Mekedatu project controversy: ತಮಿಳುನಾಡು - ಕರ್ನಾಟಕ ರೈತ ಮುಖಂಡರಿಂದ ಮಹತ್ವದ ಸಭೆ
ಕರ್ನಾಟಕ -ತಮಿಳುನಾಡಿನ ನಡುವೆ ಹಲವು ದಶಕಗಳಿಂದಲೂ ಕಾವೇರಿ ನೀರು ಹಂಚಿಕೆ ವಿವಾದ ಜೀವಂತವಾಗಿದೆ. ಎರಡೂ ರಾಜ್ಯಗಳ ನಡುವೆ ಕಳೆದ ಒಂದು ದಶಕದಿಂದ ಮೇಕೆದಾಟು ಯೋಜನೆ ವಿವಾದಕ್ಕೆ ಕಾರಣವಾಗಿದೆ.
ಕಾವೇರಿ ನದಿಯನ್ನು ಕರ್ನಾಟಕದಲ್ಲಿ ಜೀವನದಿ ಎಂದೇ ಪೂಜಿಸಲಾಗುತ್ತದೆ. ಕಾವೇರಿ ಹೆಚ್ಚುವರಿ ನೀರು ಸಮುದ್ರಕ್ಕೆ ಸೇರುತ್ತಿದೆ. ಈ ರೀತಿ ಸಮುದ್ರಕ್ಕೆ ಸೇರುತ್ತಿರುವ ಅಂದಾಜು 60 ಟಿಎಂಸಿ ಸಾಮರ್ಥ್ಯದ ನೀರನ್ನು ಉಳಿಸುವ ಉದ್ದೇಶದಿಂದ ಮೇಕೆದಾಟು ಡ್ಯಾಂ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ಸರ್ಕಾರವು ನಿರ್ಧರಿಸಿದೆ.

ಆದರೆ, ಮೇಕೆದಾಟು ಡ್ಯಾಮ್ ನಿರ್ಮಾಣ ಮಾಡುವುದಕ್ಕೆ ಮೊದಲಿನಿಂದಲೂ ತಮಿಳುನಾಡು ಕ್ಯಾತೆ ತೆಯುತ್ತಿದೆ. ಮೇಕೆದಾಟು ನಿರ್ಮಾಣ ಮಾಡಬೇಕೆಂಬ ವಾದವನ್ನು ವಿರೋಧಿಸಿರುವ ತಮಿಳುನಾಡು ಖ್ಯಾತೆ ತೆಗೆದಿದೆ.
ತಮಿಳುನಾಡು - ಕರ್ನಾಟಕ ರೈತರಿಂದ ಮಹತ್ವದ ಸಭೆ
ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಎದುರಾಗಿರುವ ನೀರು ಹಂಚಿಕೆ ಸಮಸ್ಯೆಯ ಕುರಿತು ಚರ್ಚೆ ಮಾಡಲು ಎರಡೂ ರಾಜ್ಯಗಳ ರೈತ ಮುಖಂಡರು ಭೇಟಿಯಾಗಿ ಪರಸ್ಪರ ಚರ್ಚೆ ನಡೆಸಿದ್ದಾರೆ.
ತಮಿಳುನಾಡು ಹಾಗೂ ಕರ್ನಾಟಕದ ಕಾವೇರಿ ಅಚ್ಚುಕಟ್ಟಿನಲ್ಲಿರುವ ರೈತರ ನಿಯೋಗವು (ಹೊಗೇನಕಲ್) ರಾಶಿಮಲರ್ ಡ್ಯಾಮ್ ನಿರ್ಮಿಸಲು ಯೋಜಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಚರ್ಚಿಸಿದರು.

