ಡಿಕೆ ಶಿವಕುಮಾರ್ ಸಾಮರ್ಥ್ಯಕ್ಕೆ ಸವಾಲಾಗುವ ಹುದ್ದೆ ನೀಡಲಿದೆ ಹೈಕಮಾಂಡ್‌

ಬೆಂಗಳೂರು, ಜೂನ್ 06: ಸಚಿವ ಡಿ.ಕೆ.ಶಿವಕುಮಾರ್ ತಮ್ಮ ನಾಯಕತ್ವವನ್ನು, ತಮ್ಮ ರಾಝಕೀಯ ಚತುರತೆಯನ್ನು, ಸಂಘಟನಾ ಶಕ್ತಿಯನ್ನು ಹಲವು ಭಾರಿ ಋಜುವಾತು ಪಡಿಸಿದ್ದಾರೆ. ಆದರೆ ಅವರಿಗೆ ಈವರೆಗೆ ಅವರ ಸಾಮರ್ಥ್ಯಕ್ಕೆ ತಕ್ಕಂತ ಹುದ್ದೆ ಕಾಂಗ್ರೆಸ್‌ನಲ್ಲಿ ಸಿಕ್ಕಿಲ್ಲವೆಂದೇ ಹೇಳಬೇಕು.

ಆದರೆ ಈಗ ಡಿ.ಕೆ.ಶಿವಕುಮಾರ್ ಅವರಿಗೆ ಅವರ ಸಾಮರ್ಥ್ಯಕ್ಕೆ ತಕ್ಕುದಾದುದು ಮಾತ್ರವಲ್ಲ, ಅವರ ಸಾಮರ್ಥ್ಯಕ್ಕೆ ಸವಾಲೆನಿಸುವಂತಹಾ ಹುದ್ದೆಯನ್ನು ನೀಡಲು ಕಾಂಗ್ರೆಸ್ ಹೈಕಮಾಂಡ್ ಸಜ್ಜಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತು ಪುಟಿದೇಳಲು ದಾರಿ ಹುಡುತ್ತಿರುವ ರಾಜ್ಯ ಕಾಂಗ್ರೆಸ್‌ನ ಸಾರಥ್ಯವನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ವಹಿಸಲು ಹೈಕಮಾಂಡ್ ಚಿಂತಿಸಿದೆ.

ಲೋಕಸಭೆ ಚುನಾವಣೆ ಸೋಲಿನ ಬಳಿಕ ಹಲವು ಬದಲಾವಣೆಗಳನ್ನು ಮಾಡಲು ಹೈಕಮಾಂಡ್ ತೀರ್ಮಾನಿಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಮಾಸ್ ಲೀಡರ್ ಎಂದು ಗುರುತಿಸಿಕೊಂಡಿರುವ, ಕ್ಲಾಸ್ ರಾಜಕೀಯದತ್ತ ಹೊರಳುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ನೀಡುವ ಎಲ್ಲ ಸಾಧ್ಯತೆ ಇದೆ.

ದಿನೇಶ್ ಗುಂಡೂರಾವ್‌ಗೆ ಮಂತ್ರಿ ಸ್ಥಾನ?

ದಿನೇಶ್ ಗುಂಡೂರಾವ್‌ಗೆ ಮಂತ್ರಿ ಸ್ಥಾನ?

ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಿ, ಅವರ ಮಂತ್ರಿ ಸ್ಥಾನವನ್ನು ಈಗಿನ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಆದರೆ ಕಾರ್ಯಾಧ್ಯಕ್ಷ ಸ್ಥಾನ ಮಾತ್ರ ಈಶ್ವರ್ ಖಂಡ್ರೆ ಅವರ ಬಳಿಯೇ ಉಳಿಯಲಿದೆ.

