ಕರ್ನಾಟಕ; ಸೆ.12 ರಿಂದ ಈ ಮಾರ್ಗದಲ್ಲಿ ರೈಲುಗಳ ಸಂಚಾರ
ಬೆಂಗಳೂರು, ಸೆಪ್ಟೆಂಬರ್ 07 : ನೈಋತ್ಯ ರೈಲ್ವೆ ಸೆಪ್ಟೆಂಬರ್ 12ರಿಂದ ವಿವಿಧ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಆರಂಭಿಸಲಿದೆ. ಕರ್ನಾಟಕ ಸರ್ಕಾರದ ಮನವಿಯಂತೆ ಈ ರೈಲುಗಳು ಸಂಚಾರ ನಡೆಸಲಿವೆ.
Recommended Video
ಈ ಹಿಂದಿನ ವೇಳಾಪಟ್ಟಿಯಂತೆಯೇ ರೈಲುಗಳು ಸಂಚಾರ ನಡೆಸಲಿವೆ. ಆದರೆ, ಕೆಲವು ನಿಲ್ದಾಣಗಳನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ಕೆಎಸ್ಆರ್ ಬೆಂಗಳೂರು-ಮೈಸೂರು-ಕೆಎಸ್ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸಹ ಸಂಚಾರ ಆರಂಭಿಸಲಿದೆ. ರೈಲು ನಂಬರ್ 06539/06540 ಭಾನುವಾರ ಹೊರತುಪಡಿಸಿ ಉಳಿದ ದಿನ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ಬೆಂಗಳೂರು ನಗರದಿಂದ ಸಂಜೆ 5.20ಕ್ಕೆ ಹೊರಡುವ ರೈಲು 8.20ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 6.10ಕ್ಕೆ ಹೊರಡುವ ರೈಲು, 9.15ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.
ರೈಲುಗಳ ಪಟ್ಟಿ
* ಬೆಂಗಳೂರು ಕಂಟೈನ್ಮೆಂಟ್-ಗೌಹಾತಿ-ಬೆಂಗಳೂರು ಕಂಟೈನ್ಮೆಂಟ್ ವಿಶೇಷ ರೈಲು (02509-02510)
* ಯಶವಂತಪುರ-ಬಿಕನೇರ್-ಯಶವಂತಪುರ ಎಕ್ಸ್‌ಪ್ರೆಸ್ (06587/06588)
* ಮೈಸೂರು-ಜೈಪುರ-ಮೈಸೂರು ವಿಶೇಷ ಎಕ್ಸ್‌ಪ್ರೆಸ್ (02975/02976)
* ಮೈಸೂರು-ಸೊಲ್ಹಾಪುರ-ಮೈಸೂರು ವಿಶೇಷ ಎಕ್ಸ್‌ಪ್ರೆಸ್ (06535/06536)
* ಗೋರಖ್‌ಪುರ-ಯಶವಂತಪುರ-ಗೋರಖ್‌ಪುರ ವಿಶೇಷ ಎಕ್ಸ್‌ಪ್ರೆಸ್ (02591/02592)
* ಕೆಎಸ್‌ಆರ್ ಬೆಂಗಳೂರು-ನವದೆಹಲಿ-ಕೆಎಸ್‌ಆರ್ ಬೆಂಗಳೂರು ವಿಶೇಷ ರೈಲು (02627/02628)












Click it and Unblock the Notifications