ನಾಲ್ಕು ವರ್ಷಗಳಿಂದ ಎಲ್ಲಿದ್ದೆ; ಆನಂತ್ ಕುಮಾರ್ ಹೆಗ್ಡೆಗೆ ವಾರ್ನಿಂಗ್ ಮಾಡಿದ ಸಚಿವ ಶಿವರಾಜ್ ತಂಗಡಗಿ
ಚಿತ್ರದುರ್ಗ,ಜನವರಿ 16: ಅನಂತ್ ಕುಮಾರ್ ಹೆಗ್ಡೆ ಗೌರದಿಂದ ಮಾತನಾಡಲಿ. ನಾಲ್ಕು ವರ್ಷದಿಂದ ಯಾವ ಮೂಲೆಯಲ್ಲಿದ್ದ ಎಂದು ಸಮಾಜ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ದೇಶ, ಧರ್ಮದ ಬಗ್ಗೆ ಮಾತನಾಡಿದರೆ ದೊಡ್ಡವನಾಗಲ್ಲ. ಬದಲಿಗೆ ನಾಲ್ಕು ವರ್ಷದ ನಿನ್ನ ಕ್ಷೇತ್ರದಲ್ಲಿನ ಸಾಧನೆ ಹೇಳಿ ಎಂದು ಸವಾಲು ಹಾಕಿದರು. ಅಲ್ಲದೆ ಆನಂತ್ ಕುಮಾರ್ ಹೆಗ್ಡೆಗೆ ವಾರ್ನ್ ಮಾಡಿದ್ದೇವೆ. ನಮ್ಮ ನಾಯಕರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ ಎಂದಿದ್ದೇವೆ ಎಂದರು.

ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆಗೆ ಮನೆ ಮನೆಗೆ ಮಂತ್ರಾಕ್ಷತೆ ವಿಸ್ತರಿಸಿರುವುದಕ್ಕೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಹಸಿದ ಹೊಟ್ಟೆಗೆ ಅನ್ನ ಕೊಡಿ ದೇಶದಲ್ಲಿ ಮನೆ ಇಲ್ಲದವರಿಗೆ ಮನೆ ನೀಡಿ. ದೇಶದಲ್ಲಿ ಮಂತ್ರಾಕ್ಷತೆ ಬಿಟ್ಟು ಹಸಿದ ಹೊಟ್ಟೆಗೆ ಅನ್ನ ಕೊಡಿ. ಉದ್ಯೋಗ ಇಲ್ಲದೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ. ಮಂತ್ರಾಕ್ಷತೆಯಿಂದ ಯಾವ ಲಾಭ ಇಲ್ಲ. ನಾವು ಕೂಡಾ ರಾಮ, ಹನುಮನ ಭಕ್ತರು ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ರಾಮನ ಗುಡಿಯಲ್ಲಿ ನೀರು ಹಾಕುವ ಬದಲು. ದೇಶದ ನಿರುದ್ಯೋಗ, ಬಡತನ ಬಗೆರಿಸಬೇಕಿದೆ. ಮಂತ್ರಾಕ್ಷತೆಯಿಂದ ಹೊಟ್ಟೆ ತುಂಭಲ್ಲ ಎಂದು ಜನರಿಗೆ ಅರ್ಥ ಆಗಿದೆ. ದಯಮಾಡಿ ಇಂಥ ನಾಟಕ ಕಂಪನಿ ಬಿಟ್ಟು ವಾಸ್ತವ ಅರಿಯಬೇಕಿದೆ. ಬಿಜೆಪಿಗೆ ಎಲೆಕ್ಷನ್ ಬಂದಾಗ ಧರ್ಮ, ಪಾಕಿಸ್ತಾನ, ದೇವಸ್ಥಾನ, ಮಸೀದಿ ನೆನಪಾಗುತ್ತವೆ.10 ವರ್ಷದ ಮೋದಿಯ ಸಾಧನೆ ಏನೂ ಎಂದು ಹೇಳಬೇಕಿದೆ. ರಾಮ ಮಂದಿರ ಕಟ್ಟಲಿ, ರಾಮ ಮಂದಿರ ಓಪನ್ ಮಾಡಿದ್ದು ರಾಜೀವ್ ಗಾಂಧಿ ಎಂದರು.
ಇದೇ ತಿಂಗಳ 28ರಂದು ಚಿತ್ರದುರ್ಗದ ಹೊರವಲಯದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ ಕುರಿತು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ಅಗತ್ಯ ಇಲ್ಲ. ರಾಜ್ಯದ ಜನತೆ ಸಿದ್ದರಾಮಯ್ಯ ಅವರಿಗೆ ಶಕ್ತಿ ಕೊಟ್ಟಿದ್ದಾರೆ. ಶೋಷಿತ ಸಮುದಾಯಗಳಿಂದ ಬೇಡಿಕೆ ಸಲ್ಲಿಕೆಗೆ ಈ ಸಮಾವೇಶ ನಡೆಯಲಿದೆ. ಎಲ್ಲ ಸಮಾಜಗಳ ಸಂಘಟನೆ ಅವಶ್ಯಕವಾಗಿದೆ, ಸಮಾವೇಶ ಮಾಡುವುದು ತಪ್ಪಲ್ಲ, ಇದು ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಇದು ಹೇಳುವುದು ತಪ್ಪು ಎಂದಿದ್ದಾರೆ.

ಇನ್ನು ರಾಜ್ಯದಲ್ಲಿ ಕಾಂತರಾಜ್ ವರದಿ ಕುರಿತು ಚರ್ಚೆ ನಡೆಯುತ್ತಿದೆ. ಕಾಂತರಾಜ್ ವರದಿ ಜಾತಿ ಜನಗಣತಿ ಅಲ್ಲ. ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದ ಜನಾಂಗಗಳ ವರದಿಯಾಗಿದೆ. ಸಿಎಂ 61 ಕೋಟಿ ನೀಡಿ ವರದಿ ತಯಾರು ಮಾಡಿಸಿದ್ದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರಿಗೆ ಹಿಂದುಳಿದವರ ಬಗ್ಗೆ ಕಾಳಜಿ ಇಲ್ಲ. ಇವರು ರಾಜ್ಯದಲ್ಲಿ ಸುಮ್ನೇ ನಾಟಕ ಆಡುತ್ತಿದ್ದಾರೆ ಎಂದು ಮಾಜಿ ಸಿಎಂಗಳ ವಿರುದ್ಧ ವ್ಯಂಗ್ಯವಾಡಿದರು.
ಇನ್ನೂ ವರದಿ ಸ್ವೀಕರಿಸಿಲ್ಲ, ಆಗಲೇ ಅವೈಜ್ಞಾನಿಕ, ವಾಸ್ತವ ಸತ್ಯ ಇಲ್ಲ ಎನ್ನುತ್ತಿದ್ದಾರೆ. ವರದಿ ತೆಗೆದುಕೊಂಡ ಬಳಿಕ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಯಬೇಕು. ಕಾಂತರಾಜ್ ವರದಿ ವಿರೋಧ ಮಾಡುತ್ತಿರುವುದು ತಪ್ಪು.
ವರದಿ ಕುರಿತು ಚರ್ಚೆಯಾಗಬೇಕು, ಆಗ ವರದಿಗೆ ಮೌಲ್ಯ ಬರುತ್ತದೆ ಎಂದರು. ಇನ್ನು ಹಾನಗಲ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.












Click it and Unblock the Notifications