ಮೋದಿ ಸ್ವಾಗತಕ್ಕೆ ಬಾರದ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲಿ ಎಂದ ಬಿಜೆಪಿ ಸಂಸದ: ಖರ್ಗೆ ಹೇಳಿದ್ದೇನು?

ಕಲಬುರಗಿ, ಜನವರಿ 24: ಪ್ರಧಾನಿ ಮೋದಿ ಸ್ವಾಗತಕ್ಕೆ ಬಾರದ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂಬ ಸಂಸದ ಡಾ. ಉಮೇಶ ಜಾಧವ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್‌ ಖರ್ಗೆ, ಇದು ಸಂಸದ ಉಮೇಶ ಜಾಧವರ ಅವಿವೇಕತನದ ಪರಮಾವಧಿ ಎಂದು ಹೇಳಿದ್ದಾರೆ.

ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಇವರಿಗೆ ಪ್ರೋಟೋಕಾಲ್ ಏನಿದೆ ಗೊತ್ತಿದೆಯಾ.? ಉಮೇಶ ಜಾಧವ್ ಅವರಿಗೆ ತಿಳುವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ, ಅಥವಾ ಬೇಕಂತಾನೇ ಮಾಡ್ತಾರೋ ಗೊತ್ತಿಲ್ಲ. ತಮ್ಮ ಕಾರ್ಯವೈಖರಿ ಮುಚ್ಚಲು ಪದೇ ಪದೇ ನನ್ನ ಹೆಸರು ಜಪಾ ಮಾಡುತ್ತಿದ್ದಾರೆ.

Minister Priyank Kharge attacked Umesh Jadhav

ಬಿಜೆಪಿಯವರಿಗೆ ನಾನು ಮನೆ ದೇವ್ರು ಆಗಿ ಬಿಟ್ಟಿದ್ದೇನೆ. ನನ್ನ ಹೆಸರು ಹೇಳದಿದ್ರೆ ಅವರಿಗೆ ನಿದ್ರೆನೂ ಬರಲ್ಲ.. ಊಟಾನೂ ಜೀರ್ಣ ಆಗಲ್ಲ. ಅಭಿವೃದ್ದಿ ಬಗ್ಗೆ ಪ್ರಧಾನಿಗೆ ಮನವಿ ಕೊಡಬೇಕಿತ್ತಲ್ವಾ.? ಬೊಕ್ಕೆ ಬದಲಿಗೆ ಒಂದಾದ್ರೂ ಅರ್ಜಿ ಕೊಡಬಹುದಿತ್ತಲ್ವಾ.? ಅವರ ಲೀಡರ್ ಯಾಕೆ ಬರ್ತಿದಾರೆ ಅಂತಾನೂ ಇವರಿಗೆ ಗೊತ್ತಿಲ್ಲ. ಅಯೋಗ್ಯರು ಎಂದು ವಾಗ್ದಾಳಿ ನಡೆಸಿದರು.

ಅಂಬೇಡ್ಕರ್ ಪ್ರತಿಮೆಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಈಗಾಗಲೇ ‌ನಾಲ್ಕು ಜನರನ್ನ ಬಂಧಿಸಿದ್ದಾರೆ. ನಿನ್ನೆ ಕೆಲವು ಕಡೆ ಕಲ್ಲು ತೂರಾಟ ಮಾಡಿದ್ದಾರೆ. ಅಂತವರ್ಯಾರು ಅಂಬೇಡ್ಕರ್ ಅಭಿಮಾನಿಗಳಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ಧರಣಿ ಕೂಡೋಕೆ ಅವಕಾಶವಿದೆ.‌ಅದು ಬಿಟ್ಟು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ್ದು ಸರಿಯಲ್ಲ. ಅಂತವರ ಮೇಲೂ ಕಠಿಣ ಕ್ರಮ ಕೈಗೊಳ್ತೆವೆ‌. ಸಧ್ಯದಲೆ ಆಸ್ತಿ ಪಾಸ್ತಿ ಹಾನಿ ಮಾಡಿದವರನ್ನೂ ಅರೆಸ್ಟ್ ಮಾಡ್ತೆವೆ. ಅಂಬೇಡ್ಕರ್, ಬಸವಣ್ಣನನ್ನ ಅವಮಾನಿಸೋದು‌ ಮನುವಾದಿಗಳ ಕೆಲಸ ಎಂದರು.

