ಕಾಂಗ್ರೆಸ್ ಹತ್ತು ಬಾರಿ ಸುಳ್ಳನ್ನು ಹೇಳಿ ಸತ್ಯವೆಂದು ಬಿಂಬಿಸುತ್ತಿದೆ-ಸುನೀಲ್‌ ಕುಮಾರ್‌

ಬೆಂಗಳೂರು ಅಕ್ಟೋಬರ್ 20: "ಕಾಂಗ್ರೆಸ್ ಪಕ್ಷದ ಸುಳ್ಳುಪ್ರಚಾರಕ್ಕೆ ನಮ್ಮ ಕಾರ್ಯಕರ್ತರು ಸ್ಪಷ್ಟ ಉತ್ತರ ಕೊಡಬೇಕು. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕೆಲಸಗಳನ್ನು ತಿಳಿಸುವ ಕೆಲಸ ಮಾಡಬೇಕು," ಎಂದು ಇಂಧನ ಸಚಿವ ಸುನೀಲ್‌ ಕುಮಾರ್‌ ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಬೆಂಗಳೂರು ನಗರದ ವಯ್ಯಾಲಿಕಾವಲ್‌ನ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ನಡೆದ ಬಿಜೆಪಿ ಎಂಟು ಮೋರ್ಚಾಗಳ 'ಮಾಧ್ಯಮ ಮಂಥನ' ಮೋರ್ಚಾಗಳ ಮಾಧ್ಯಮ ಸಂಚಾಲಕರ ಕಾರ್ಯಾಗಾರವನ್ನು ಇಂಧನ ಸಚಿವ ಸುನೀಲ್‌ ಕುಮಾರ್‌ ಉದ್ಘಾಟಿಸಿದ್ದಾರೆ.

ಬಳಿಕ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವ ಸುನೀಲ್‌ ಕುಮಾರ್‌, "ಕಾಂಗ್ರೆಸ್ ಪಕ್ಷದವರು ಹತ್ತು ಬಾರಿ ಸುಳ್ಳನ್ನು ಹೇಳಿ ಅದನ್ನು ಸತ್ಯವೆಂದು ಬಿಂಬಿಸಲು ಮುಂದಾಗಿದ್ದಾರೆ. ಆದರೆ, ಅದನ್ನು ಜನರು ನಂಬುತ್ತಿಲ್ಲ. ಆದರೂ, ಅದನ್ನು ತಪ್ಪಿಸಲು ನಾವು ಹೆಚ್ಚು ಜಾಗೃತರಾಗಬೇಕು. ಇದಕ್ಕಾಗಿ ನಮ್ಮ ವಿಷಯಗಳನ್ನು ಸಮರ್ಥವಾಗಿ ಹಾಗೂ ಸಕಾಲಿಕವಾಗಿ ಜನರಿಗೆ ತಲುಪಿಸಬೇಕು," ಎಂದು ಕಿವಿಮಾತು ಹೇಳಿದರು.

ಒಳ್ಳೆಯ ವಿಚಾರ ತಿಳಿಸಿ ಜನಜಾಗೃತಿ ಮೂಡಿಸಿ

ಒಳ್ಳೆಯ ವಿಚಾರ ತಿಳಿಸಿ ಜನಜಾಗೃತಿ ಮೂಡಿಸಿ

"ರಾಜ್ಯದಲ್ಲಿ ಅಪಪ್ರಚಾರಗಳೇ ಸದ್ದು ಮಾಡುತ್ತಿವೆ. ಒಳ್ಳೆಯ ವಿಚಾರಗಳಿಗೆ ಸಾಕಷ್ಟು ಪ್ರಚಾರ ಸಿಗುತ್ತಿಲ್ಲ. ನಮ್ಮ ಸರಕಾರದ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ಮತಾಂತರ ನಿಷೇಧ, ಗೋಹತ್ಯಾ ನಿಷೇಧ ಮತ್ತು ಗೋಶಾಲೆಗಳ ನಿರ್ಮಾಣ, ಗ್ರಾಮ ಒನ್ ಯೋಜನೆ, ಯಶಸ್ವಿನಿ ಯೋಜನೆ ಮರುಜಾರಿಯಂಥ ವಿಚಾರಗಳನ್ನು ನಮ್ಮ ತಂಡವು ಜನರಿಗೆ ತಿಳಿಸಬೇಕು. ಅವುಗಳನ್ನು ತಿಳಿಸಿ ಜನಜಾಗೃತಿ ಮೂಡಿಸಿ," ಎಂದು ಮನವಿ ಮಾಡಿದರು.

"ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳು, ನಾಲ್ಕು ಮನೆಗಳ ಮಧ್ಯದಲ್ಲಿ ವಿಚಾರಧಾರೆಯನ್ನು ಹಂಚಿಕೊಂಡು ಸಂಘಟನೆಗಳು ಬೆಳೆದುಬಂದಿದ್ದವು. ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಮಾಧ್ಯಮಗಳ ವ್ಯಾಪ್ತಿ ವಿಸ್ತಾರಗೊಂಡಿದೆ. ಇಂದು ಮಾಧ್ಯಮಗಳ ಮೂಲಕ ಹೆಚ್ಚು ಸಂಗತಿ ತಿಳಿಸಬೇಕಾದ ವೇಗದ ಕಾಲಘಟ್ಟದಲ್ಲಿ ನಾವಿದ್ದೇವೆ," ಎಂದು ಸುನೀಲ್‌ ಕುಮಾರ್‌ ತಿಳಿಸಿದರು.

ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಿ

ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಿ

ಮಾತು ಮುಂದುವರಿಸಿದ ಅವರು, "ಸರ್ಕಾರದ ಕಾರ್ಯಕ್ರಮಗಳು ಮತ್ತು ಪಕ್ಷದ ವಿಚಾರಧಾರೆಯನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಾಜ್ಯ ಸರಕಾರ ಜಾರಿಗೊಳಿಸಿದ 72 ಗಂಟೆಯೊಳಗೆ ಪಿಂಚಣಿ ಕೊಡುವ ಕಂದಾಯ ಇಲಾಖೆಯ ದೊಡ್ಡ ಕಾರ್ಯಕ್ರಮ, ಇಂಧನ ಇಲಾಖೆಯಿಂದ ಜಾರಿಗೊಳಿಸಲಾದ ಬೆಳಕು ಯೋಜನೆ, ಅಮೃತ ಜ್ಯೋತಿ ಯೋಜನೆಯಡಿ ಉಚಿತವಾಗಿ ವಿದ್ಯುತ್ ಕೊಡುವ ಕಾರ್ಯಕ್ರಮ, ಸ್ತ್ರೀಶಕ್ತಿ ಗುಂಪುಗಳಿಗೆ 1 ಲಕ್ಷ ಅನುದಾನ ಸೇರಿದಂತೆ ವಿವಿಧ ಜನೋಪಯೋಗಿ ಕಾರ್ಯಗಳು ಸೇರಿದಂತೆ ಕೇಂದ್ರ ಬಿಜೆಪಿ ಸರ್ಕಾರವು ಕೋವಿಡ್ ಹಿನ್ನೆಲೆಯಲ್ಲಿ ಒಂದೂವರೆ ವರ್ಷಗಳಿಂದ ಕೊಡುತ್ತಿರುವ ಉಚಿತ ಪಡಿತರದಂಥ ಯೋಜನೆಯ ಬಗ್ಗೆ ಜನಜಾಗೃತಿ ಮೂಡಿಸುವಂತೆ ಕಾರ್ಯಕರ್ತರಿಗೆ ಹೇಳಿದರು.

ವರ್ಕ್‌ ಬೋರ್ಡ್ ಆಸ್ತಿಯನ್ನು ನುಂಗಿದ ಕಾಂಗ್ರೆಸ್‌

ವರ್ಕ್‌ ಬೋರ್ಡ್ ಆಸ್ತಿಯನ್ನು ನುಂಗಿದ ಕಾಂಗ್ರೆಸ್‌

"ರಾಜ್ಯದಲ್ಲಿ 20 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯ ಲಾಭ ಸಿಗುತ್ತಿದೆ. ಮೀಸಲಾತಿ ಹೆಚ್ಚಳ ವಿಚಾರವನ್ನು ಮೋರ್ಚಾಗಳು ಜನಮಾನಸಕ್ಕೆ ತಿಳಿಸಬೇಕಿದೆ. 2 ಸಾವಿರ ಕೋಟಿ ರೂಪಾಯಿ ಮೌಲ್ಯದ ವರ್ಕ್‌ ಬೋರ್ಡ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿದ ಹಗರಣ ನಡೆದಿದೆ. ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಇದನ್ನು ತಿಳಿ ಹೇಳಬೇಕು ಕೇವಲ ಪತ್ರಿಕಾಗೋಷ್ಠಿ ಮಾಡಿದರೆ ಸಾಲದು. ಸಣ್ಣ ವಿಡಿಯೋ, ಕರಪತ್ರದಂಥ ಅವಕಾಶಗಳನ್ನು ಬಳಸಿಕೊಳ್ಳಿ" ಎಂದು ಹೇಳಿದರು.

ಸಚಿವ ಸುನೀಲ್‌ ಕುಮಾರ್‌ ಸೇರಿದಂತೆ ಗಣ್ಯರ ಸಮಾಗಮ

ಸಚಿವ ಸುನೀಲ್‌ ಕುಮಾರ್‌ ಸೇರಿದಂತೆ ಗಣ್ಯರ ಸಮಾಗಮ

ವಯ್ಯಾಲಿಕಾವಲ್‌ನ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ನಡೆದ ಬಿಜೆಪಿ ಎಂಟು ಮೋರ್ಚಾಗಳ 'ಮಾಧ್ಯಮ ಮಂಥನ' ಮೋರ್ಚಾಗಳ ಮಾಧ್ಯಮ ಸಂಚಾಲಕರ ಕಾರ್ಯಾಗಾರದಲ್ಲಿ ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ, ರಾಜ್ಯ ಎಸ್.ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಡಾ. ಸಂದೀಪ್ ಕುಮಾರ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+