ಎಲ್ಲಾ ಮಾತುಗಳನ್ನೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿದೆ
ಬೆಂಗಳೂರು,ಡಿಸೆಂಬರ್ 21: ಇದುವರೆಗೆ ಭಾರತದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳ ಪೈಕಿ ಕೊಟ್ಟ ಅಷ್ಟೂ ಮಾತುಗಳನ್ನು ಈಡೇರಿಸಿದ ಒಂದೇ ಒಂದು ಸರ್ಕಾರವೆಂದರೆ ಅದು ಮೋದಿ ಸರ್ಕಾರ. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಎಲ್ಲಾ ಮಾತುಗಳನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ.
ಇದುವರೆಗೆ ಭಾರತದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳ ಪೈಕಿ ಕೊಟ್ಟ ಅಷ್ಟೂ ಮಾತುಗಳನ್ನು ಈಡೇರಿಸಿದ ಒಂದೇ ಒಂದು ಸರ್ಕಾರವೆಂದರೆ ಅದು ಮೋದಿ ಸರ್ಕಾರ. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಎಲ್ಲಾ ಮಾತುಗಳನ್ನೂ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿದೆ.
— BJP Karnataka (@BJP4Karnataka) December 20, 2023
ಕಾಶ್ಮೀರದ ದೀರ್ಘಕಾಲಿನ ಅಶಾಂತಿಗೆ ಕಾರಣವಾಗಿದ್ದ 370ನೇ…
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಶ್ಮೀರದ ದೀರ್ಘಕಾಲಿನ ಅಶಾಂತಿಗೆ ಕಾರಣವಾಗಿದ್ದ 370ನೇ ಅಧಿನಿಯಮ ರದ್ದತಿ, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ, ಮುಸ್ಲಿಂ ತಾಯಿ-ತಂಗಿಯರ ಶೋಷಣೆಗೆ ಬಳಸಲಾಗುತ್ತಿದ್ದ ತ್ರಿವಳಿ ತಲಾಖ್ ನಿಷೇಧ, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ಸೇರಿದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದ ವರೆಗೆ ಪ್ರಣಾಳಿಕೆಯಲ್ಲಿ ನೀಡಲಾದ ಅಷ್ಟೂ ಆಶ್ವಾನೆಗಳನ್ನೂ ಈಡೇರಿಸಿ ಜನರ ಮುಂದೆ ಹೋಗುತ್ತಿರುವ ಏಕೈಕ ಸರ್ಕಾರ ನಮ್ಮದು ಎಂದು ಹೇಳಿದೆ.

ಭಾರತೀಯರನ್ನು ದಂಡಿಸಲು ಬ್ರಿಟೀಷರು ಬಳಸಿದ ಕಾನೂನುಗಳನ್ನು ಬಳಸಿ ಇಷ್ಟು ವರ್ಷಗಳ ಕಾಲ ನಮ್ಮವರನ್ನೇ ಹತ್ತಿಕ್ಕಲಾಯಿತು. ಅದೆಲ್ಲ ಇನ್ನು ಕೊನೆಯಾಗಿ, ಎಂದೋ ನಿರ್ಮಾಣವಾಗಬೇಕಿದ್ದ ನವ ಭಾರತ ಈಗ ನಿರ್ಮಾಣವಾಗುತ್ತಿದೆ.
ಹೊಸ ಭಾರತಕ್ಕೆ ಹೊಂದುವಂತೆ ನಮ್ಮ ಕಾನೂನುಗಳೂ ಮಾರ್ಪಾಡಾಗಬೇಕು. ಅದನ್ನು ಮಾಡುವ ಕೆಲಸ ಪ್ರಧಾನಿ ಮೋದಿ ಅವರ ಸರ್ಕಾರ ಮಾಡುತ್ತಿದೆ. ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಸಂಹಿತೆ ಮಸೂದೆಗಳನ್ನು ಮಂಡಿಸುವ ಮೂಲಕ ಬಿಜೆಪಿ ಸರ್ಕಾರ 160 ವರ್ಷ ಹಳೆಯ ಕಾನೂನುಗಳನ್ನು ಬದಲಾಯಿಸಲು ಮಹತ್ವದ ಹೆಜ್ಜೆ ಇರಿಸಿದೆ.
