ಎಸ್‌.ಟಿ.ಸೋಮಶೇಖರ್‌ಗೆ ಸಿನಿಮಾ ಸ್ಪೈಲಲ್ಲಿ ಪಂಚ್ ಕೊಟ್ಟ ಜಗ್ಗೇಶ್!

ಬೆಂಗಳೂರು, ಸೆಪ್ಟೆಂಬರ್, 09 : ತಮ್ಮ ಮತ್ತು ಆರ್.ಅಶೋಕ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಯಶವಂತಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಸ್‌.ಟಿ.ಸೋಮಶೇಖರ್ ಅವರಿಗೆ ವಿಧಾನಪರಿಷತ್ ಸದಸ್ಯ ಜಗ್ಗೇಶ್ ತಿರಗೇಟು ಕೊಟ್ಟಿದ್ದಾರೆ. ಸಿನಿಮಾ ಶೈಲಿಯಲ್ಲಿ ಡೈಲಾಗ್ ಹೇಳುವ ಮೂಲಕ ಚಾಟಿ ಬೀಸಿದ್ದಾರೆ.

ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿರೋಧಿಸಿ ಬುಧವಾರ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಗ್ಗೇಶ್, ಎಸ್‌.ಟಿ.ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು. [ಸೋಮಶೇಖರ್ ಗೆದ್ದಿದ್ದು ಎಷ್ಟು ಮತಗಳಿಂದ ಗೊತ್ತಾ?]

ವಿಜಯನಗರದಲ್ಲಿ ನಡೆಯುತ್ತಿದ್ದ ನೀರ್ ದೋಸೆ ಚಿತ್ರದ ಚಿತ್ರೀಕರಣದಿಂದ ಮೇಕಪ್ ಸಮೇತ ಬಂದಿದ್ದ ಜಗ್ಗೇಶ್, 'ಡಿಕೆ ಶಿವಕುಮಾರ್ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದವರು ನೀವು, ಇಂದು ಶಾಸಕರಾಗಿದ್ದೀರಿ, ಆರ್.ಅಶೋಕ್ 6 ಬಾರಿ ಗೆದ್ದಿದ್ದಾರೆ. ಒಂದು ಬಾರಿ ಗೆದ್ದು ಅವರ ಬಗ್ಗೆ ಮಾತಾಡುತ್ತೀಯ, ಮುಂದಿನ ಬಾರಿ ನೀನು ಗೆಲ್ಲುತ್ತೀಯಾ? ಎಂದು ನೋಡಿಕೋ' ಎಂದರು. [ನೀರ್ ದೋಸೆನಾ ಇಲ್ಲಾ ಬೆಣ್ಣೆ (ಮಸಾಲೆ) ದೋಸೇನಾ?]

'ಸೋಮಶೇಖರ್ ಜೂನಿಯರ್ ಆರ್ಟಿಸ್ಟ್. ಪಾಪ ಅವನು ಎಣ್ಣೆ ಹಾಕೋಂಡ್ ಮಾತನಾಡಿದ್ನೋ, ಇನ್ನೇನ್ ಹಾಕ್ಕೋಂಡ್ ಮಾತನಾಡಿದ್ನೋ. ನನ್ನ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿಯನ್ನು ಸಾಕುವ ತಾಕತ್ತು ನನಗಿದೆ' ಎಂದು ತಿರುಗೇಟು ಕೊಟ್ಟರು.

'ಆರ್.ಅಶೋಕ್ ಸಾಮ್ರಾಟರೇ'

'ಆರ್.ಅಶೋಕ್ ಸಾಮ್ರಾಟರೇ'

ಸೋಮಶೇಖರ್ ವಿರುದ್ಧ ಗುಡುಗಿದ ಜಗ್ಗೇಶ್, 'ಆರ್.ಅಶೋಕ್ 6 ಬಾರಿ ಗೆದ್ದಿದ್ದಾರೆ. ಅವರು ಸಾಮ್ರಾಟರೇ. ಆದರೆ, ನೀನು ಒಂದು ಬಾರಿ ಗೆದ್ದಿದ್ದೀಯಾ. ಮುಂದೆ ನೀನು ಗೆಲ್ಲುವುದಿಲ್ಲ. ನಿನಗೆ ಯೋಗ್ಯತೆ ಇದ್ದರೆ ಮುಂದೆ ಗೆದ್ದು ತೋರಿಸು' ಎಂದು ಜಗ್ಗೇಶ್ ವಾಗ್ದಾಳಿ ನಡೆಸಿದರು.

'ಕಾಂಗ್ರೆಸ್ ಯಾವುದನ್ನು ಮರೆಯಬಾರದು'

'ಕಾಂಗ್ರೆಸ್ ಯಾವುದನ್ನು ಮರೆಯಬಾರದು'

'ನಾನು ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಬಗ್ಗೆ ಎಲ್ಲರೂ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ತುರುವೇಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ ಇದ್ದದು ಕೇವಲ 7 ಸಾವಿರ. ನಾನದನ್ನು ಗೆಲ್ಲುವ ಹಂತಕ್ಕೆ ತಂದಿದ್ದನ್ನು ಕಾಂಗ್ರೆಸ್‌ ಮರೆಯಬಾರದು' ಎಂದರು.

