ಆಪರೇಷನ್ ಹಸ್ತಕ್ಕೆ ಠಕ್ಕರ್ ಕೊಡಲು ಸದ್ದಿಲ್ಲದೇ ನಡೆಯುತ್ತಿದೆ ಆಪರೇಷನ್ ಕಮಲ: ಎಂ ಬಿ ಪಾಟೀಲ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 18: ರಾಜ್ಯದಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಲೋಕಸಭಾ ಚುನಾವಣೆಯ ತಯಾರಿ ನಡುವ ಆಪರೇಷನ್ ಹಸ್ತಕ್ಕೆ ಠಕ್ಕರ್ ಕೊಡಲು ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಆಪರೇಷನ್ ಕಮಲದ ವಿಚಾರವಾಗಿ ಸಚಿವ ಎಂ ಬಿ ಪಾಟೀಲ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಆಪರೇಷನ್ ಕಮಲ ಮಾಡಬೇಕಾದರೆ 65 ಶಾಸಕರು ಬೇಕು. ಅಷ್ಟು ಶಾಸಕರು ಬಿಜೆಪಿಯವರಿಗೆ ಸಿಕ್ತಾರಾ? ಎಂದು ಪ್ರಶ್ನಿಸಿದ ಅವರು, ಐದು ಜನ ಶಾಸಕರು ಸಿಗಲ್ಲ, ಆಪರೇಷನ್ ನಂತರ ಇವರ ಕಥೆ ಏನಾಗಿದೆ ಗೊತ್ತಿದೆಯಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಮುಳುಗುತ್ತಿರೋ ಹಡಗಲ್ಲ. ಬಿಜೆಪಿ ಈಗಾಗಲೇ ಮುಳುಗಿರೋ ಹಡಗು, ಮಾಜಿ ಶಾಸಕರಾದ ಎಂ ಬಿ ರೇಣುಕಾಚಾರ್ಯ ನಿನ್ನೆ ಹೇಳಿಕೆ ಕೊಟ್ಟಿಲ್ವಾ? ಬಿಜೆಪಿಯಲ್ಲಿ ಯಾವುದೇ ನಾಯಕ ಇಲ್ಲ ಅಂತ. ಬಿಜೆಪಿಯಲ್ಲಿ ಏನು ಉಳಿದಿಲ್ಲ, ಸಂಪೂರ್ಣ ನಿರ್ನಾಮ ಆಗುತ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇನ್ನೂ ಐಟಿ ದಾಳಿ ತನಿಖೆ ಮಾಡಿಸಿ ಅನ್ನೋ ಬಿಜೆಪಿ ನಾಯಕ ಆಗ್ರಹಿಸುತ್ತಿರುವ ವಿಚಾರವಾಗಿ ಮಾತನಾಡಿ, ಐಟಿ ದಾಳಿಯಾಗಿದೆ, ಐಟಿ ಅವರೇ ತನಿಖೆ ಮಾಡುತ್ತಾರೆ. ಇದು 40% ಕಮೀಷನ್ ಹಣ.
ಹಾಗಾಗಿ ಬಿಜೆಪಿಯವರ ಹಣನೇ ಅದು, ನಮ್ಮ ಕಾಲದಲ್ಲಿ ಆಗಿರೋದು ಅಲ್ಲ. ನಮ್ಮ ಕಾಲದಲ್ಲಿ ಇನ್ನೂ ಟೆಂಡರೇ ಆಗಿಲ್ಲ ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್‌ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ಮಾಡಿರುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಕುರಿತು ಪಕ್ಷದ ಅಧ್ಯಕ್ಷರು, ಸಿಎಂ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಂತದಲ್ಲಿ ನಿರ್ಧಾರ ಆಗುತ್ತದೆ. ಯಾಕೆ ಭೇಟಿಯಾಗಿದ್ದಾರೆ ಅಂತ ಗೊತ್ತಿಲ್ಲ.ಅದು ವಯಕ್ತಿಕ ಭೇಟಿನಾ, ರಾಜಕೀಯ ಭೇಟಿನಾ ಅಂತ ನಮಗೆ ಗೊತ್ತಿಲ್ಲ. ಮಾಜಿ ಸಚಿವರಾದ ರಮೇಶ್ ಅವರಿಗೆ ಕಾಂಗ್ರೆಸ್ ಬರುವ ಒಲವು ಇರಬಹುದು ಎಂದು ಹೇಳಿದರು.
