'ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಪ್ರಧಾನಿ ಮೋದಿಯೇ ಕಾರಣ'

ನವದೆಹಲಿ, ಜುಲೈ 07: ಕರ್ನಾಟಕದ ಕೈ-ತೆನೆ ಸರ್ಕಾರ ಆಷಾಢದ ಗಾಳಿಗೆ ಸಿಲುಕಿ ನಲುಗಿ ಹೋಗಿದೆ. ಮತ್ತೊಮ್ಮೆ ಬಂಡಾಯ, ಭಿನ್ನಮತದ ಬೆಂಕಿಗೆ ಸಿಲುಕಿದೆ.

ಸದ್ಯಕ್ಕೆ ಶಾಸಕರ ಸರಣಿ ರಾಜೀನಾಮೆ ನೀಡಲು, ಸರ್ಕಾರ ಅಸ್ಥಿರಗೊಳಿಸಲು, ರಾಜಕೀಯ ಬಿಕ್ಕಟ್ಟಿಗೆ ಪ್ರಧಾನಿ ಮೋದಿ ಅವರೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿಯೇತರ ಸರ್ಕಾರ ಇರಬಾರದು ಎಂಬ ಕಾರಣಕ್ಕೆ ಆಪರೇಷನ್ ಕಮಲ ನಡೆಸಿದ್ದಾರೆ. 14ರಾಜ್ಯಗಳಲ್ಲಿ ಆಪರೇಷನ್ ಕಮಲ ನಡೆಸಿ ಅಧಿಕಾರ ಸ್ಥಾಪಿಸಿದ್ದಾರೆ. ಈಗ ಕರ್ನಾಟಕದಲ್ಲೂ ಅಕ್ರಮವಾಗಿ ಅಧಿಕಾರಕ್ಕೇರಲು ಯತ್ನಿಸುತ್ತಿದ್ದಾರೆ.

ಶನಿವಾರದಂದು 13 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದು, 224 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ -ಜೆಡಿಎಸ್ ಸರ್ಕಾರ 118 ಸದಸ್ಯ ಬಲವನ್ನು ಹೊಂದಿದೆ.

ಸರ್ಕಾರವನ್ನು ಬೀಳಿಸಲು ಮೋದಿ ಯತ್ನಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಜನಾದೇಶ ವಿರುದ್ಧವಾಗಿ ನಡೆದುಕೊಳ್ಳುವ ಬಿಜೆಪಿಗೆ ಜನರೇ ಪಾಠ ಕಲಿಸಲಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿಗೆ ಗೌರವವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸುರ್ಜೆವಾಲ ಕಿಡಿಕಾರಿದರು.

ಭಿನ್ನಮತೀಯರನ್ನು ಶಮನಗೊಳಿಸಲು ಯತ್ನ

ಭಿನ್ನಮತೀಯರನ್ನು ಶಮನಗೊಳಿಸಲು ಯತ್ನ

ಅತೃಪ್ತ, ಬಂಡಾಯವೆದ್ದ, ಭಿನ್ನಮತೀಯರನ್ನು ಶಮನಗೊಳಿಸಲು ಕುಮಾರಸ್ವಾಮಿ ಅವರು ಮತ್ತೊಂದು ಅಸ್ತ್ರ ಪ್ರಯೋಗಿಸಲು ಸಿದ್ಧರಾಗಿದ್ದು, ಅಮೆರಿಕದಿಂದ ಬೆಂಗಳೂರಿಗೆ ಬಂದ ಕೂಡಲೇ ಪ್ರಯೋಗಿಸಲಿದ್ದಾರೆ ಎನ್ನಲಾಗಿದೆ. ಸದ್ಯ ರಾಜೀನಾಮೆ ನೀಡಿರುವ ಶಾಸಕರ ಪೈಕಿ ಮುನಿರತ್ನ ಹಾಗೂ ರಾಮಲಿಂಗಾ ರೆಡ್ಡಿ ಹೊರತುಪಡಿಸಿ ಉಳಿದವರು ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ತಂಗಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕರಿಂದ ಸಭೆ

ಕಾಂಗ್ರೆಸ್ ಹಿರಿಯ ನಾಯಕರಿಂದ ಸಭೆ

ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್, ಗುಲಾಂ ನಬಿ ಅಜಾದ್, ರಣದೀಪ್ ಸುರ್ಜೆವಾಲ ಹಾಗೂ ಆನಂದ್ ಶರ್ಮ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಶಾಸಕರ ರಾಜೀನಾಮೆ ನಂತರ ಉದ್ಭವಿಸಬಹುದಾದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ, ಕಾಂಗ್ರೆಸ್ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ನಿರ್ದೇಶನ ಸಿಕ್ಕಿದೆ. ಕಾಂಗ್ರೆಸ್ಸಿನ 9 ಶಾಸಕರಷ್ಟೇ ಅಲ್ಲದೆ ಜೆಡಿಎಸ್ ನ ಮೂವರು ಶಾಸಕರು ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆ ಕರೆಯುವ ಬಗ್ಗೆ ಕೂಡಾ ಚರ್ಚೆಯಾಗಿದೆ.

