ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋತಿಗಳ ಹಾವಳಿ ತಡೆಗೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಿ-ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು,ಆ.22. ರಾಜ್ಯದ ಹಲವು ನಗರ/ಪಟ್ಟಣಗಳಲ್ಲಿರುವ ಮಂಗಗಳ ಹಾವಳಿಯಿಂದ ಬೇಸತ್ತಿರುವ ಜನತೆಗೆ ಹೈಕೋರ್ಟ್ ಸಿಹಿ ಸುದ್ದಿ ನೀಡಿದೆ.

ಅಲ್ಲಿನ ಕೋವಿಗಳ ಕಾಟ ನಿಯಂತ್ರಿಸಲು ಅಯಾ ನಗರ ಸ್ಥಳೀಯ ಸಂಸ್ಥೆಗಳು ರಾಜ್ಯ ಸರ್ಕಾರ ರೂಪಿಸಿರುವ ಮಂಗಗಳನ್ನು ಸೆರೆಹಿಡಿಯುವ ಮತ್ತು ಪುನರ್‌ ವಸತಿ ಕಲ್ಪಿಸುವ ಕುರಿತಾದ ಮಾರ್ಗಸೂಚಿ ಪರಿಣಾಮಕಾರಿ ಜಾರಿಗೊಳಿಸಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿದೆ.

ಬೆಂಗಳೂರಿಗರೇ 1533 ಒತ್ತಿರಿ: ಹಾವು, ಕೋತಿ, ಪಕ್ಷಿಗಳ ಹಾವಳಿಗೆ ದೂರು ಸಲ್ಲಿಸಿ!ಬೆಂಗಳೂರಿಗರೇ 1533 ಒತ್ತಿರಿ: ಹಾವು, ಕೋತಿ, ಪಕ್ಷಿಗಳ ಹಾವಳಿಗೆ ದೂರು ಸಲ್ಲಿಸಿ!

ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್‌ ಆಲಿಸಿದ ಹಂಗಾಮಿ ಸಿಜೆ ಅಲೋಕ್‌ ಅರಾಧೆ ನೇತೃತ್ವದ ವಿಭಾಗೀಯಪೀಠದ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿ ಅರ್ಜಿ ವಿಲೇವಾರಿ ಮಾಡಿತು.

ಎಸ್‌ಒಪಿ ಜಾರಿ: ''ಮಂಗಗಳ ನಿಯಂತ್ರಣ ಅಥವಾ ಹಾವಳಿ ತಡೆ ಸಂಬಂಧ ಸರ್ಕಾರ ಸ್ಪಷ್ಟ ಮಾರ್ಗಸೂಚಿ ರೂಪಿಸಿ,ಆ ಎಸ್‌ಒಪಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಅರಣ್ಯ ಇಲಾಖೆ ಹೇಗೆ ಮಂಗಗಳನ್ನು ಹಿಡಿಯಬೇಕು ಮತ್ತು ಆನಂತರ ಹೇಗೆ ಅವುಗಳನ್ನು ಸ್ಥಳಾಂತರ ಮಾಡಬೇಕು ಎಂಬುದನ್ನು ವಿವರಿಸಲಾಗಿದೆ. ಅದಕ್ಕಾಗಿ ವೆಬ್‌ ಸೈಟ್ ಕೂಡ ಆರಂಭಿಸಲಾಗಿದೆ ಎಂದು ಹೇಳಿದೆ.

Monkey Menace: HC asked Urban Local Bodies to implement the SOP strictly

ಅಲ್ಲದೆ ಅರಣ್ಯ ಇಲಾಖೆ/ ಬಿಬಿಎಂಪಿ/ ನಗರ ಸ್ಥಳೀಯ ಸಂಸ್ಥೆಗಳು ಮಂಗಗಳ ಹಾವಳಿ ತಡೆಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು'' ಎಂದು ಆದೇಶಿಸಿದೆ.

