ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನಂದ್ ಸಿಂಗ್ ಮೇಲೆ ಹಲ್ಲೆ: ಅಜ್ಞಾತ ಸ್ಥಳದಿಂದ ಶಾಸಕ ಗಣೇಶ್ ಹೇಳಿಕೆ ಬಿಡುಗಡೆ

|
Google Oneindia Kannada News

Recommended Video

Lok Sabha Election 2019 : ಬೀದರ್ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

ಬೆಂಗಳೂರು, ಜನವರಿ 24: ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಪ್ರಸ್ತುತ ಪೊಲೀಸರಿಂದ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಆನಂದ್ ಸಿಂಗ್ ಅವರು ಘಟನೆ ಬಗ್ಗೆ ಫೇಸ್‌ಬುಕ್‌ನಲ್ಲಿ ವಿವರವಾದ ಪತ್ರ ಬರೆದಿದ್ದಾರೆ.

ಅಜ್ಞಾತ ಸ್ಥಳದಿಂದ 'ಕಂಪ್ಲಿ ಕಾಂಗ್ರೆಸ್‌' ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ ಗಣೇಶ್ ಅವರು ಪೋಸ್ಟ್‌ ಹಾಕಿದ್ದು, ಆ ಪತ್ರವನ್ನು ತಾವೇ ಬರೆದಿದ್ದಾಗಿ, ಅವರನ್ನು ಸಂಪರ್ಕಿಸಿದ ಕೆಲವು ಮಾಧ್ಯಮದವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಫೋಸ್ಟ್‌ನಲ್ಲಿ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ನಡೆದಿದು ಎಂದು ಆನಂದ್ ಸಿಂಗ್ ಹೇಳಿರುವ ಎಲ್ಲವೂ ಸುಳ್ಳು ಎಂದು ಹೇಳಿರುವ ಜೆ.ಎನ್.ಗಣೇಶ್ ನಾನು ಹಲ್ಲೆ ಮಾಡಿಲ್ಲ, ಬದಲಾಗಿ ಆನಂದ್ ಸಿಂಗ್ ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು ಎಂದು ಬರೆದುಕೊಂಡಿದ್ದಾರೆ.

ಆನಂದ್‌ ಸಿಂಗ್ ಮೇಲೆ ಹಲ್ಲೆ : ಈಗಲ್ಟನ್‌ ರೆಸಾರ್ಟ್‌ನಲ್ಲಿ ಪೊಲೀಸರ ಮಹಜರ್ಆನಂದ್‌ ಸಿಂಗ್ ಮೇಲೆ ಹಲ್ಲೆ : ಈಗಲ್ಟನ್‌ ರೆಸಾರ್ಟ್‌ನಲ್ಲಿ ಪೊಲೀಸರ ಮಹಜರ್

ರೆಸಾರ್ಟ್‌ನಲ್ಲಿ ನಾವಿಬ್ಬರೂ ಪಾರ್ಟಿ ಮಾಡಿದ್ದು ಸತ್ಯ ಎಂದಿರುವ ಗಣೇಶ್, ಅಂದು ಆನಂದ್ ಸಿಂಗ್ ನನ್ನನ್ನು ಅವರ ರೂಮಿಗೆ ಕರೆದುಕೊಂಡು ಹೋದರು, ರಾತ್ರಿ ಎರಡು ಗಂಟೆ ವರೆಗೂ ಮಾತನಾಡಿದರು 'ನೀನು ಸಾಮಾನ್ಯ ವ್ಯಕ್ತಿ ನೀನು ಶಾಸಕ ಆಗಿದ್ದು ನಾನು ಸಹಿಸುವುದಿಲ್ಲ. ನನ್ನ ಎದುರು ಕುಳಿತು ಕೊಳ್ಳುವ ಶಕ್ತಿ ನಿನಗೆ ಬಂತ ಮಗನೇ, ಕೆಳಗೆ ಕುಳಿತು ಕೊಳ್ಳುವ ಮಗನೇ ಅಂತ ನನಗೆ ನಿಂದನೆ ಮಾಡುತ್ತಲೇ ಮಾತಾಡಿದ್ದಾರೆ' ಎಂದು ಗಣೇಶ್ ಬರೆದುಕೊಂಡಿದ್ದಾರೆ.

