"ಕರ್ನಾಟಕದಲ್ಲಿ ಶುರುವಾಯ್ತು ಗುಳೆ", ಯಾವ ಕಾರಣಕ್ಕೆ ಗುಳೆ
ರಾಜ್ಯದಲ್ಲಿ ಮುಡಾ ಪ್ರಕರಣದ ನಂತರ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಹಿಂದುಳಿಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತವೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ವಿವಿಧ ವಿಚಾರಕ್ಕೆ ಗುಳೆ (ಊರು ಬಿಡುವುದು) ಆಗುತ್ತಿದೆ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದಿದೆ. ದೇಶದ ಪ್ರಮುಖ ರಾಜ್ಯಗಳಲ್ಲಿ ಹಾಗೂ ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕ ಮುಂದಿದೆ. ಆದರೆ, ನಮ್ಮ ರಾಜ್ಯದಿಂದಲೇ ಗುಳೆ ಹೆಚ್ಚಾಗಿದೆಯೇ..
ದಕ್ಷಿಣ ಹಾಗೂ ಉತ್ತರ ಭಾರತದಿಂದ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಪ್ರತಿ ವರ್ಷವೂ ಲಕ್ಷಾಂತರ ಜನ ಗುಳೆ ಬರುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದಲೂ ಜನ ಕರ್ನಾಟಕಕ್ಕೆ ಗುಳೆ ಬರುತ್ತಿದ್ದಾರೆ. ಬೆಂಗಳೂರಿನಲ್ಲೇ ಉತ್ತರ ಕರ್ನಾಟಕದಿಂದ ಬಂದು ಉದ್ಯೋಗ ಕಟ್ಟಿಕೊಂಡಿರುವವರು ಲಕ್ಷಾಂತರ ಜನ ಇದ್ದಾರೆ. ಉತ್ತರ ಭಾರತದಿಂದ ಕರ್ನಾಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುಳೆ ಅಥವಾ ವಲಸೆ ಬರುತ್ತಾರೆ. ಆದರೆ, ಕರ್ನಾಟಕದಿಂದ ಉಳಿದ ರಾಜ್ಯಗಳಿಗೆ ವಲಸೆ ಹೋಗಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ವಿರಳ.

ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ವಿವಿಧ ವಿಷಯಗಳಲ್ಲಿ ಕರ್ನಾಟಕದಲ್ಲಿ ಗುಳೆ ಪ್ರಾರಂಭವಾಗಿದೆ ಎಂದು ಬಿಜೆಪಿ ದೂರಿದಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವ್ಯಂಗ್ಯವಾಡಿದೆ.
ಬಿಜೆಪಿಯ ಪ್ರಕಾರ, ರಾಜ್ಯದಲ್ಲಿ ನಾಲ್ಕು ಪ್ರಮುಖ ವಿಷಯಗಳಲ್ಲಿ ಗುಳೆ ಪ್ರಾರಂಭವಾಗಿದೆ. ಅದರಲ್ಲಿ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗಾವಕಾಶ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸೇರಿದೆ.
ಬಿಜೆಪಿ ಟ್ವೀಟ್‌ನಲ್ಲಿ ಏನಿದೆ: ಇನ್ನು ಬಿಜೆಪಿ ರಾಜ್ಯದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಗುಳೆ ಪ್ರಾರಂಭವಾಗಿದೆ ಎಂದು ಟ್ವೀಟ್‌ಮಾಡಿದ್ದು. ಅದರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದ ಕಾಂಗ್ರೆಸ್‌ನ ದುರಾಡಳಿತದಲ್ಲಿ, ಕರ್ನಾಟಕದಿಂದ ಅಭಿವೃದ್ಧಿ - ಗುಳೆ ಹೋಗಿದೆ, ಬಂಡವಾಳ ಹೂಡಿಕೆ - ಗುಳೆ ಹೋಗಿದೆ, ಉದ್ಯೋಗಾವಕಾಶ - ಗುಳೆ ಹೋಗಿದೆ ಹಾಗೂ ಕಾನೂನು & ಸುವ್ಯವಸ್ಥೆ - ಗುಳೆ ಹೋಗಿದೆ ಎಂದಿದೆ.
ರಾಜ್ಯದ @INCKarnataka ದ ದುರಾಡಳಿತದಲ್ಲಿ, ಕರ್ನಾಟಕದಿಂದ
— BJP Karnataka (@BJP4Karnataka) October 14, 2024
📈ಅಭಿವೃದ್ಧಿ - ಗುಳೆ ಹೋಗಿದೆ!!
💸ಬಂಡವಾಳ ಹೂಡಿಕೆ - ಗುಳೆ ಹೋಗಿದೆ!!
👔ಉದ್ಯೋಗಾವಕಾಶ - ಗುಳೆ ಹೋಗಿದೆ!!
👨⚖👮♂️ಕಾನೂನು & ಸುವ್ಯವಸ್ಥೆ - ಗುಳೆ ಹೋಗಿದೆ!!#CongressFailsKarnataka pic.twitter.com/yqyamHm9TO
ವ್ಯಂಗ್ಯ ಚಿತ್ರ ರಚಿಸಿ ಟೀಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಪರಮೇಶ್ವರ್, ಎಂ.ಬಿ ಪಾಟೀಲ ಹಾಗೂ ಡಿ.ಕೆ ಶಿವಕುಮಾರ್ ಅವರ ವ್ಯಂಗ್ಯ ಚಿತ್ರವನ್ನು ರಚಿಸಿ ಟೀಕೆ ಮಾಡಲಾಗಿದೆ. ಅದರಲ್ಲಿ ಸಿ.ಎಂ ಹಾಗೂ ಸಚಿವರು ಖಾಲಿ ಚೀಲ ಹಾಗೂ ಖಾಲಿ ಬ್ಯಾಗ್ ಹಿಡಿದುಕೊಂಡು ಹೊರಟಿರುವಂತೆ ತೋರಿಸಲಾಗಿದೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ: ರಾಜ್ಯದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದಲೂ ಕೇಳಿ ಬಂದಿದೆ. ಮುಡಾ (ಮೈಸೂರು ಅಭಿವೃದ್ಧಿ ಪ್ರಾಧಿಕಾರ)ದಿಂದ ಬದಲಿ ನಿವೇಶನ ಪಡೆದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬಂದ ಮೇಲೆ, ವಿರೋಧ ಪಕ್ಷಗಳು ಸರ್ಕಾರದ ಮೇಲೆ ನಿರಂತರವಾಗಿ ಮುಗಿಬೀಳುತ್ತಿವೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.











Click it and Unblock the Notifications