ಮುಂದಿನ 7 ದಿನ ಬರೀ ಮಳೆ.. ಮಳೆ.. ಮಳೆ.. ಹೊರಗೆ ಹೋಗುವಾಗ ಹುಷಾರ್!

ಮಳೆರಾಯ ಸರಿಯಾಗಿ ಬಾರಿಸುತ್ತಿದ್ದಾನೆ, ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗೂ ಇದೀಗ ಭರ್ಜರಿ ಮುಂಗಾರು ಮಳೆ ಬೀಳುತ್ತಿದೆ. ಈ ಮೂಲಕ ಕರ್ನಾಟಕ ರಾಜ್ಯದಲ್ಲಿ ಈಗ ಜೀವಜಲ ಅಂದ್ರೆ ನೀರಿಗೆ ಎದುರಾಗಿದ್ದ ಬರ ಸರಿಯಾಗಿದ್ದು, ಮುಂದಿನ ಒಂದು ವಾರ ಅಂದ್ರೆ ಬರೋಬ್ಬರಿ 7 ದಿನ ಕಾಲ ಇದೇ ರೀತಿ ಮಳೆ ಬರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬೀಳಲಿದೆ? ಮುಂದೆ ಓದಿ.

ಕರ್ನಾಟಕದ ಮಂದಿ ಮಳೆ ಇಲ್ಲದೆ ನರಳಿ ಹೋಗಿದ್ದರು, ಅದರಲ್ಲೂ ಬಯಲು ಸೀಮೆಯ ಭಾಗದಲ್ಲಿ ಈ ವರ್ಷ ಬೇಸಿಗೆಗೆ ಮೊದಲೇ ನೀರು ಸಿಗದೆ ಪರದಾಟ ಶುರುವಾಗಿತ್ತು. ಹಾಗಂತಾ ವಿಪರೀತ ಮಳೆ ಬೀಳುವ ಮಲೆನಾಡು ಜಿಲ್ಲೆಗಳಲ್ಲಿ ಕೂಡ ಸರಿಯಾಗಿ ನೀರು ಸಿಗುತ್ತಿರಲಿಲ್ಲ. ಆದರೆ 2024ರ ಬೇಸಿಗೆ ಮುಗಿದು ಮುಂಗಾರು ಮಳೆಯ ಆರ್ಭಟ ಶುರುವಾಗಿದ್ದು, ಕನ್ನಡಿಗರಿಗೆ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಅದರಲ್ಲೂ ಮುಂದಿನ 7 ದಿನಗಳ ಕಾಲ ಈ ಜಿಲ್ಲೆಗಳಿಗೆ ಭಾರಿ ಮಳೆ ಬೀಳುವ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಹಾಗಾದ್ರೆ ಮುಂದಿನ 7 ದಿನಗಳ ಕಾಲ ಮಳೆ ಬೀಳಲಿರುವ ಕರ್ನಾಟಕದ ಜಿಲ್ಲೆಗಳು ಯಾವುವು? ಮುಂದೆ ಓದಿ.

Monsoon Rain Alert For Karnataka State On 4th July 2024

ಭರ್ಜರಿ ಮಳೆ ಬೀಳುವ ಜಿಲ್ಲೆಗಳು!

ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳಲ್ಲಿ ಇದೇ ಸಮಯದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮುಂದಿನ 1 ವಾರ ಕಾಲ ಇಲ್ಲಿ ಭಾರಿ ಮಳೆ ಬೀಳುವ ಎಚ್ಚರಕೆ ನೀಡಲಾಗಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಭಾರಿ ಮಳೆ ಬಿದ್ದಿದೆ. ಹೀಗಿದ್ದಾಗ ಮತ್ತೊಮ್ಮೆ ಭೀಕರ ಮಳೆಯ ಕುರಿತು ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಹಾಗಾದ್ರೆ ಕರ್ನಾಟಕದ ಬೇರೆ ಯಾವ ಯಾವ ಜಿಲ್ಲೆಗಳಿಗೆ ಮಳೆ ಬರಲಿದೆ ಗೊತ್ತಾ? ಬನ್ನಿ ತಿಳಿಯೋಣ.

ನೀರಿನ ಕೊರತೆಗೆ ಸಿಕ್ಕಿತಾ ಮುಕ್ತಿ?

ರಾಜಧಾನಿ ಬೆಂಗಳೂರು ಸೇರಿದಂತೆ ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ & ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಲಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಸೇರಿ ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ ಜಿಲ್ಲೆಯ ಬಹುತೇಕ ಭಾಗದಲ್ಲಿ ಭರ್ಜರಿ ಮಳೆ ಆಗಲಿದೆ. ಈ ಮೂಲಕ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಇದೀಗ ನೀರಿನ ಕೊರತೆ ನೀಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+