ರಾಜರಾಜೇಶ್ವರಿ ನಗರ ಪೊಲೀಸರ ದುರ್ವರ್ತನೆ: ಕೆಆರ್ಎಸ್ ಕಾರ್ಯಕರ್ತರ ಬುದ್ಧಿಮಾತು
ಬೆಂಗಳೂರು, ಜೂ. 13: ಜನ ಸಾಮಾನ್ಯರಿಗೆ ಪೊಲೀಸರು ಮೊದಲು ಗೌರವದಿಂದ ಕಾಣಬೇಕು. ಜನ ಸಾಮಾನ್ಯರನ್ನೇ ಅತಿ ಕೀಳು ಭಾವನೆಯಿಂದ ನೋಡುವ ಹಳೇ ಪದ್ಧತಿ ಮುಂದುವರೆದರೆ ಸಾರ್ವಜನಿಕರು ರೊಚ್ಚಿಗೇಳುವ ದಿನಗಳು ದೂರವಿಲ್ಲ! ಈ ಬಗ್ಗೆ ಪೊಲೀಸರು ಅತ್ಮ ವಿಮರ್ಶೆ ಮಾಡಿಕೊಳ್ಳುವ ಕಾಲ ಎದುರಾಗಿದೆ.
ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬೇಜವಬ್ದಾರಿಯುತವಾಗಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಸಚಿವ ಮುನಿರತ್ನ ಅವರ ಅಕ್ರಮ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಕೋರಿದ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಕಾರ್ಯಕರ್ತರ ಬಳಿ ದುರ್ವರ್ತನೆ ತೋರಿದ ರಾಜರಾಜೇಶ್ವರಿ ನಗರ ಪೊಲೀಸರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. 'ಪೊಲೀಸರೇ ಜನ ಸಾಮಾನ್ಯರಿಗೆ ಮೊದಲು ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಿರಿ' ಎಂಬ ಅಭಿಯಾನ ಹುಟ್ಟುಕೊಂಡಿದೆ. ಪೊಲೀಸರ ದರ್ವರ್ತನೆ ಮಾತುಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಅನಧಿಕೃತವಾಗಿ ಸಚಿವ ಮುನಿರತ್ನ ಅವರ ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ಹಾಕಲಾಗಿತ್ತು. ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಹಾಕಿದ್ದ ಬ್ಯಾನರ್ ಗಳನ್ನು ತೆಗೆಯುವಂತೆ ದೂರು ಕೊಡಲು ಕೆಆರ್ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರ ದಂಡು ದೂರು ಕೊಡಲು ಮುಂದಾಯಿತು. ಇದನ್ನು ನೋಡಿದ ಆರ್ ಆರ್ ನಗರ ಪೊಲೀಸರು ' ಆಯ್ತು ದೂರು ಕೊಡಿ ಮಾಡ್ಕೋತೀವಿ' ಎಂದು ಬೇಜವಾಬ್ಧಾರಿಯಿಂದ ಉತ್ತರ ಕೊಟ್ಟರು. ಪೊಲೀಸರ ಈ ನಡೆಯಿಂದ ಕಿಡಿ ಕಾರಿದ ರವಿಕೃಷ್ಣಾರೆಡ್ಡಿ, ಪೊಲೀಸರು ಅಂದ್ರೆ ಕಾನೂನು ಪಾಲಕರಾಗಿರಬೇಕು. ಆಯ್ತು ಮಾಡ್ತಕೋತೀವಿ ಅನ್ನೋದು ಏನು ? ಆಯ್ತು ಮಾಡಿಕೊಳ್ಳುತ್ತೇನೆ ಸರ್ ಎಂದು ಹೇಳಬೇಕು. ಮೊದಲು ಗೌರವ ಕೊಟ್ಟು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.

