ಫೆ. 26 ಶಾಲೆ ಕಾಲೇಜು ಬಂದ್ ಗೆ ಕರೆ ನೀಡಿದ ಅತಿಥಿ ಉಪನ್ಯಾಸಕರು

ಬೆಂಗಳೂರು,ಫೆಬ್ರವರಿ,22: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಟಿ. ಬಿ ಜಯಚಂದ್ರ ಅವರ ಮೇಲೆ ಕಿಡಿಕಾರಿದ ಅತಿಥಿ ಶಿಕ್ಷಕರು ಫೆಬ್ರವರಿ 26ರ ಶುಕ್ರವಾರದಂದು ಶಾಲಾ ಕಾಲೇಜು ಬಂದ್ ಮಾಡಿ ಪ್ರತಿಭಟನೆ ನಡೆಸುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಸರಕಾರ ಕೇವಲ ನಾಲ್ಕು ತಿಂಗಳ ವೇತನವನ್ನು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಟಿ. ಬಿ ಜಯಚಂದ್ರ ಮಾತಿಗೆ ತಪ್ಪಿದ್ದಾರೆ. ನಮ್ಮ ಆಶೋತ್ತರಗಳನ್ನು ಈಡೇರಿಸುವರೆಂಬ ಕಾರಣಕ್ಕೆ ಪ್ರತಿಭಟನೆ ಕೈಬಿಟ್ಟಿದ್ದೆವು. ಆದರೆ ಸರಕಾರ ಇದುವರೆಗೂ ಸ್ಪಂದಿಸಿಲ್ಲ ಎಂದು ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ರಾಜಶೇಖರ ಮೂರ್ತಿ ಆರೋಪಿಸಿದ್ದಾರೆ.[14 ಸಾವಿರ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರದ ಶಾಕ್]

Monday News digest of Karnataka

ದೇಶವಿರೋಧಿ ಘೋಷಣೆ ಕೂಗಿದ ಬಾಗಲಕೋಟೆ ವ್ಯಕ್ತಿಯ ಬಂಧನ

ಬಾಗಲಕೋಟೆ,ಫೆಬ್ರವರಿ,22: ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಬಂಧಿಸಿದ ಘಟನೆ ಸೋಮವಾರ ಬಾಗಲಕೋಟೆಯಲ್ಲಿ ನಡೆದಿದೆ.

ರಾಷ್ಟ್ರವಿರೋಧಿ ಘೋಷಣೆ ಕೂಗಿ ಬಂಧನಕ್ಕೆ ಒಳಗಾದ ವ್ಯಕ್ತಿಯೇ ದೇವೇಂದ್ರ ಲಮಾಣಿ. ಈತ ಟಂಟಂ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಬಾಗಲಕೋಟೆ ಪೊಲೀಸರು ಈತನನ್ನು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಅಫ್ಜಲ್ ಗುರು ಪರ ಘೋಷಣೆ ಕೂಗಿದವರ ಬಂಧನ]

ರಸ್ತೆ ಬದಿಯಲ್ಲೇ ಮಗುವಿಗೆ ಜನನ

ರಾಯಚೂರು,ಫೆಬ್ರವರಿ,22: ಗರ್ಭಿಣಿಯು ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಸಹಾಯದಿಂದ ರಸ್ತೆ ಬದಿಯಲ್ಲಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ರಾಯಚೂರಿನ ಮಾನ್ವಿಯಲ್ಲಿ ಸೋಮವಾರ ನಡೆದಿದೆ.[ಮಂಗಳೂರಲ್ಲಿ ಗರ್ಭಿಣಿ ಸಾವನ್ನಪ್ಪಲು ವೈದ್ಯರು ಕಾರಣರೇ?]

ರಸ್ತೆ ಪಕ್ಕದಲ್ಲಿ ಮಗುವಿಗೆ ಜನ್ಮನೀಡಿದ ಮಹಿಳೆಯೇ ಈರಮ್ಮ. ಏಳು ತಿಂಗಳ ಗರ್ಭಿಣಿಯಾಗಿದ್ದ ಈರಮ್ಮಳನ್ನು ಆಕೆಯ ಪತಿ ಹನುಮಂತನಾಯಕ ಮಾನ್ವಿಯ ಆಸ್ಪತ್ರೆಗೆ ಹದಗೆಟ್ಟ ರಸ್ತೆಯಲ್ಲಿ ಬೈಕಿನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇದೀಗ ತಾಯಿ ಮಗು ಆರೋಗ್ಯವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+