ಹೆಚ್ಚು ಮಳೆಯಾಗುವ ಸಂದರ್ಭದಲ್ಲಿ ಕಾವೇರಿ ಹೆಚ್ಚುವರಿ ನೀರು ಸಮುದ್ರಕ್ಕೆ ಸೇರುವುದನ್ನು ತಡೆಗಟ್ಟಿ 60 ಟಿಎಂಸಿ ಸಾಮರ್ಥ್ಯದ ಮೇಕೆದಾಟು ನಿರ್ಮಾಣ ಮಾಡಬೇಕೆಂಬ ವಾದವನ್ನು ವಿರೋಧಿಸಿರುವ ತಮಿಳುನಾಡು ಖ್ಯಾತೆ ತೆಗೆದಿದೆ.
ಈ ಬಗ್ಗೆ ತಮಿಳುನಾಡು ಕರ್ನಾಟಕ ರೈತರು ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಿಕೊಂಡು ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ತಂಜಾವೂರಿನಲ್ಲಿ ಸಭೆ ನಡೆಸಿದ್ದಾರೆ. ಸಭೆ ಮುಕ್ತಾಯವಾದ ನಂತರ ಎರಡು ತಂಡಗಳು ಹೊಗನೇಕಲ್ ಜಲಪಾತ ಹಾಗೂ ರಾಶಿಮನರ್ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.
ರಾಶಿ ಮನ್ನಾರ್ ಡ್ಯಾಮ್ ನಿರ್ಮಾಣ ಎರಡು ರಾಜ್ಯಗಳ ಬೆಟ್ಟಗಳಿಗೆ ಸೇರಿಸಿ ನಿರ್ಮಿಸಿದರೆ 64 ಟಿಎಂಸಿ ನೀರು ಸಂಗ್ರಹಿಸಬಹುದು ಈ ನೀರಿನಲ್ಲಿ ಬೆಂಗಳೂರು ಕುಡಿಯುವ ನೀರು ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು ಎರಡು ರಾಜ್ಯಗಳು ಸಂಕಷ್ಟ ಕಾಲದಲ್ಲಿ ನೀರನ್ನು ಬಳಸಿಕೊಳ್ಳಬಹುದು ಎಂದು ರೈತ ಮುಖಂಡರು ಅಭಿಪ್ರಾಯಪಟ್ಟರು.
ಮುಂದಿನ ಸಭೆಯನ್ನು ಕರ್ನಾಟಕದ ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಪರಿಣಿತರು. ರೈತ ಮುಖಂಡರು ಹಾಗೂ ಕಾವೇರಿ ಕುಟುಂಬ ಸದಸ್ಯರು ಜೊತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಕರ್ನಾಟಕದ ಕಾವೇರಿ ಅಚ್ಚುಕಟ್ಟು ಭಾಗದ ರೈತರ ತಂಡದ ನಿಯೋಗವನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿನಿಧಿಸಿದರೆ, ತಮಿಳುನಾಡು ವ್ಯವಸಾಯ ಸಂಘಗಳ ಅಧ್ಯಕ್ಷ ಕಾವೇರಿ ಅಚ್ಚುಕಟ್ಟು ಭಾಗದ ಮುಖಂಡ ಪಿ ಆರ್ ಪಾಂಡ್ಯನ್ ನೇತೃತ್ವ ನಿಯೋಗ ತಮಿಳುನಾಡಿನಿಂದ ಪ್ರತಿನಿಧ್ಯ ವಹಿಸಿತ್ತು.
ರಾಷ್ಟ್ರೀಯ ರೈತ ಸಮಾವೇಶ
ದಕ್ಷಿಣ ಭಾರತದ ರಾಜ್ಯಗಳ ರೈತರು ಸೇರಿ ಪಾಂಡಿಚೇರಿ ಕಾರಯ್ಕಲ್ ನಲ್ಲಿ ಸಮಾವೇಶ ನಡೆಸಿದ್ದು, ಇಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಸಮಾವೇಶದಲ್ಲಿ ಕರ್ನಾಟಕ,ತಮಿಳುನಾಡು,ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ರೈತ ಮುಖಂಡರು ಭಾಗವಹಿಸಿದ್ದರು.
ಈ ಸಮಾವೇಶದಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ ಮಾಡಬೇಕು. ರೈತರ ಸಂಪೂರ್ಣ ಸಾಲಮನ್ನಾ.
ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ. ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಲು ನಿರ್ಧರಿಸಲಾಯಿತು.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ಬೆಂಬಲಿಸಿ ಪ್ರಬಲಗೊಳಿಸಲು ಪಾಂಡಿಚೇರಿಯಲ್ಲಿ ದಕ್ಷಿಣ ಭಾರತ ರಾಜ್ಯದ ರೈತ ಮುಖಂಡರು ತೀರ್ಮಾನಿಸಿದರು. ಈ ಸಮಾವೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೇತರ) ಸಂಘಟನೆಯ ಪಾಂಡಿಚೇರಿ ರಾಜ್ಯದ ಮುಖ್ಯಸ್ಥರಾಗಿ ರಾಜೇಂದ್ರನ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಘಟನೆಯ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ದುರ್ಬಲ ಅಧಿಕಾರ ಸಿಕ್ಕರೂ, ರೈತ ವಿರೋಧಿ ಧೋರಣೆಗಳನ್ನೇ ಮುಂದುವರಿಸುತ್ತಿದೆ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರೆದರೆ ಅಧಿಕಾರದಿಂದಲೇ ದೂರ ಹಾಕುವ ಸನ್ನಿವೇಶ ನಿರ್ಮಾಣ ಆಗಲಿದೆ ಎಂದು ಎಚ್ಚರಿಸಿದರು.












Click it and Unblock the Notifications