ವಿಡಿಯೋ ವೈರಲ್
ಪೊಲೀಸ್ ಭ್ರಷ್ಟ ವ್ಯವಸ್ಥೆ, ಜನ ಸಾಮಾನ್ಯರನ್ನು ಮಾತನಾಡಿಸುವ ಪರಿಯ ಬಗ್ಗೆ ರವಿಕೃಷ್ಣರಾಡ್ಡಿ ಪೊಲೀಸರಿಗೆ ಬುದ್ಧಿವಾದ ಹೇಳಿದರು. ಹೀಗೆ ಅರ್.ಆರ್. ನಗರ ಪೊಲೀಸರ ವರ್ತನೆ ಬಗ್ಗೆ ರವಿಕೃಷ್ಣಾರೆಡ್ಡಿ ಆಡಿರುವ ಮಾತುಗಳು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಮಾತ್ರವಲ್ಲ,ಈ ವಿಡಿಯೋಗೆ ಸಾವಿರಾರು ಮಂದಿ ಕಮೆಂಟ್ ಮಾಡಿ ಪೊಲೀಸರು ಜನ ಸಾಮಾನ್ಯರ ಜತೆ ನಡೆದುಕೊಳ್ಳುವ ರೀತಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಪೊಲೀಸರು ಜನ ಸಾಮಾನ್ಯರ ಬಗ್ಗೆ ತೋರುವ ಅಗೌರವ ಮತ್ತು ಭ್ರಷ್ಟಾಚಾರದ ಬಗ್ಗೆ ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶೋಕ್ ಕುಮಾರ್ ಅಭಿಪ್ರಾಯ
ನಮ್ಮ ಪೊಲೀಸ್ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ. ಪೊಲೀಸರ ಪೋಸ್ಟಿಂಗ್ ಮೊದಲು ರಾಜಕೀಯ ಪ್ರಭಾವಕ್ಕೆ ಒಳಗಾಗುತ್ತಿರಲಿಲ್ಲ. ನ್ಯಾಯದ ಪರವಾಗಿ ಕೆಲಸ ಮಾಡುವ ಅವಕಾಶವಿತ್ತು. ಈಗ ಕಾನ್‌ಸ್ಟೇಬಲ್ ನಿಂದ ಪೊಲೀಸ್ ಇನ್‌ಸ್ಪೆಕ್ಟರ್ ವರೆಗೂ ರಾಜಕಾರಣಿಗಳ ಮುಲಾಜಿಗೆ ಒಳಗಾಗಿ ಪೋಸ್ಟಿಂಗ್ ತೆಗೆದುಕೊಳ್ಳುತ್ತಿದ್ದಾರೆ. ಈಗಾಗಿ ಪೊಲೀಸರು ರಾಜಕಾರಣಿಗಳ ಗುಲಾಮರಾಗಿದ್ದಾರೆ. ಹೀಗಾಗಿ ನಮ್ಮ ಪೊಲೀಸ್ ವ್ಯವಸ್ಥೆಯೇ ಕುಸಿದು ಬಿದ್ದಿದೆ.