'ನಿನ್ನನ್ನು ಭಿಕ್ಷೆ ಬೇಡುವಂತೆ ಮಾಡಿದೆ'

'ನಿನ್ನನ್ನು ಭಿಕ್ಷೆ ಬೇಡುವಂತೆ ಮಾಡಿದೆ'

ಕಳೆದ ಚುನಾವಣೆಯಲ್ಲಿ ನೀನು ಪಕ್ಷೇತರವಾಗಿ ಚುನಾವಣೆ ಸ್ಪರ್ಧಿಸುವಂತೆ ಮಾಡಿದ್ದು, ಹಾಗೂ ನೀನು ಸೋಲುವಂತೆ ಮಾಡಿದ್ದು ನಾನೆ, ಹಾಗೆ ಮಾಡಿ ನೀನು ಆರ್ಥಿಕವಾಗಿ ಕುಗ್ಗಿಹೋಗಿ ಭಿಕ್ಷೆ ಬೇಡುವಂತೆ ಮಾಡಿದೆ. ಎಂ. ಪಿ ರವೀಂದ್ರ ರವರ ಜಾಗ 2 ಕೋಟಿ ಗೆ ತೆಗದು ಕೊಂಡು ಹಗರಿಬೊಮ್ಮಮನಹಳ್ಳಿ ಅಲ್ಲಿ ಕಚೇರಿ ಮಾಡಿ ಭೀಮಾ ಗೆ ಸೋಲಿಸಲು ಪಣ ತೊಟ್ಟಿದೆ ಆದರೆ ಅದು ಆಗಲಿಲ್ಲ. ಈಗ ಕಂಪ್ಲಿ ಯಲ್ಲಿ ಕಚೇರಿ ತೆರೆದು ನಿನ್ನನ್ನು ಮುಗಿಸುತ್ತೇನೆ ಎಂದು ಬೆದರಿಸಿದರು ಎಂದು ಪೋಸ್ಟ್‌ನಲ್ಲಿ ಇದೆ.

ಆನಂದ್ ಸಿಂಗ್ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಗಣೇಶ್ ಅರ್ಜಿ ಆನಂದ್ ಸಿಂಗ್ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಗಣೇಶ್ ಅರ್ಜಿ

'ಜಾತಿ ಬಗ್ಗೆ ಕೀಳಾಗಿ ಮಾತನಾಡಿದರು'

'ಜಾತಿ ಬಗ್ಗೆ ಕೀಳಾಗಿ ಮಾತನಾಡಿದರು'

'ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ನನ್ನ ವಿರುದ್ಧ ಇದ್ದರೂ ನನ್ನ ಒಂದು ಕುದಲು ಕೀಳಲು ಅವರಿಂದ ಆಗಲಿಲ್ಲ. ಆದರು ನಾನು ಗೆದ್ದು ಬಂದೆ ಕೀಳು ಜಾತಿ ನೀನು ಅದಕ್ಕೆ ಸೇರಿದವನು. ತುಕಾರಾಂಗೆ ಸಚಿವ ಸ್ಥಾನ ಕೊಡಿಸಲು ದೆಹಲಿಯಾ ಹೋಗುತ್ತೀಯಾ ಸೂ. ಮಗನೇ' ಎಂದು ಆನಂದ್ ಸಿಂಗ್ ಬೈದರು ಎಂದು ಗಣೇಶ್ ಬರೆದುಕೊಂಡಿದ್ದಾರೆ.

ತಲೆ ಮರೆಸಿಕೊಂಡ ಶಾಸಕ ಗಣೇಶ್, ಪೊಲೀಸರಿಂದ ಹುಡುಕಾಟ ತಲೆ ಮರೆಸಿಕೊಂಡ ಶಾಸಕ ಗಣೇಶ್, ಪೊಲೀಸರಿಂದ ಹುಡುಕಾಟ

'ಕಾಲಿನಿಂದ ನನ್ನನ್ನು ಒದ್ದರು'

'ಕಾಲಿನಿಂದ ನನ್ನನ್ನು ಒದ್ದರು'