ಬ್ರಿಟೀಷರು ಅವರ ಹಿತದೃಷ್ಟಿಯಿಂದ, ಭಾರತೀಯರನ್ನು ಹತ್ತಿಕ್ಕಲು ಮಾಡಲಾದ 1860ರ ಭಾರತೀಯ ದಂಡ ಸಂಹಿತೆ (IPC) ರದ್ದುಗೊಂಡು ಹೊಸ ಮೂರು ಕಾಯ್ದೆಗಳು ಜಾರಿಗೆ ಬರಲಿವೆ. ದಂಡ ಪ್ರಧಾನವಾಗಿದ್ದ ಕಾನೂನು ವ್ಯವಸ್ಥೆಯನ್ನು ಮೋದಿ ಸರ್ಕಾರ ನ್ಯಾಯ ಪ್ರಧಾನ ಮಾಡುತ್ತಿದೆ.

ಪ್ರಸ್ತುತ ಸಣ್ಣ-ಪುಟ್ಟ ಅಪರಾಧ ಪ್ರಕರಣಗಳು ನ್ಯಾಯಾಲಯದ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುತ್ತಿದೆ. ಹೊಸ ವ್ಯವಸ್ಥೆಯಲ್ಲಿ ಇದು ಬದಲಾಗಲಿದ್ದು ಮಾರಣಾಂತಿಕವಲ್ಲದ ಹಲ್ಲೆ, ತಳ್ಳಾಟದಂಥ ಪ್ರಕರಣಗಳ ತ್ವರಿತ ಇತ್ಯರ್ಥವನ್ನು ಖಾತರಿ ಮಾಡಲಿದೆ. ತ್ವರಿತಗತಿಯಲ್ಲಿ ನ್ಯಾಯದಾನ ಆಗುವ ಕಾರಣ ಕ್ಷಿಪ್ರವಾಗಿ ನ್ಯಾಯ ಸಿಗುವುದೂ ಅಲ್ಲದೆ ಅನಗತ್ಯ ಅಲೆದಾಟ ಕೊನೆಗಾಣಿಸಲಿದೆ.
ಆದರೆ ದೇಶದ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುವ ಕಾರ್ಯಗಳಲ್ಲಿ ತೊಡಗುವುದು ಮತ್ತು ಭಯೋತ್ಪಾದನೆಯಂಥ ಗಂಭೀರ ಪ್ರಕರಣಗಳಿಗೆ ಗಂಭೀರ ಶಿಕ್ಷೆಯನ್ನು ವಿಧಿಸಲಾಗುವುದು. ಅಲ್ಲದೆ ಆರ್ಥಿಕ ಅಪರಾಧಗಳಲ್ಲಿ ತೊಡಗುವವರು ವಿದೇಶಗಳಲ್ಲಿ ಮಾಡಿಟ್ಟ ಆಸ್ತಿಯನ್ನೂ ಜಪ್ತಿ ಮಾಡುವ ಅಧಿಕಾರ ಹೊಸ ಕಾನೂನು ನೀಡಲಿದೆ.
ಹೊಸ ಭಾರತದ ಹೊಸ ಕಾನೂನು ವ್ಯವಸ್ಥೆ ಜನಸ್ನೇಹಿಯಾಗಿದ್ದು, ಮಹಿಳಾ ಪ್ರಧಾನವಾಗಿರುವಂತೆ ಬಿಜೆಪಿ ಸರ್ಕಾರ ಖಾತರಿ ಮಾಡಿದೆ. ಯಾವ ಠಾಣೆಯಲ್ಲಿ ಬೇಕಾದರೂ ಎಫ್‌ಐಆರ್ ದಾಖಲು ಮಾಡುವ ಹಕ್ಕನ್ನು ಜನ ಸಾಮಾನ್ಯರಿಗೆ ನೀಡಲಿದೆ. ಮಹಿಳೆಯರ ಗೌರವಕ್ಕೆ ಚ್ಯುತಿ ಬರುವ ಅಪರಾಧಗಳಿಗೆ ಗಂಭೀರ ಶಿಕ್ಷೆ ವಿಧಿಸುವುದು, ಅಂಥ ಪ್ರಕರಣಗಳಲ್ಲಿ ಮಹಿಳೆಯರ ಹೇಳಿಕೆಯನ್ನು ಮಹಿಳಾ ಅಧಿಕಾರಿಯ ಸಮಕ್ಷಮದಲ್ಲೇ ಪಡೆಯಬೇಕು ಎಂಬ ನಿಯಮ ಮತ್ತು ಮಹಿಳೆ ಇಚ್ಛಿಸಿದರೆ ಕುಟುಂಬದ ಯಾರಾದರೂ ಸದಸ್ಯರು ಉಪಸ್ಥಿತಿಯಲ್ಲಿರಬಹುದಾದ ಆಯ್ಕೆಯನ್ನು ಹೊಸ ಕಾನೂನು ನೀಡಲಿದೆ.