ಪ್ರಧಾನಿ ಮೋದಿ 11 ದಿನಗಳ ಉಪವಾಸ ಕೈಗೊಂಡ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್, ಅವ್ರು ಉಪವಾಸ ಮಾಡಿದ್ರೆ ಒಳ್ಳೆಯದು. ಇಲ್ಲದಿದ್ರೆ ದೇವ್ರು ಅವರಿಗೆ ಶಿಕ್ಷೆ ಕೊಡ್ತಾನೆ ಎಂದು ವ್ಯಂಗ್ಯವಾಡಿದರು. ಬಿಜೆಪಿ, ಆರ್‌ಎಸ್‌ಎಸ್ ಏನೇ ಮಾಡಿದ್ರು ಅವರ ಮೇಲೆ ನನಗೆ ಅನುಮಾನ ಇದೆ. ಅವರು ಬಾಯಿ ಬಿಟ್ಟರೆ ಸುಳ್ಳು ಹೇಳ್ತಾರೆ.. ಸುಳ್ಳೇ ಅವರ ಮನೆ ದೇವ್ರು ಎಂದರು.

ಮೋದಿ ಮಾಡಿದ್ದೆಲ್ಲ ಅನುಮಾನ ಅಂತಲ್ಲ, ಅವರ ಟ್ರಾಕ್ ರೆಕಾರ್ಡ್ ನೋಡಿ. ನೂರು ಸ್ಮಾರ್ಟ್ ಸಿಟಿ ಆಯ್ತಾ,? 2 ಕೋಟಿ ಉದ್ಯೋಗ ಸಿಕ್ಕಿದೆಯಾ? 15 ಲಕ್ಷ ಅಕೌಂಟ್ ಗೆ ಬಂತಾ ? ರೈತರಿಗೆ ಎಮ್ ಎಸ್ ಪಿ ಏನಾಯಿತು?. 11 ದಿನ ಅಲ್ಲ 10 ವರ್ಷದ ರೆಕಾರ್ಡ್ ಚಕ್‌ ಮಾಡಿ. ಅವರ ಟ್ರಾಕ್ ರೆಕಾರ್ಡ ನೋಡಿದ್ರೆ ನಿಮಗೆ ಒಂದು ಬಾರಿ ಅನುಮಾನ ಬರತ್ತೆ. ಬಿಜೆಪಿ ಏನೇ ಮಾಡುತ್ತೆ ಅದೆಲ್ಲದರ ಮೇಲೆ ನನಗೆ ಅನುಮಾನ ಇದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಚಕ್ರವರ್ತಿ ಸೂಲಿಬೆಲೆ ಅವ್ಯಚವಾಗಿ ನಿಂಧಿಸಿದ ವಿಚಾರ ಕುರಿತು ಮಾತನಾಡಿದ ಅವರು, ಸೂಲಿಬೆಲೆ ಚಕ್ರವರ್ತಿ ಬಗ್ಗೆ ಮಾತಾಡಲು ಏನಿಲ್ಲ. ಕೇಸ್ ರೆಜಿಸ್ಟರ್ ಆಗಿದೆ, ಸದ್ಯದಲ್ಲೇ ನೋಟಿಸ್ ಹೋಗುತ್ತೆ, ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇದು ಕ್ಲಿಯರ್ ಕೇಸ್ ಆಫ್ ಮಿಸ್ ಇನ್ಫಾರ್ಮೇಶನ್. ಆತ ಒಬ್ಬ ಬಾಡಿಗೆ ಭಾಷಣಕಾರ.

ಆತ ವಾಟ್ಸಪ್ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್. ಇಂತವರಿಗೆ ಮಾತಾಡಲು ಬಿಟ್ಟರೇ ಇದೆ ಆಗೋದು. ಈತ ತಾನೊಬ್ಬ ದೊಡ್ಡ ವಿದ್ವಾನ ರೀತಿ ಮಾತಾಡ್ತಾನೆ. ಹಿಂದಿನ ಸರಕಾರದಲ್ಲಿ ಇಂತಹ ಸುಳ್ಳು ಹೇಳಲು ಅವನಿಗೆ ಕೋಟ್ಯಾಂತರ. ರೂಪಾಯಿ ಕೊಟ್ಟಿದಾರೆ. ಒಂದು ಗ್ರಾಮ ಪಂಚಾಯತ್ ಗೆಲ್ಲಲು ಯೋಗ್ಯತೆ ಇಲ್ಲ ಅವನಿಗೆ. ಅವನು ಇವತ್ತು ಖರ್ಗೆ ಅವರ ಬಗ್ಗೆ ಮಾತಾಡ್ತಾನೆ ಅಂದ್ರೆ ಆಕಾಶ ನೋಡಿಕೊಂಡು ಉಗುಳಿದಂತೆ ಎಂದು ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+