ಪೊಲೀಸರು ಒಳ್ಳೆಯವರೇ
"ಪೊಲೀಸರು ಒಳ್ಳೆಯವರೇ. ಪೊಲೀಸ್ ಇಲಾಖೆಯ ಪೋಸ್ಟಿಂಗ್ ನಲ್ಲಿ ರಾಜಕೀಯ ಪ್ರವೇಶದಿಂದ ಪೊಲೀಸರ ನೈತಿಕತೆ ಅಧಃಪತನವಾಗಿದೆ. ಪೊಲೀಸರು ಪಬ್ಲಿಕ್ ಸರ್ವೆಂಟ್ ಆಗಿ ಉಳಿದಿಲ್ಲ. ಪೊಲಿಟಿಕಲ್ ಸರ್ವೆಂಟ್ಸ್ ಅಗಿದ್ದಾರೆ. ಒಂದು ಹೈಕೋರ್ಟ್ ಆದೇಶವನ್ನು ಪಾಲಿಸಬೇಕಾದವರು ಕೆಆರ್ಎಸ್ ಪಕ್ಷದವರು ಅಲ್ಲ, ಪೊಲೀಸರು. ಯಾವುದೋ ಒಬ್ಬ ರಾಜಕಾರಣಿ ಬ್ಯಾನರ್ ಅಕ್ರಮವಾಗಿ ಹಾಕಿದ್ದಾರೆ ಎಂದ್ರೆ ಅವರ ವಿರುದ್ಧ ಕೇಸು ದಾಖಲಿಸಿ ಕ್ರಮ ಜರುಗಿಸಬೇಕಾದವರು ಪೊಲೀಸರು. ಪ್ರತಿಭಟನೆ ಮಾಡಿ ಪೊಲೀಸರಿಂದ ಕೆಲಸ ಮಾಡಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ. ಯಾವಾಗ ಪೊಲೀಸರು ರಾಜಕೀಯ ನಾಯಕರ ಪ್ರಭಾವಕ್ಕೆ ಒಳಗಾಗಲ್ಲವೋ ಅವಾಗ ಮಾತ್ರ ನ್ಯಾಯ ಸಮ್ಮತವಾಗಿ ಕೆಲಸ ಮಾಡಲು ಸಾಧ್ಯ. ಪೊಲೀಸರು ಮೊದಲು ಜನ ಸಾಮಾನ್ಯರಿಗೆ ಗೌರವ ಕೊಟ್ಟು ಮಾತನಾಡಬೇಕು. ಇಲ್ಲದಿದ್ದರೆ ಪೊಲೀಸರ ಮೇಲಿನ ಗೌರವ ಕಳೆದು ಹೋಗುತ್ತದೆ," ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ ಅಶೋಕ್ ಕುಮಾರ್ ( ಟೈಗರ್ ) ಅಭಿಪ್ರಾಯಪಟ್ಟಿದ್ದಾರೆ.

ದೇಶ ಉಳಿದಿರೋದು ಸಂವಿಧಾನದಿಂದ
ನಮ್ಮ ದೇಶ ಉಳಿದಿರೋದು ಸಂವಿಧಾನದಿಂದ. ಹೈಕೋರ್ಟ್ ಮತ್ತು ಸುಪ್ರೀಕೋರ್ಟ್ ನಿಂದ . ಪೊಲೀಸರು ಸಂವಿಧಾನಬದ್ದವಾಗಿ ಕೆಲಸ ಮಾಡಬೇಕು. ರಾಜಕೀಯ ಗುಲಾಮರಾಗಿ ಕೆಲಸ ಮಾಡಬಾರದು. ಈ ಹಿಂದೆ ಪೊಲೀಸರು ಏನೇ ಮಾಡಿದ್ರೂ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನ್ಯಾಯ ಸಮ್ಮತವಾಗಿ ಕೆಲಸ ಮಾಡಲಾಗುತ್ತಿತ್ತು. ಪೊಲೀಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲದ ಹೊರತು ಪೊಲೀಸ್ ಇಲಾಖೆ ಬದಲಾಗುವುದಿಲ್ಲ ಎಂದು ಬಿ.ಬಿ.ಅಶೋಕ್ ಕುಮಾರ್ ಕಿವಿಮಾತು ಹೇಳಿದ್ದಾರೆ.
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Moodbidri: ಮಹಿಳೆಯರನ್ನು ಮಂಚಕ್ಕೆ ಕರೆದಿದ್ದ ಆರೋಪ: ಮೂಡುಬಿದರೆ ಇನ್‌ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್ಶೀಟ್ನಲ್ಲಿ ಸ್ಫೋಟಕ ಮಾಹಿತಿ -
ಆಂಧ್ರಪ್ರದೇಶದಲ್ಲಿ ಕಲಬೆರಕೆ ಹಾಲು ಸೇವಿಸಿ 16 ಮಂದಿ ಸಾವು: ಹಲವು ರಾಜ್ಯಗಳಲ್ಲಿ ಅಧಿಕಾರಿಗಳಿಂದ ದಾಳಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ












Click it and Unblock the Notifications