ಕೋತಿಗಳು ಇವೆಯಂತೆ ನಮ್ಮ ಮೆಟ್ರೋ ಬೇಗ ಬೇಗ ಹತ್ರೋ....!ಕೋತಿಗಳು ಇವೆಯಂತೆ ನಮ್ಮ ಮೆಟ್ರೋ ಬೇಗ ಬೇಗ ಹತ್ರೋ....!

ಬೆಂಗಳೂರು ಮಹಾನಗರದಲ್ಲಿನ ಮಂಗಗಳ ಹಾವಳಿ ಮತ್ತು ಬೇಲೂರಿನಲ್ಲಿ ನಡೆದ ಮಂಗಗಳ ಮಾರಣ ಹೋಮದ ಹಿನ್ನೆಲೆಯಲ್ಲಿಅತ್ತ ಮಂಗಗಳಿಂದ ಜನರಿಗೆ ಆಗುವ ಉಪಟಳವೂ ನಿಲ್ಲಬೇಕು, ಇತ್ತ ಅವುಗಳನ್ನು ಹಿಡಿಯುವುದು, ಸ್ಥಳಾಂತರ ಮತ್ತು ಪುನರ್‌ ವಸತಿ ಕಲ್ಪಿಸುವ ಕುರಿತು ಸ್ಪಷ್ಟ ನೀತಿ ರೂಪಿಸುವಂತೆ ಹೈಕೋರ್ಟ್‌ ಆದೇಶ ನೀಡಿತ್ತು.

ಈ ವೇಳೆ ನ್ಯಾಯಾಲಯ ಸುಪ್ರೀಂಕೋರ್ಟ್‌ 2014ರಲ್ಲಿ ಮಂಗಗಳಿಗೂ ಜೀವಿಸುವ ಹಕ್ಕಿದೆ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಎ.ನಾಗರಾಜು ನಡುವಿನ ಪ್ರಕರಣದಲ್ಲಿನೀಡಿದ್ದ ತೀರ್ಪು ಪಾಲನೆ ಮಾಡುವಂತೆ ನಿರ್ದೇಶನ ನೀಡಿತ್ತು. ಅದರಂತೆ ಅರಣ್ಯ ಇಲಾಖೆ ನೇತೃತ್ವದಲ್ಲಿಸರಕಾರದ ನಾನಾ ಇಲಾಖೆಗಳು ಸೇರಿ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ಮಂಗಳ ಹಾವಳಿ ನಿಯಂತ್ರಣಕ್ಕೆ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2021ರ ಆಗಸ್ಟ್‌ ನಲ್ಲಿಹಾಸನ ಜಿಲ್ಲೆಯ ಅರೆಹಳ್ಳಿ ಹೋಬಳಿ ಬಳಿಯ ಚೌಡೇನಹಳ್ಳಿಯಲ್ಲಿ 38 ಮಂಗಗಳನ್ನು ಕೊಂದು ಅವುಗಳನ್ನು ಗೋಣಿ ಚೀಲದಲ್ಲಿ ಹಾಕಲಾಗಿತ್ತು.

Monkey Menace: HC asked Urban Local Bodies to implement the SOP strictly

ಆ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ನ್ಯಾಯಾಲಯ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡು, ಇದು ಮೇಲ್ನೋಟಕ್ಕೆ 1960ರ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ಸ್ಪಷ್ಟ ಉಲ್ಲಂಘನೆ, ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ಆದೇಶಿಸಿತ್ತು. ಜೊತೆಗೆ ಬೆಂಗಳೂರು ನಗರದಲ್ಲಿನ ಕೋತಿಗಳ ಉಪದ್ರವದ ಬಗ್ಗೆ ವಕೀಲ ಬಿ.ಎಸ್‌.ರಾಧಾನಂದನ್‌ ಕೂಡ ಪಿಐಎಲ್‌ ಸಲ್ಲಿಸಿದ್ದರು.

English summary
Monkey Menace: Karnataka High Court asked Urban Local Bodies, Civic bodies strictly implement the SOPs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X