ಕಾಂಗ್ರೆಸ್ ಗ್ಯಾರೆಂಟಿಗಳು ಜನರಿಗೆ ತಲುಪಲ ಬಿಡದಂತೆ ಕೇಂದ್ರ ಸರ್ಕಾರ ಷಡ್ಯಂತ್ರ : ಪ್ರಿಯಾಂಕ್ ಖರ್ಗೆ
ಬೆಂಗಳೂರು, ಜೂನ್14: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಂಚ ಗ್ಯಾರಂಟಿಗಳ ಜಾರಿಗೆ ಸರ್ಕಾರ ಮುಂದಾಗಿದ್ದು, ಕೇಂದ್ರ ಸರ್ಕಾರದಿಂದ ಅನ್ನ ಭಾಗ್ಯಕ್ಕೆ ಕೊಕ್ಕೆ ಬಿದ್ದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇನ್ನೂ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರದ ಆದೇಶದ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಹಸಿವು ಮುಕ್ತ ರಾಜ್ಯ ನಿರ್ಮಿಸಲು ಕಾಂಗ್ರೆಸ್ ಸರ್ಕಾರ ಜನರಿಗೆ 10KG ಅಕ್ಕಿ ನೀಡಲು ಪಣ ತೊಟ್ಟಿದೆ.

ಈ ನಿಟ್ಟಿನಲ್ಲಿ ಅಗತ್ಯವಿದ್ದ ಹೆಚ್ಚುವರಿ ಅಕ್ಕಿಯನ್ನು FCIನಿಂದ ಖರೀದಿಗೆ ನಾವು ಮುಂದಾಗಿರುವಾಗ, ಕೇಂದ್ರ BJP ಸರ್ಕಾರ ರಾಜ್ಯಗಳಿಗೆ FCI ಅಕ್ಕಿ ಮಾರಾಟ ಮಾಡದಂತೆ ಆದೇಶಿಸಿ ಬಡಜನರ ಹೊಟ್ಟೆಗೆ ಹೊಡೆಯುವ ದುಷ್ಟ ರಾಜಕಾರಣಕ್ಕೆ ಮುಂದಾಗಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಗ್ಯಾರೆಂಟಿಗಳು ಜನರಿಗೆ ತಲುಪಲ ಬಿಡದಂತೆ ಕೇಂದ್ರ BJP ಸರ್ಕಾರದ ಈ ರೀತಿ ಷಡ್ಯಂತ್ರ ನಡೆಸಲು ಮುಂದಾಗಿರುವುದು ನಾಚಿಗೇಡಿನ ವಿಚಾರ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 14, 2023
ಈಗಾಗಲೇ ರಾಜ್ಯದಲ್ಲಿ BJP 63 ಮತ್ತೊಂದು ಸೀಟಿಗೆ ತೃಪ್ತಿಪಡಬೇಕಾಗಿದೆ. ಇದೇ ರೀತಿ ದುಷ್ಟ ರಾಜಕಾರಣ ಮುಂದುವರೆಸಿದರೆ, ಮುಂದೆ ಅದು 6 ಮತ್ತು 3 ಆಗಲಿದೆ. ಇದು ಗ್ಯಾರಂಟಿ.
2/2
ಕಾಂಗ್ರೆಸ್ ಗ್ಯಾರೆಂಟಿಗಳು ಜನರಿಗೆ ತಲುಪಲ ಬಿಡದಂತೆ ಕೇಂದ್ರ BJP ಸರ್ಕಾರದ ಈ ರೀತಿ ಷಡ್ಯಂತ್ರ ನಡೆಸಲು ಮುಂದಾಗಿರುವುದು ನಾಚಿಗೇಡಿನ ವಿಚಾರ. ಈಗಾಗಲೇ ರಾಜ್ಯದಲ್ಲಿ BJP 63 ಮತ್ತೊಂದು ಸೀಟಿಗೆ ತೃಪ್ತಿಪಡಬೇಕಾಗಿದೆ. ಇದೇ ರೀತಿ ದುಷ್ಟ ರಾಜಕಾರಣ ಮುಂದುವರೆಸಿದರೆ, ಮುಂದೆ ಅದು 6 ಮತ್ತು 3 ಆಗಲಿದೆ. ಇದು ಗ್ಯಾರಂಟಿ ಎಂದು ಹೇಳಿದ್ದಾರೆ.
ಉಚಿತ ವಿದ್ಯುತ್, ಬಿಲ್ ಕಟ್ಟದಂತೆ ಬಿಜೆಪಿ ಅಭಿಯಾನ!
ಗ್ಯಾರಂಟಿ ಭರವಸೆಗಳನ್ನು ಬೇಗ ಈಡೇರಿಸಿ, ಇಲ್ಲದಿದ್ರೆ ವಚನ ಭ್ರಷ್ಟರಾಗುತ್ತೀರಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದೆ. ಆದರೆ ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ ಒಂದು ಯೋಜನೆ ಮಾತ್ರ ಜಾರಿಗೊಂಡಿದೆ. ವಿದ್ಯುತ್ ಬಿಲ್ ಮೂರು ಪಟ್ಟು ಹೆಚ್ಚಾಗಿದೆ. ಬಿಲ್ ಕಟ್ಟದಿದ್ದರೆ ಪೊಲೀಸ್ ರಕ್ಷಣೆಯಲ್ಲಿ ವಿದ್ಯುತ್ ಕಡಿತ ಮಾಡುವ ಸೂಚನೆ ನೀಡಲಾಗಿದೆ. ಇದನ್ನು ವಿರೋಧಿಸಿ ಜನಪರ ಹೋರಾಟ ರೂಪಿಸಲಾಗುವುದು
ಸರಕಾರ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದು, ಯಾರೂ ವಿದ್ಯುತ್ ಬಿಲ್ ಕಟ್ಟದಂತೆ ಮನೆಮನೆಗೆ ತೆರಳಿ ಜನಜಾಗೃತಿ ಮೂಡಿಸಲು ಬಿಜೆಪಿಯಿಂದ ಅಭಿಯಾನ ಆರಂಭಿಸಲಾಗುವುದು ಎಂದ ಅವರು, ಬಿಜೆಪಿ ಆಡಳಿತದ ಕೊನೆಯ ಅವಧಿಯಲ್ಲಿ ವಿವಿಧ ಇಲಾಖೆಗಳಿಗೆ ಮಂಜೂರು ಮಾಡಲಾದ 20,000 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿ ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಆದರೆ ವಿದ್ಯುತ್ ದರ ಹೆಚ್ಚಳ ಮಾಡಿರುವ ಆದೇಶವನ್ನು ವಾಪಸ್ ಪಡೆಯಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಚುನಾವಣೆ ಮೊದಲು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಬಳಿಕ ಹಲವು ಷರತ್ತುಗಳನ್ನು ವಿಧಿಸುತ್ತಿದೆ ಎಂದರು.












Click it and Unblock the Notifications