'ಬಣ್ಣ ಹಾಕಿ ಜನರ ಹತ್ರ ಹೋಗುತ್ತೇನೆ'

'ಬಣ್ಣ ಹಾಕಿ ಜನರ ಹತ್ರ ಹೋಗುತ್ತೇನೆ'

'ಕಾಂಗ್ರೆಸ್ ಪಕ್ಷದಲ್ಲಿನ ಅಪಮಾನ ತಾಳಲಾರದೆ ಬಿಜೆಪಿ ಸೇರಿದೆ. ನಾನು ಪ್ರಮಾಣ ಮಾಡಿ ಹೇಳುತ್ತೇನೆ ಒಂದು ರೂಪಾಯಿ ಹಣವನ್ನೂ ನಾನು ಪಡೆದಿಲ್ಲ. ನಾನೂ ಎಂದೂ ಭಿಕ್ಷೆ ಬೇಡಿಲ್ಲ, ಬೇಕಾದರೆ ಬಣ್ಣ ಹಾಕಿ ಕರ್ನಾಟಕ ಜನರ ಹತ್ತಿರ ಹೋಗುವೆ' ಎಂದು ಜಗ್ಗೇಶ್ ಹೇಳಿದರು.

'ಕಾಂಗ್ರೆಸ್ 70 ಸ್ಥಾನಗಳಿಸುತ್ತಿರಲಿಲ್ಲ'

'ಕಾಂಗ್ರೆಸ್ 70 ಸ್ಥಾನಗಳಿಸುತ್ತಿರಲಿಲ್ಲ'

'ಯಡಿಯೂರಪ್ಪನವರು ಕೆಜೆಪಿ ಕಟ್ಟದಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 70 ಸ್ಥಾನ ಗಳಿಸುತ್ತಿರಲಿಲ್ಲ. ಕಾಂಗ್ರೆಸ್‌ ನಾಯಕರು ಯಡಿಯೂರಪ್ಪನವರ ಭಾವಚಿತ್ರಕ್ಕೆ ಪ್ರತಿದಿನ ನಮಸ್ಕಾರ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ನಿಮಗೆ ಜನ ಪಾಠ ಕಲಿಸಲಿದ್ದಾರೆ. ಬಿಜೆಪಿ 175 ಸ್ಥಾನ ಗೆಲ್ಲುತ್ತದೆ' ಎಂದು ಹೇಳಿದರು.

'ಮುಂದಿನ ಬಾರಿ ಗೆಲ್ಲುತ್ತೀಯಾ?'

'ಮುಂದಿನ ಬಾರಿ ಗೆಲ್ಲುತ್ತೀಯಾ?'

'ಡಿಕೆ ಶಿವಕುಮಾರ್ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದವರು, ಇಂದು ಶಾಸಕರಾಗಿದ್ದೀರಿ, ಒಂದು ಬಾರಿ ಗೆದ್ದು ಅಶೋಕ್ ಅವರ ಬಗ್ಗೆ ಬಗ್ಗೆ ಮಾತಾಡುತ್ತೀಯ, ಮುಂದಿನ ಬಾರಿ ನೀನು ಗೆಲ್ಲುತ್ತೀಯಾ? ಎಂದು ನೋಡಿಕೋ' ಎಂದರು.

ಮೇಕಪ್ ಸಮೇತ ಬಂದಿದ್ದರು ಜಗ್ಗೇಶ್

ವಿಜಯನಗರದಲ್ಲಿ ನಡೆಯುತ್ತಿದ್ದ ನೀರ್ ದೋಸೆ ಚಿತ್ರದ ಚಿತ್ರೀಕರಣದಿಂದ ಮೇಕಪ್ ಸಮೇತ ಪ್ರತಿಭಟನಾ ಸ್ಥಳಕ್ಕೆ ಜಗ್ಗೇಶ್ ಬಂದಿದ್ದರು.

ಸೋಮಶೇಖರ್ ಏನು ಹೇಳಿದ್ದರು?

ಸೋಮಶೇಖರ್ ಏನು ಹೇಳಿದ್ದರು?

ಸಮಾರಂಭವೊಂದರಲ್ಲಿ ಜಗ್ಗೇಶ್ ಮತ್ತು ಆರ್.ಅಶೋಕ್ ಅವರ ವಿರುದ್ಧ ಎಸ್‌.ಟಿ.ಸೋಮಶೇಖರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. 'ಅಶೋಕ ಬೆಂಗಳೂರಿನ ಸಾಮ್ರಾಟನಾ?' ಎಂದು ಪ್ರಶ್ನಿಸಿದ್ದರು. 'ಜಗ್ಗೇಶ್‌ನಿಂದ ಪಾಠ ಕಲಿಯಬೇಕಿಲ್ಲ' ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+