆ ಅವರ ಜೊತೆಗಾರರ ಆರೋಪಗಳೇ ಸಾಕ್ಷಿ ಆಗುತ್ತಿವೆ. ಅದರಲ್ಲೂ ಮುನಿರತ್ನಂ ನಾಯ್ಡು ಮನೆ ಮುಂದೆ, ಶಾಸಕರ ಸಹಾಯ ಕೇಳಿಕೊಂಡು ಬರುತ್ತಿದ್ದವರನ್ನು ಜಾತಿ ಕೇಳಿ ಮಾತನಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಒಕ್ಕಲಿಗರು & ದಲಿತರನ್ನ ಹೊಡೆದು ಓಡಿಸು ಅಂತಿದ್ದರಂತೆ ಶಾಸಕ ಮುನಿರತ್ನಂ ನಾಯ್ಡು ಅವರು! ಹಾಗಾದ್ರೆ ಹೀಗೆ ಆರೋಪ ಮಾಡಿದ್ದು ಯಾರು?
ಕನ್ನಡ ನಾಡಿನ ಜನ ಪ್ರತಿನಿಧಿ ಮಾಡಿದ ತಪ್ಪಿನ ಕಾರಣ ಈಗ, ಕನ್ನಡ ನಾಡಿನ ಮಾನಕ್ಕೆ ಕೂಡ ಧಕ್ಕೆ ಎದುರಾಗಿದೆ ಎನ್ನುವ ಗಂಭೀರವಾದ ಆರೋಪ ಇದೀಗ ದೇಶಾದ್ಯಂತ ಕೇಳಿ ಬರುತ್ತಿದೆ. ಕರ್ನಾಟಕದ ಶಾಸಕ ಮುನಿರತ್ನಂ ನಾಯ್ಡುಗೆ ಸಂಬಂಧಿಸಿದ ಆಡಿಯೋ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ವೈರಲ್ ಆಗುತ್ತಿದೆ, ಹಾಗೇ ಆಕ್ರೋಶವೂ ವ್ಯಕ್ತವಾಗಿದೆ. ಮುನಿರತ್ನಂ ನಾಯ್ಡು ದಲಿತರು & ಒಕ್ಕಲಿಗರನ್ನ ನಿಂದಿಸಿದ್ದಾರೆ ಎಂಬ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಮುನಿರತ್ನಂ ನಾಯ್ಡು ಬಗ್ಗೆ ಈಗ ಮತ್ತಷ್ಟು ಗಂಭೀರವಾದ ಆರೋಪಗಳು ಕೇಳಿ ಬರುತ್ತಿದ್ದು, ಒಕ್ಕಲಿಗರು & ದಲಿತರನ್ನು ಹೊಡೆದು ಓಡಿಸು ಅಂತಿದ್ದರಾ ಶಾಸಕ ಮುನಿರತ್ನ ನಾಯ್ಡು?

ದಲಿತರನ್ನು ಬೈಯುತ್ತಿದ್ದ ಶಾಸಕ ನಾಯ್ಡು?
ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನಂ ನಾಯ್ಡು ವಿರುದ್ಧ ಒಂದೊಂದೇ ಗಂಭೀರ ಆರೋಪ ಇದೀಗ ಹೊರ ಬರುತ್ತಿವೆ. ಈ ಆರೋಪಗಳು ಕನ್ನಡ ನಾಡಲ್ಲಿ ಸಂಚಲನ ಸೃಷ್ಟಿಸಿವೆ. ಮುನಿರತ್ನಂ ನಾಯ್ಡು ಮೊದಲಿನಿಂದ ಕೂಡ ತಮ್ಮ ಕೆಟ್ಟ ಕೆಟ್ಟ ಭಾಷೆಗೆ ಫೇಮಸ್, ಹೀಗೆ ಅವರ ಮನೆ ಮುಂದೆ ಒಕ್ಕಲಿಗರು & ದಲಿತರು ಹೋದ್ರೆ ಅವರನ್ನ ಶಾಸಕ ಮುನಿರತ್ನಂ ನಾಯ್ಡು ಕೆಟ್ಟದಾಗಿ ಬೈಯುತ್ತಾರೆ ಅನ್ನೋದು ಮಾಜಿ ಕಾರ್ಪೋರೇಟರ್ & ಸ್ವತಃ ಮುನಿರತ್ನ ಅವರ ಆಪ್ತನಾಗಿದ್ದ ವೇಲು ನಾಯ್ಕರ್ ಆರೋಪ.