ಬಿಜೆಪಿ ಕರ್ನಾಟಕದಲ್ಲಿ ಈಗಾಗಲೇ ಧೂಳಿಪಟ: ದಿನೇಶ್ ಗುಂಡೂರಾವ್
ಇನ್ನೂ ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪಂಚರಾಜ್ಯ ಚುನಾವಣೆಗೆ ಕರ್ನಾಟಕ ವನ್ನು ಕಾಂಗ್ರೆಸ್ ಎ ಟಿ ಎಂ ಆಗಿ ಬಳಕೆ ಆರೋಪ ಬಿಜೆಪಿ ಗಂಭೀರ ಆರೋಪ ಕುರಿತು ಕಿಡಿಕಾರಿದ್ದಾರೆ. ಅಲ್ಲದೇ ಬಿಜೆಪಿ ಮುಖಂಡರು ಆಧಾರ ರಹಿತ ಆರೋಪ ಮಾಡುವುದು ಒಂದು ಚಾಳಿ ಆಗಿದೆ,ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡ ತೊಡಗಿದೆ.ಕರ್ನಾಟಕದಲ್ಲಿ ಧೂಳಿಪಟ ಆಗಿದ್ದಾರೆ ಕರ್ನಾಟಕದಲ್ಲಿ ಯಾವರೀತಿ ಆಡಳಿತ ಕೊಟ್ಟಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ.
ಯಾವ ರೀತಿ ಕರ್ನಾಟಕವನ್ನ ಎಟಿಎಂ ಗಿಂತ ಕಡೆಯಾಗಿ ದುರುಪಯೋಗ ಮಾಡಿಕೊಂಡ್ರು ಜನ ನೋಡಿದ್ದಾರೆ. ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಮಸಿ ಬಳಿಯುವ ಯತ್ನ ಮಾಡುತ್ತಿದ್ದಾರೆ. ಸುಳ್ಳಿನ ಆರೋಪ ಮಾಡುತ್ತಿದ್ದಾರೆ ಐ ಟಿ,ಸಿಬಿಐ ಎಲ್ಲಾ ಸಂಸ್ಥೆಗಳು ಅವರ ಕೈ ಯಲ್ಲೇ ಇದೆ. ಐ ಟಿ, ಸಿಬಿಐ ಅವರ ನಿರ್ದೇಶನ ದಂತೆ ನಡೆಯುತ್ತಿದ್ದಾರೆ.ಬಿಜೆಪಿ ಆಡಳಿತ ಸಂದರ್ಭ ಅವರ ಮುಖಂಡರ ಮೇಲೆ ಐಟಿ, ಸಿಬಿಐ ದಾಳಿ ನಾವು ನೋಡಿಲ್ಲ ಐ ಟಿ ರೇಡ್ ಬಗ್ಗೆ ಸಿಬಿಐ ತನಿಖೆಗೆ ಅವರು ಒತ್ತಾಯಿಸುತ್ತಿದ್ದಾರೆ. ಸಿಬಿಐ ಗೆ ಐಟಿ ಅವರೆ ಪ್ರಕರಣವನ್ನು ನೀಡಬೇಕು. ರೇಡ್ ಸಂದರ್ಭ ಯಾರಲ್ಲಿ ಹಣ ಸಿಕ್ಕಿದೆ ಅವರು ಯಾರೂ ಕಾಂಗ್ರೆಸ್ ನವರಲ್ಲ ,ಯಾರೇ ತಪ್ಪು ಮಾಡಿದರೆ ಅವರ ವಿರುದ್ಧ ಕ್ರಮ ಆಗಲಿ . ಅದನ್ನ ಸ್ವಾಗತ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.












Click it and Unblock the Notifications