ಮೈತ್ರಿ ಸರ್ಕಾರಕ್ಕೆ ಬಹುಮತವಿದೆ

ಮೈತ್ರಿ ಸರ್ಕಾರಕ್ಕೆ ಬಹುಮತವಿದೆ

ಮೈತ್ರಿ ಸರ್ಕಾರಕ್ಕೆ ಬಹುಮತವಿದೆ, ಭಿನ್ನಮತವಿರುವುದು ನಿಜ, ಈ ಬಗ್ಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು, ಪ್ರಜಾಪ್ರಭುತ್ವದಡಿಯಲ್ಲಿ ಸ್ಥಾಪಿತವಾದ ಸರ್ಕಾರವನ್ನು ಸರಣಿ ರಾಜೀನಾಮೆ, ಅಕ್ರಮವಾಗಿ ಶಾಸಕರ ಖರೀದಿ ಮೂಲಕ ಕೆಳಗಿಳಿಸಲು ಬಿಜೆಪಿ ಯತ್ನಿಸುತ್ತಿದೆ. ಹಾಡಹಗಲೆ ಕುದುರೆ ವ್ಯಾಪಾರಕ್ಕೆ ಇಳಿದಿರುವ ಬಿಜೆಪಿ ಯಾವ ನೈತಿಕತೆ ಮೇಲೆ ಸರ್ಕಾರ ರಚನೆಗೆ ಮುಂದಾಗುವುದೋ ಗೊತ್ತಿಲ್ಲ ಎಂದು ವಕ್ತಾರ ಸುರ್ಜೇವಾಲ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಯಾ ರಾಮ್ ಗಯಾ ರಾಮ್

ಆಯಾ ರಾಮ್ ಗಯಾ ರಾಮ್

ಬಿಜೆಪಿ 12 ರಾಜ್ಯಗಳಲ್ಲಿ ಆಯಾ ರಾಮ್ ಗಯಾ ರಾಮ್ ಸಂಸ್ಕೃತಿ ತಂದಿದ್ದು, ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೇರಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ತ್ರಿಪುರ, ಗೋವಾ, ಉತ್ತರಾಖಂಡ್ ಹಾಗೂ ಗುಜರಾತ್ ನಲ್ಲಿ ಇದೇ ಮಾರ್ಗ ಅನುಸರಿಸಿದ್ದಾರೆ. ಇತ್ತೀಚೆಗೆ ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಹರ್ಯಾಣ ಹಾಗೂ ಮಹಾರಾಷ್ಟ್ರದಲ್ಲೂ ವಿಪಕ್ಷ ರಹಿತ, ಬಿಜೆಪಿ ಸರ್ಕಾರ ತರಲು ಯತ್ನ ನಡೆದಿದೆ ಎಂದರು.

ಇನ್ನೊಂದೆಡೆ, ಅತೃಪ್ತ, ಬಂಡಾಯವೆದ್ದ, ಭಿನ್ನಮತೀಯರನ್ನು ಶಮನಗೊಳಿಸಲು ಕುಮಾರಸ್ವಾಮಿ ಅವರು ಮತ್ತೊಂದು ಅಸ್ತ್ರ ಪ್ರಯೋಗಿಸಲು ಸಿದ್ಧರಾಗಿದ್ದು, ಅಮೆರಿಕದಿಂದ ಬೆಂಗಳೂರಿಗೆ ಬಂದ ಕೂಡಲೇ ಪ್ರಯೋಗಿಸಲಿದ್ದಾರೆ ಎನ್ನಲಾಗಿದೆ. ಸದ್ಯ ರಾಜೀನಾಮೆ ನೀಡಿರುವ ಶಾಸಕರ ಪೈಕಿ ಮುನಿರತ್ನ ಹಾಗೂ ರಾಮಲಿಂಗಾ ರೆಡ್ಡಿ ಹೊರತುಪಡಿಸಿ ಉಳಿದವರು ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ತಂಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+