ಎಂಎಲ್‌ಎ ಮಗಳ ನಾಪತ್ತೆ ಪ್ರಕರಣ ಮದುವೆಯಲ್ಲಿ ಸುಖಾಂತ್ಯ
ಬೆಂಗಳೂರು, ಮಾರ್ಚ್ 08: ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ಅವರ ಮಗಳು ಲಕ್ಷ್ಮಿ ನಾಯಕ್ ಅವರರು ಮನೆಯವರ ವಿರೋಧವನ್ನೂ ಲೆಕ್ಕಿಸದೆ ಚಿತ್ರ ನಿರ್ಮಾಪಕ ಸುಂದರ್ ಗೌಡ ಅವರನ್ನು ವಿವಾಹವಾಗಿದ್ದಾರೆ.
ಶಾಸಕ ಶಿವಮೂರ್ತಿ ನಾಯಕ್ ಅವರು ತಮ್ಮ ಮಗಳು ಕಾಣೆ ಆಗಿದ್ದಾಳೆ ಎಂದು ಇಂದು ಬೆಳಿಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಲಕ್ಷ್ಮಿ ನಾಯಕ್ ಅವರು ತಾವು ಪ್ರೀತಿಸುತ್ತಿದ್ದ ಮಾಸ್ತಿಗುಡಿ ಚಿತ್ರ ನಿರ್ಮಾಪಕ ಸುಂದರ್ ಗೌಡ ಅವರನ್ನು ವಿವಾಹವಾಗಿದ್ದಾರೆ. ಆ ಚಿತ್ರಗಳು ಮತ್ತು ಲಕ್ಷ್ಮಿ ಅವರು ಮದುವೆ ಬಗ್ಗೆ ಮಾತನಾಡಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
ನಿನ್ನೆ ಸಂಜೆಯೇ ಮನೆ ಬಿಟ್ಟು ಹೋಗಿರುವ ಲಕ್ಷ್ಮಿ ಅವರಿಗಾಗಿ ಶಾಸಕರ ಕುಟುಂಬಸ್ಥರು ಹಲವು ಕಡೆ ಹುಡುಕಾಟ ನಡೆಸಿದ್ದಾರೆ. ಮೈಸೂರಿನ ರೆಸಾರ್ಟ್ ಒಂದರಲ್ಲಿ ಮದುವೆ ನಡೆಯಲಿದೆ ಇರಬಹುದೆಂಬ ಎಂಬ ಸುದ್ದಿನಂಬಿ ಅಲ್ಲಿಗೂ ಶಾಸಕರ ಕುಟುಂಬಸ್ಥರು ಬಂದು ಹುಡುಕಾಟ ನಡೆಸಿದ್ದಾರೆ ಆದರೆ ಅಲ್ಲಿಯೂ ಅವರ ಸುಳಿವು ದೊರೆತಿಲ್ಲ. ಕೊನೆಗೆ ಇದೀಗ ನವ ಜೋಡಿ ತಮ್ಮ ಮದುವೆ ಬಗ್ಗೆ ಸೆಲ್ಪೀ ವಿಡಿಯೋವನ್ನು ಹಂಚಿಕೊಂಡಿದ್ದು ಅದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ವಿಡಿಯೋದಲ್ಲಿ ಶಾಸಕರ ಪುತ್ರಿ ಲಕ್ಷ್ಮಿ ನಾಯಕ್ ಅವರು 'ನಾನು ಮತ್ತು ಸುಂದರ್ ಗೌಡ ಅವರು ಇಷ್ಟಪಟ್ಟು ಮದುವೆ ಆಗಿದ್ದೀವಿ, ಮದುವೆ ಬಗ್ಗೆ ನನ್ನನ್ನು ಯಾರೂ ಬಲವಂತ ಮಾಡಿಲ್ಲ, ನಾನು ನನ್ನ ಸ್ವ-ಇಚ್ಛೆಯಿಂದಲೇ ಮದುವೆ ಆಗಿದ್ದೇನೆ, ನನ್ನಿಂದ ಯಾರಿಗೂ ತೊಂದರೆ ಆಗುವುದು ಬೇಡ' ಎಂದು ಅವರು ಮನವಿ ಮಾಡಿದ್ದಾರೆ.












Click it and Unblock the Notifications