ಆನಂದ್ ಸಿಂಗ್ ರೂಮಿನಲ್ಲಿ ಕೆಳಗೆ ಕೂತಿದ್ದ ನನ್ನ ಎದೆಗೆ ಜೋರಾಗಿ ಕಾಲಿನಿಂದ ಒದ್ದರು, ನನ್ನ ಜಾತಿ ಬಗ್ಗೆ ಕೆಟ್ಟದಾಗಿ ಮಾತನಾಡಿದರು, ಎದೆಗೆ ನೋವು ಆಗಿದ್ದರಿಂದ ನಾನು ನನ್ನ್ ರೂಮ್ ಗೆ ಹೋದೆ. ಆನಂದ್ ಸಿಂಗ್ ಮತ್ತೆ ರೂಮಿನ ವರೆಗೆ ಬಂದು ಹೂ-ಕುಂಡ ಎತ್ತಿ ಹೊಡೆದು, ನನ್ನ ರೂಮಿನ ಬಾಗಿಲು ತಟ್ಟಿ 'ಬಾಲೆ ಸೂ. ಮಗನೇ, ಭೀಮಾ (ಭೀಮಾನಾಯ್ಕ) ನ ರೂಂ ತೋರಿಸ ಬಾ..' ಎಂದು ಗಲಾಟೆ ಮಾಡಿದರು ಎಂದು ಗಣೇಶ್ ಪತ್ರದಲ್ಲಿ ಬರೆದಿದ್ದಾರೆ.

'ಭೀಮಾನಾಯ್ಕ ಅವರನ್ನು ಬೈದರು'

'ಭೀಮಾನಾಯ್ಕ ಅವರನ್ನು ಬೈದರು'

ನಂತರ ನನ್ನನ್ನು ಬಲವಂತವಾಗಿ ಭೀಮ (ಭೀಮಾನಾಯ್ಕ) ನ ರೂಂ ಗೆ ಕರೆದುಕೊಂಡು ಹೋದರು. ಅಲ್ಲಿ ಲೇ ಭೀಮಾ ನೀನು ಲೇ ಸೂಳೆ ಮಗ CPL ಮೀಟಿಂಗ್‌ನಲ್ಲಿ ಎಲ್ಲರ ಮುಂದೆ ನನಗೆ ಸೂ. ಮಗ ಅಂತ ಹೇಳಿದಿ ಎಲ್ಲರ ಮುಂದೆ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳು ಮಗನೆ ಅಂತ ಭೀಮಾ ನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಗ ನಾನು ಮಧ್ಯೆ ಪ್ರವೇಶಿಸಿ ಇಬ್ಬರ ನಡುವೆ ಸಂಧಾನ ಮಾಡಲು ಯತ್ನಿಸಿದೆ ಎಂದು ಗಣೇಶ್ ವಿವರಿಸಿದ್ದಾರೆ.

'ಕುಟುಂಬದವರ ಬಗ್ಗೆ ಕೆಟ್ಟ ಮಾತಾಡಿದರು'

'ಕುಟುಂಬದವರ ಬಗ್ಗೆ ಕೆಟ್ಟ ಮಾತಾಡಿದರು'

ನನ್ನ ಪರಿವಾರ ನನ್ನ ಹೆಂಡತಿ, ತಾಯಿ ಅಕ್ಕನ ಮೇಲೆ ಕೆಟ್ಟದಾಗಿ ಮಾತನಾಡಿದರು ಅವಾಚ್ಯ ಶಬ್ದಗಳಿಂದ ಬೈದರು. ಜಾತಿ ನಿಂದನೆ ಮಾಡಿದರು ನನ್ನ ಶರ್ಟ್ ಹರಿದು ನನ್ನ ಬಲಗೈ ಹೆಬ್ಬೆರಳನ್ನು ತಿರುಗಿಸಿ ಮುರಿದರು, ಬೆಡ್ ಲೈಟ್ ತೆಗದು ಕೊಂಡು ನನ್ನ ಬೆನ್ನಿಗೆ ಹೊಡೆದು ಅಲ್ಲೆ ಮಾಡಿದರು ಎಂದು ಗಣೇಶ್‌ ಪತ್ರದಲ್ಲಿ ಆರೋಪಗಳನ್ನು ಮಾಡಿದ್ದಾರೆ.

