ಸಚಿವ ಸ್ಥಾನ ದಕ್ಕಿದ್ದಕ್ಕಲ್ಲ: ಆದರೂ, ಮಾಧುಸ್ವಾಮಿ ಖುಷಿಗೆ ಪಾರವೇ ಇಲ್ಲ

Recommended Video

      ರೇವಣ್ಣನ ರೂಂ ಗೆ ವಿಧಾನಸೌಧದಲ್ಲಿ ಭಾರೀ ಬೇಡಿಕೆ..? | HD Revanna

      ಬೆಂಗಳೂರು, ಆ 24: ಇತ್ತೀಚಿನ ದಿನಗಳಲ್ಲಿ ಬಿಜೆಪಿಯನ್ನು ಸಮರ್ಥಿಸಿಕೊಳ್ಳುವಲ್ಲಿ ಮಂಚೂಣಿಯಲ್ಲಿ ಬರುತ್ತಿರುವ ಹೆಸರು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ. ಅವರಿಗೆ ನಿರೀಕ್ಷೆಯಂತೆ, ಸಚಿವ ಸ್ಥಾನವೂ ದಕ್ಕಿದೆ.

      ಯಾವ ಖಾತೆ ಸಿಗಲಿದೆ ಎನ್ನುವುದು ಇನ್ನೂ ಖಾತ್ರಿಯಾಗದಿದ್ದರೂ, ಮಾಧುಸ್ವಾಮಿ ಮಾತ್ರ ಫುಲ್ ಜೋಷ್ ಮತ್ತು ಖುಶಿಯ ಮೂಡ್ ನಲ್ಲಿದ್ದಾರೆ. ಆದರೆ, ಅವರು ಖುಷಿಯಾಗಿರುವುದು ಸಚಿವ ಸ್ಥಾನ ಸಿಕ್ಕಿದ್ದಕ್ಕಲ್ಲ, ಬದಲಿಗೆ, ತನಗೆ ಹಂಚಿಕೆಯಾಗಿರುವ ವಿಧಾನಸೌಧದ ವಿಶೇಷ ಕೊಠಡಿ.

      ವಿಧಾನಸೌಧದ ಕೊಠಡಿ ಸಂಖ್ಯೆ 316ರಲ್ಲಿ ಅದೇನು ವಿಶೇಷ ವಾಸ್ತು ಇದೆಯೋ, ಈ ಕೊಠಡಿ ತಮಗೇ ಕೊಡಬೇಕೆಂದು ಹಲವರು ಯಡಿಯೂರಪ್ಪನವರ ಹಿಂದೆ ಬಿದ್ದಿದ್ದರಂತೆ. ಆದರೆ, ಮುಖ್ಯಮಂತ್ರಿಗಳು ಈ ಕೊಠಡಿಯನ್ನು ತಮ್ಮಾಪ್ತ ಮಾಧುಸ್ವಾಮಿಗೆ ನೀಡಿದ್ದಾರೆ.

      Minister J Madhu Swamy Is In Full Happy Mood For Getting Room No. 316 in LH

      ಈ ಕೊಠಡಿ ತಮಗೆ ಸಿಕ್ಕಿದ್ದಕ್ಕೆ ಮಾಧುಸ್ವಾಮಿ ಖುಷಿಗೆ ಇನ್ನೊಂದು ಕಾರಣವಿದೆ. ಅದು, ಈ ಕೊಠಡಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣನವರ ಕೊಠಡಿಯಾಗಿದ್ದದ್ದು.

      ರೇವಣ್ಣನವರ ಆಫೀಸ್ ಎಂದ ಮೇಲೆ, ವಾಸ್ತು, ಸಂಖ್ಯಾಶಾಸ್ತ್ರದ ಬಗ್ಗೆ ಮತ್ತೆ ಒತ್ತಿ ಹೇಳುವ ಅವಶ್ಯಕತೆಯಿಲ್ಲ. ತಮಗೆ ಹಂಚಿಕೆಯಾಗಿರುವ ಕೊಠಡಿ ಪೂಜೆಯನ್ನು ಮಾಧುಸ್ವಾಮಿ ಮಾಡಿ ಮುಗಿಸಿದ್ದಾರೆ.

      ನೂತನ ಕೊಠಡಿಯ ಮೂಲಕ ಮಾಧುಸ್ವಾಮಿಯವರು ಹೇಗೆ ಜನಮೆಚ್ಚುವ ಕೆಲಸವನ್ನು ಮಾಡುತ್ತಾರೆ ಅನ್ನುವುದಷ್ಟೇ ಸಾರ್ವಜನಿಕರಿಗಿರುವ ಆಸಕ್ತಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+