ಜತೆಗೆ ಎಫ್‌ಐಆರ್‌ನಿಂದ ಹಿಡಿದು, ವಿಚಾರಣೆಯೂ ಒಳಗೊಂಡು ತೀರ್ಪು ನೀಡುವವರೆಗೆ ಎಲ್ಲಾ ಹಂತಗಳನ್ನೂ ಡಿಜಿಟಲ್ ದಾಖಲೀಕರಣ ಮಾಡುವುದು ಕಡ್ಡಾಯ. ಹೊಸ ವ್ಯವಸ್ಥೆಯು ಎಲ್ಲಾ ರೀತಿಯ ಡಿಜಿಟಲ್ ದಾಖಲೆಗಳನ್ನೂ ಅಧಿಕೃತ ಎಂದು ಪರಿಗಣಿಸುವುದಲ್ಲದೆ ನ್ಯಾಯ ವಿಚಾರಣೆಯ ವಿಡಿಯೋ ರೆಕಾರ್ಡಿಂಗ್ ಕೂಡ ಪ್ರಕರಣಕ್ಕೆ ಸಂಬಂಧಿಸಿದವರಿಗೆ ನೀಡಲಾಗುತ್ತದೆ.
ಏಳು ವರ್ಷಗಳಿಗಿಂತ ಹೆಚ್ಚು ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ನ್ಯಾಯವಿಜ್ಞಾನ ಶಾಸ್ತ್ರ (ಫೊರೆನ್ಸಿಕ್ ಸೈನ್ಸ್) ಬಳಕೆ ಕಡ್ಡಾಯವಾಲಿದ್ದು ಅಪರಾಧಿ ಪತ್ತೆಗೆ ಸಹಕಾರಿಯಾಗಿ ನಿರಪರಾಧಿಗಳ ರಕ್ಷಣೆಗೆ ಪೂರಕವಾಗಲಿದೆ ಎಂದು ಬಿಜೆಪಿ ಹೇಳಿದೆ.
ಇದೇ ಕಾಂಗ್ರೆಸ್ಸಿನ ಕರಾಳ ಮುಖ.ದೇಶದಲ್ಲಿ ಕಾಂಗ್ರೆಸ್ ಹಾಗೂ ಕರ್ನಾಕಟ ಕಾಂಗ್ರೆಸ್ ನಿರಂತರವಾಗಿ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಸಭಾಪತಿ, ಉಪಸಭಾಪತಿಗಳಿಗೆ ಅಪಮಾನ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ಸಿಗರು ದೇಶದಲ್ಲಿ ಸಂವಿಧಾನಿಕ ಹುದ್ದೆಗಳಿಗೆ ಎಂದಿಗೂ ಗೌರವ ಕೊಟ್ಟಿಲ್ಲ ಕೊಡುವುದು ಇಲ್ಲ ಅದಕ್ಕೆ ತಾಜಾ ಉದಾಹರಣೆಗಳ ಪಟ್ಟಿಯನ್ನ ಬಿಜೆಪಿ ನೀಡಿದೆ.
ಇದೇ ಕಾಂಗ್ರೆಸ್ಸಿನ ಕರಾಳ ಮುಖ!
— BJP Karnataka (@BJP4Karnataka) December 20, 2023
ಕಾಂಗ್ರೆಸ್ಸಿಗರು ದೇಶದಲ್ಲಿ ಸಂವಿಧಾನಿಕ ಹುದ್ದೆಗಳಿಗೆ ಎಂದಿಗೂ ಗೌರವ ಕೊಟ್ಟಿಲ್ಲ ಕೊಡುವುದು ಇಲ್ಲ ಅದಕ್ಕೆ ತಾಜಾ ಉದಾಹರಣೆಗಳ ಪಟ್ಟಿ:
▪️ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವಮಾನ
▪️ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ಗೆ ಅಪಮಾನ
▪️ವಿಧಾನಪರಿಷತ್ ಉಪಸಭಾಪತಿಯಾಗಿದ್ದ ಧರ್ಮೇಗೌಡಗೆ ಅಗೌರವ
▪️ವಿಧಾನಸಭೆ…
▪️ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವಮಾನ
▪️ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ಗೆ ಅಪಮಾನ
▪️ವಿಧಾನಪರಿಷತ್ ಉಪಸಭಾಪತಿಯಾಗಿದ್ದ ಧರ್ಮೇಗೌಡಗೆ ಅಗೌರವ
▪️ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್‌ಗೆ ಧರ್ಮದ ಲೇಪನ












Click it and Unblock the Notifications