ಸಾಮರ್ಥ್ಯ ಪ್ರದರ್ಶಿಸಿರುವ ಡಿ.ಕೆ.ಶಿವಕುಮಾರ್

ಸಾಮರ್ಥ್ಯ ಪ್ರದರ್ಶಿಸಿರುವ ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್ ಅವರು ಚುನಾವಣೆಗಳಲ್ಲಿ, ಉಪಚುನಾವಣೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಪ್ರದರ್ಶಿಸಿದ್ದಾರೆ. ಹಿಂದೆ ಸಹ ಹಲವು ಬಾರಿ ತಮ್ಮ ರಾಜಕೀಯ ಚತುರತೆಯನ್ನು ಪ್ರದರ್ಶಿಸಿದ್ದಾರೆ. ದೇವೇಗೌಡ ಅವರೇ ಸೋಲುಣ್ಣುವಂತೆ ಮಾಡಿದ್ದ ಭಾರಿ ರಾಜಕೀಯ ಚತುರ ಅವರು. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್‌ನೊಂದಿಗೆ ಸಮನ್ವಯ ಸಾಧಿಸುವ ಅತ್ಯುತ್ತಮ ಚತುರತೆ ಇದೆ.

ಡಿ.ಕೆ.ಶಿ ಸಾಮರ್ಥ್ಯದ ಮೇಲೆ ಹೈಕಮಾಂಡ್‌ಗೆ ವಿಶ್ವಾಸ

ಡಿ.ಕೆ.ಶಿ ಸಾಮರ್ಥ್ಯದ ಮೇಲೆ ಹೈಕಮಾಂಡ್‌ಗೆ ವಿಶ್ವಾಸ

ರಾಜಕೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಅಸಮಾಧಾನವನ್ನು ಶಮನ ಮಾಡುವ, ಅವಶ್ಯಕ ಸಂದರ್ಭದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಡಿ.ಕೆ.ಶಿವಕುಮಾರ್ ಅವರಿಗೆ ಇದೆ. ಎಲ್ಲ ಮಾದರಿಯ ರಾಜಕೀಯವನ್ನು ಕಂಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ಶಕ್ತಿ ಇದೆ ಎಂಬುದು ಹೈಕಮಾಂಡ್ ನಂಬಿಕೆ.

ಹಿರಿಯರು-ಕಿರಿಯರು ಡಿಕೆಶಿ ಮಾತು ಕೇಳುತ್ತಾರೆ

ಹಿರಿಯರು-ಕಿರಿಯರು ಡಿಕೆಶಿ ಮಾತು ಕೇಳುತ್ತಾರೆ

ಡಿ.ಕೆ.ಶಿವಕುಮಾರ್ ಅವರ ಮಾತನ್ನು ಪಕ್ಷದ ಹಿರಿಯರು ಮತ್ತು ಕಿರಿಯರು ಸಮಾನವಾಗಿ ಕೇಳುತ್ತಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ರಾಜ್ಯದ ಟಫ್ ರಾಜಕಾರಣಿ, ಮಾಸ್ ರಾಜಕಾರಣಿ ಎಂಬ ಖ್ಯಾತಿಯೂ ಇದ್ದು ಇದು ಪಕ್ಷವನ್ನು ಅಸಮಾಧಾನಗಳಿಲ್ಲದೆ ಏಕಪಕ್ಷೀಯವಾಗಿ ಕಟ್ಟಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ಹೈಕಮಾಂಡ್‌ನದ್ದು.

ಜಾರಕಿಹೊಳಿ ಸಹೋದರರು ಅಸಮಾಧಾನ ಹೊರಹಾಕಿದ್ದರು

ಜಾರಕಿಹೊಳಿ ಸಹೋದರರು ಅಸಮಾಧಾನ ಹೊರಹಾಕಿದ್ದರು

ಆದರೆ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಅಸಮಾಧಾನವಿದೆ. ಜಾರಕಿಹೊಳಿ ಸಹೋದರರು ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ರಮೇಶ್ ಜಾರಕಿಹೊಳಿ ಕಾಂಗ್ರೆಸ್‌ನಿಂದ ದೂರವಾಗಲು ಈ ಅಸಮಾಧಾನವೇ ಕಾರಣ.

ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದರು

ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದರು

ಇನ್ನು ಗೃಹ ಸಚಿವರ ಎಂ.ಬಿ.ಪಾಟೀಲ್ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ಪಕ್ಷದ ವರಿಷ್ಠರೊಂದಿಗೆ ಖಾರವಾಗಿ ಅಸಮಾಧಾನ ಹೊರ ಹಾಕಿದ್ದ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅವರಷ್ಟೆ ಅಲ್ಲದೆ ಇನ್ನೂ ಕೆಲವು ನಾಯಕರು ಡಿ.ಕೆ.ಶಿವಕುಮಾರ್ ಅವರ ಮೇಲೆ ಅಸಮಾಧಾನ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+