ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ಕಲಬುರಗಿ ಆಸ್ಪತ್ರೆಗೆ ಸಚಿವ ಖಾದರ್ ಭೇಟಿ

|
Google Oneindia Kannada News

ಕಲಬುರಗಿ, ಮಾರ್ಚ್ 24 : ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಆಕಸ್ಮಿಕದ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬುಧವಾರ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿತ್ತು. ಸಿಬ್ಬಂದಿಯ ಸಮಯಪ್ರಜ್ಞೆಯಿಂದ 26 ಮಕ್ಕಳನ್ನು ರಕ್ಷಣೆ ಮಾಡಲಾಗಿತ್ತು.

ಗುರುವಾರ ಮುಂಜಾನೆ 2 ಗಂಟೆಗೆ ಯು.ಟಿ.ಖಾದರ್ ಅವರು, ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು. ಅವಧಿ ಪೂರ್ವ ಜನಿಸುವ ಶಿಶುಗಳ ಆರೈಕೆ ವಿಭಾಗ (ಎಸ್‌ಎನ್‌ಸಿಯು)ದಲ್ಲಿ ನಡೆದ ಬೆಂಕಿ ಅನಾಹುತದ ಬಗ್ಗೆ ಪರಿಶೀಲನೆ ನಡೆಸಿದರು. [ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ, 26 ನವಜಾತ ಶಿಶುಗಳ ರಕ್ಷಣೆ]

ut khader

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, 'ಆಸ್ಪತ್ರೆಯ ಎಸ್‍ಎನ್‍ಸಿಯು ವಾರ್ಡ್ ಚೆನ್ನಾಗಿಯೇ ಇದೆ. ಆದರೆ, ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅನಾಹುತ ಸಂಭವಿಸಿರುವುದು ದುರದೃಷ್ಟಕರ. ಈ ಘಟನೆಗೆ ಸಂಬಂಧಿಸಿದಂತೆ ವರದಿ ಬಂದ ಬಳಿಕ ಸತ್ಯಾಂಶ ಹೊರ ಬೀಳಲಿದೆ' ಎಂದರು. [ಸರ್ಕಾರಿ ಆಸ್ಪತ್ರೆಗಳ ಕಥೆ ಬಿಚ್ಚಿಟ್ಟ ಸಿಎಜಿ ವರದಿ]

ಹಾನಿಗೀಡಾದ ಎಸ್‍ಎನ್‍ಸಿಯು ವಾರ್ಡ್ ತುರ್ತು ದುರಸ್ತಿಗೊಳಿಸಿ ಪುನರಾರಂಭಿಸಲು ಅನುವಾಗುವಂತೆ ಕೂಡಲೇ ಅಂದಾಜುಪಟ್ಟಿ ತಯಾರಿಸಿ ಪ್ರಸ್ತಾವನೆಯನ್ನು ಕಳುಹಿಸುವಂತೆ ಜಿಲ್ಲಾ ಸರ್ಜನ್ ಅವರಿಗೆ ಸಚಿವರು ಸೂಚಿಸಿದರು. [ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದರಾಮಯ್ಯ]

'ಈ ಅಗ್ನಿ ಆಕಸ್ಮಿಕದಲ್ಲಿ ವಾರ್ಡ್‌ನಲ್ಲಿರುವ ಎಲ್ಲ 26 ನವಜಾತ ಶಿಶುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಶಿಶುವಿಗೂ ಸುಟ್ಟ ಗಾಯವಾಗಿಲ್ಲ್ಲ. ಈ ಮಕ್ಕಳನ್ನು ಕಲಬುರಗಿಯ ಬಸವೇಶ್ವರ, ಕೆ.ಬಿ.ಎನ್. ಮತ್ತು ಸಂಗಮೇಶ್ವರ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಶಿಶುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುವುದು' ಎಂದು ತಿಳಿಸಿದರು.

ನವಜಾತ ಶಿಶುಗಳನ್ನು ಪಾರು ಮಾಡಲು ಶ್ರಮಿಸಿದ ಸ್ಟಾಫ್ ನರ್ಸ್ ಫಕೀರಪ್ಪ ದೊಡ್ಡಮನಿ ಅವರ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಫಕೀರಪ್ಪ ಅವರ ಯೋಗ ಕ್ಷೇಮವನ್ನು ಸಹ ವಿಚಾರಿಸಿದರು. ಬಸವೇಶ್ವರ, ಕೆ.ಬಿ.ಎನ್. ಮತ್ತು ಸಂಗಮೇಶ್ವರ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಶಿಶುಗಳ ಮತ್ತು ತಾಯಂದಿರ ಯೋಗಕ್ಷೇಮ ವಿಚಾರಿಸಿದರು. [ಐಸಿಯು ಕೋಣೆಗೆ ವಿಧಿಸಿದ್ದ ಹೆಚ್ಚುವರಿ ತೆರಿಗೆ ನೀತಿ ಹಿಂದಕ್ಕೆ]

ರಾಜ್ಯ ಸರ್ಕಾರ ಕಲಬುರಗಿಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆ ಪ್ರಾರಂಭಿಸುವ ಬಗ್ಗೆ ಈಗಾಗಲೇ 2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ಕಲಬುರಗಿ ಜಿಲ್ಲೆಯ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಬುಧವಾರ ಅಗ್ನಿ ಆಕಸ್ಮಿಕ ಸಂಭವಿಸಿತ್ತು : ಕಲಬುರಗಿ ಜಿಲ್ಲಾ ಆಸ್ಪತ್ರೆಯ ಎಸ್‌ಎನ್‌ಸಿಯುದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಅನಾಹುತ ಸಂಭವಿಸಿತ್ತು. ಸಿಬ್ಬಂದಿ ಸಮಯ ಪ್ರಜ್ಞೆಯಿಂದ 26 ಶಿಶುಗಳು ಪ್ರಾಣಾಪಾಯದಿಂದ ಪಾರಾಗಿದ್ದವು.

English summary
Karnataka Health and family welfare minister U.T.Khader on March 24th, morning visited government general hospital in Kalaburagi. 26 new borns in the Neonatal Intensive Care Unit (NICU) miraculously escaped after a major fire erupted at hospital on Wednesday afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X