'ಆನಂದ್ ಸಿಂಗ್ ಮೊದಲು ಕೈ ಮಾಡಿದರು'

ಆನಂದ್ ಸಿಂಗ್ ಮೊದಲು ಕೈಮಾಡಿದ್ದಕ್ಕಾಗಿಯೇ ನಾನು ಅವರಿಗೆ ಹೊಡೆದೆ, ಇದರಲ್ಲಿ ನನ್ನ ಯಾವುದೇ ತಪ್ಪು ಇಲ್ಲ, ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಭೀಮಾನಾಯ್ಕ, ವಿಶ್ವ ಹಾಗೂ ಶರಣಪ್ಪ. ಈ ಬಗ್ಗೆ ತಿಳಿದ ಪಕ್ಷದ ಮುಖಂಡರು, ಇದರಲ್ಲಿ ಇಬ್ಬರದ್ದೂ ತಪ್ಪಿದೆ, ಪಕ್ಷಕ್ಕೆ ಮುಜುಗರ ಆಗಿದೆ ಎಂದು ಅಲ್ಲಿಗೇ ಡಾಕ್ಟರ್‌ ಅವರನ್ನು ಕರೆಸಿ ಚಿಕಿತ್ಸೆ ಕೊಡಿಸಿದರು ಎಂದು ಗಣೇಶ್ ಘಟನೆಯನ್ನು ವಿವರಿಸಿದ್ದಾರೆ.

'ರಾಜಕೀಯವಾಗಿ ಮುಗಿಸಲು ಮಾಡುತ್ತಿರುವ ಯತ್ನ'

'ರಾಜಕೀಯವಾಗಿ ಮುಗಿಸಲು ಮಾಡುತ್ತಿರುವ ಯತ್ನ'

ರಾಜಕೀಯ ವಾಗಿ ಮುಗಿಸಲು ಆನಂದ್ ಸಿಂಗ್ ಹೀಗೆ ಪ್ರಯತ್ನ ಮಾಡುತ್ತಿದ್ದಾರೆ. ನನ್ನ ಹಾಗೂ ನನ್ನ ಕುಟುಂಬ ದವರಿಗೆ ಆನಂದ್ ಸಿಂಗ್ ಹಾಗೂ ಸಂದೀಪ್ ಸಿಂಗ್ ರಿಂದ ಜೀವ ಬೆದರಿಕೆ ಇದೆ. ಕಂಪ್ಲಿ ಕ್ಷೇತ್ರದ ಜನರಿಗೆ ನನ್ನ ಮನವಿ. ಕಂಪ್ಲಿ ಕ್ಷೇತ್ರದ ಜನ ಸುಳ್ಳು ಸುದ್ದಿಗಳನ್ನು ನಂಬಬಾರದು. ನಾನು ಕಂಪ್ಲಿ ಬಿಟ್ಟು ಯಾವ ಕ್ಷೇತ್ರ ಕ್ಕೂ ಹೋಗುವುದಿಲ್ಲ ಕಂಪ್ಲಿ ಕಲ್ಯಾಣವೇ ನನ್ನ ಗುರಿ ಎಂದು ಜೆ.ಎನ್.ಗಣೇಶ್‌ ಪತ್ರವನ್ನು ಮುಗಿಸಿದ್ದಾರೆ.

ಗಣೇಶ್‌ಗಾಗಿ ಪೊಲೀಸರ ಹುಡುಕಾಟ

ಗಣೇಶ್‌ಗಾಗಿ ಪೊಲೀಸರ ಹುಡುಕಾಟ

ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಮೊದಲ ಆರೋಪಿ ಆಗಿದ್ದು, ಅವರನ್ನು ರಾಮನಗರ ಪೊಲೀಸರು ಹುಡುಕುತ್ತಿದ್ದಾರೆ. ಗಣೇಶ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಆನಂದ್ ಸಿಂಗ್ ಅವರು ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಣ್ಣಿನ ಚಿಕಿತ್ಸೆಗಾಗಿ ಇಂದು ನಾರಾಯಣ ನೇತ್ರಾಲಯಕ್ಕೆ ಭೇಟಿ ನೀಡಿದ್ದಾರೆ.

English summary
Kampli MLA Ganesh writes a facebook post about fight with Anand Singh. He wrote i did not hit Anand Singh he only hit me with flower pot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X