ಹೀಗಿದ್ದಾಗಲೇ ಮುನಿರತ್ನಂ ನಾಯ್ಡು ಆಂಧ್ರಗೆ ಎಸ್ಕೇಪ್ ಆಗುತ್ತಿದ್ದರು ಎನ್ನುವಾಗ ಕರ್ನಾಟಕದ ಪೊಲೀಸರು ಚೇಸ್ ಮಾಡಿ, ಸಿನಿಮೀಯ ರೀತಿ ಅರೆಸ್ಟ್ ಕೂಡ ಮಾಡಿದ್ದರು. ಮತ್ತೊಂದು ಕಡೆ ಮುನಿರತ್ನಂ ನಾಯ್ಡು ತಮ್ಮ ಮನೆ ಎದುರು ಬರುತ್ತಿದ್ದ ಜನರ ಜಾತಿ ಕೇಳಿ, ದಲಿತರನ್ನ ಹೊಡಿ ಎನ್ನುತ್ತಿದ್ದರು ಎಂಬ ಭಾರಿ ಗಂಭೀರ ಆರೋಪ ಈಗ ಕೇಳಿಬಂದಿದೆ. ಇದ ಜೊತೆ ಒಕ್ಕಲಿಗರು ಅಥವಾ ಗೌಡರು ಮುನಿರತ್ನಂ ನಾಯ್ಡು ಮನೆ ಬಳಿಗೆ ಬಂದರೆ, ಎರಡು ಬಿಡು ಅಂತಿದ್ದರು ಎಂದು ವೇಲು ನಾಯ್ಕರ್ ಆರೋಪಿಸಿದ್ದಾರೆ.
ಒಕ್ಕಲಿಗ ಸಮುದಾಯ VS ಮುನಿರತ್ನಂ?
ಒಟ್ನಲ್ಲಿ ಶಾಸಕ ಮುನಿರತ್ನಂ ನಾಯ್ಡು ಮೇಲೆ ಒಂದಾದ ನಂತರ ಒಂದು ಸಂಕಷ್ಟ ಇದೀಗ ಎದುರಾಗುತ್ತಿದೆ. ಅದರಲ್ಲೂ ಮುನಿರತ್ನಂ ನಾಯ್ಡು ಅಶ್ಲೀಲವಾಗಿ ಮಾತನಾಡಿದ್ದಾರೆ ಎಂಬ ಆರೋಪ ಇರುವ, ಆಡಿಯೋ ಒಂದು ಸಂಚಲನ ಸೃಷ್ಟಿ ಮಾಡಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ದಲಿತರನ್ನು ನಿಂದಿಸಿರುವ ಆರೋಪ ಹೊತ್ತಿರುವ ಮುನಿರತ್ನಂ ನಾಯ್ಡು ಜೈಲಿಗೆ ಶಿಫ್ಟ್ ಆಗುತ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಶಾಸಕ ಮುನಿರತ್ನಂ ನಾಯ್ಡು ವಿರುದ್ಧ ಒಕ್ಕಲಿಗ ಸಮುದಾಯ ಕೂಡ ಆಕ್ರೋಶ ಹೊರ ಹಾಕಿದ್ದು, ತೀವ್ರ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದೆ.












Click it and Unblock the Notifications