ನಿಮ್ಮ ವಿರೋಧ ಪಕ್ಷದ ನಾಯಕ ಎಲ್ಲಿದ್ದಾರೆ? ಪ್ರಿಯಾಂಕ ಖರ್ಗೆ ವ್ಯಂಗ್ಯ
ಬೆಂಗಳೂರು, ಜುಲೈ10: ಬಿಜೆಪಿಗೆ ವಿರೋಧ ಪಕ್ಷದ ನಾಯಕರು ಎಲ್ಲಿದ್ದಾರೆ. ಇದು ಕೇಂದ್ರದ ಬಿಜೆಪಿ ನಾಯಕರು ಸದನಕ್ಕೆ ಮಾಡುತ್ತಿರುವ ಅಪಮಾನ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯವರು ಸದನದ ಪರಂಪರೆಗೆ ಒಂದು ಕಪ್ಪು ಚುಕ್ಕೆ ಇಡುತ್ತಿದ್ದಾರೆ. ಆಡಳಿತ ಪಕ್ಷದ ರೀತಿ ವಿರೋಧ ಪಕ್ಷವೂ ಇರಬೇಕು ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಈ ವೇಳೆ ಜೈನ ಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜೈನ ಮುನಿ ಹತ್ಯೆ ಪ್ರಕರಣದಲ್ಲಿ ಐಸೀಸ್ ಉಗ್ರರ ಕೈವಾಡ ಇದೆ ಎಂದು ಬಿಜೆಪಿ ಶಾಸಕ ಸಿದ್ದು ಸವದಿ ಹೇಳಿದ್ದಾರೆ. ನಿಮ್ಮ ಬಳಿ ಮಾಹಿತಿ ಇದ್ದರೆ ತನಿಖಾ ಏಜೆನ್ಸಿ ಗಳಿಗೆ ಕೊಡಿ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಬಜೆಟ್ ಮಂಡನೆಯಾಗಿದೆ, ಸದನ ನಡೆಯುತ್ತಿದೆ. ಆದ್ರೆ ನಿಮ್ಮ ವಿರೋಧ ಪಕ್ಷದ ನಾಯಕ ಎಲ್ಲಿದ್ದಾರೆ? ಎಂದು ಬಿಜೆಪಿ ನಾಯಕರ ವಿರುದ್ದ ತಿರುಗೇಟು ನೀಡಿದರು.
ಜೈನ ಮುನಿ ಹತ್ಯೆ ಸಿಬಿಐಗೆ ವಹಿಸುವ ವಿಚಾರವಾಗಿ ಮಾತನಾಡಿ, ನಮ್ಮ ತನಿಖಾ ಸಂಸ್ಥೆಗಳಿಗೆ ಸಾಮರ್ಥ್ಯ ಇಲ್ಲ ಎಂದು ಅಂದುಕೊಂಡಿದ್ದಾರಾ. ಇವರ ಹತ್ತಿರ ದಾಖಲೆ ಇದ್ದರೇ, ಗೃಹ ಇಲಾಖೆ ಕೊಡಿ. ರಾಜ್ಯ ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದು ಹೇಳಿದರು.
ಇನ್ನೂ ಬೆಳಗಾವಿ ಚಿಕ್ಕೋಡಿ ತಾಲ್ಲೂಕಿನಲ್ಲಿ ಜೈನ ಮುನಿ ಹತ್ಯೆ ಪ್ರಕರಣವನ್ನ ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿ ಮಾತನಾಡಿದ ಬಿಜೆಪಿ ಸದಸ್ಯ ಅಭಯ ಪಾಟೀಲ್, ಜೈನ ಮುನಿ ನಾಪತ್ತೆಯಾದ ವಿಚಾರವಾಗಿ ದೂರು ನೀಡಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಟ್ರಸ್ಟ್ ಸದಸ್ಯರು ಆರೋಪ ಮಾಡಿದ್ದರು. ಹತ್ತೆ ಆರೋಪಿ ಒರ್ವನ ಹೆಸರು ಮಾತ್ರ ಬಹಿರಂಗವಾಗಿ ಪೊಲೀಸರು ಹೇಳಿದ್ದಾರೆ. ಆದರೆ ಮತ್ತೋರ್ವನ ಹೆಸರನ್ನು ಬಹಿರಂಗವಾಗಿ ಹೇಳಿಲ್ಲ, ಇದು ಸಂಶಯಕ್ಕೆ ಕಾರಣವಾಗಿದೆ ಎಂದು ಆರೋಪ ಮಾಡಿದರು.
ಎರಡನೇ ಆರೋಪಿ ಹೆಸರು ಏಕೆ ಹೇಳುತ್ತಿಲ್ಲ. ಪೊಲೀಸರು ಟ್ರಸ್ಟೀಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಇದೆ. ದಿಗಂಬರ ಸಮಾಜದ ಮುನಿಗಳು ಆರ್ಥಿಕ ವ್ಯವಹಾರ ಮಾಡಲು ಸಾಧ್ಯವಿಲ್ಲ. ಆದರೆ, ಸ್ವಾಮೀಜಿಗಳು ಎಲ್ಲಾ ತ್ಯಾಗ ಮಾಡಿ ಸನ್ಯಾಸಿ ಆಗಿದ್ದಾರೆ. ಯಾರ ಒತ್ತಡದಿಂದ ಪೊಲೀಸರು ಮುನಿಗಳು ಆರ್ಥಿಕ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಬೇಕು
ಇದನ್ನು ಸಿಬಿಐಗೆ ನೀಡಬೇಕು ಎಂದು ಅಭಯ ಪಾಟೀಲ್ ಆಗ್ರಹಿಸಿದರು.
ಇನ್ನೂ ಈ ವೇಳೆ ಲಕ್ಷ್ಮಣ ಸವದಿ ಮಾತನಾಡಿ, ಮುನಿಗಳ ಜತೆ ನಾನು ನಿಕಟ ಸಂಪರ್ಕದಲ್ಲಿದ್ದೆ. ಅವರು ಜಮೀನ್ದಾರರ ಕುಟುಂಬದಿಂದ ಬಂದವರು, ಕಟುವಾಗಿ ದೇಹ ದಂಡಿಸುತ್ತಿದರು.
ನನ್ನ ಮನೆಯಲ್ಲಿ ಅವರಿಗೆ ಊಟ ಮಾಡಿಸಿದ್ದೇನೆ. ಒಮ್ಮೆ ಊಟ ಮಾಡಿದ ಮೇಲೆ 24 ಗಂಟೆ ಉಪವಾಸ ಮಾಡುತ್ತಿದ್ದರು. ಸಲ್ಲೇಖನ ವೃತ ಕೈಗೊಂಡು ಅವರು ಪ್ರಾಣ ತ್ಯಾಗ ಮಾಡ್ತಾರೆ. ಈ ಸಾವು ಅಮಾನವೀಯ, ಪರಿಚಯಸ್ಥರಿಂದ ಕೊಲೆ ಆಗಿದೆ. ಕರೆಂಟ್ ಶಾಕ್ ಕೊಟ್ಟು ಕೊಲೆ ಆಗಿದೆ, ದೇಹವನ್ನ ತುಂಡುತುಂಡಾಗಿ ಮಾಡಿ ಬೋರ್ ವೆಲ್ ಒಳಗೆ ಹಾಕಿದ್ದಾರೆ. ಪೊಲೀಸರು ಬೇಗ ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ, ಇದರ ಹಿಂದೆ ಯಾರೇ ಇದ್ದರು ಕ್ರಮ ಆಗಬೇಕು ಎಂದು ಹೇಳಿದರು.












Click it and Unblock the Notifications