Get Updates
Get notified of breaking news, exclusive insights, and must-see stories!

ಮಂಡ್ಯದಲ್ಲಿ ಯುಎಸ್ ಕಂಪನಿಗೆ ಜಾಗ ಕೊಡುತ್ತಿಲ್ಲ: ಜೆಡಿಎಸ್ ಅರೋಪಕ್ಕೆ ಎಂಬಿ ಪಾಟೀಲ್ ಸ್ಪಷ್ಟನೆ, ಏನಿದು?

ಮಂಡ್ಯ: ಕರ್ನಾಟಕದಲ್ಲಿ ವಿವಿಧ ಕೈಗಾರಿಕೆಗಳು ಹೂಡಿಕೆ ಮಾಡುತ್ತಿದ್ದು, ಸರ್ಕಾರ ಸ್ಪಂದಿಸಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ. ಮಂಡ್ಯದಲ್ಲಿ ಯುಎಸ್ ಮೂಲದ ಕಂಪನಿಯ ಘಟಕ ಸ್ಥಾಪಿಸಲು ಅಗತ್ಯ ಜಾಗ ನೀಡುತಿಲ್ಲ ಎಂದು ತಿಳಿಸಿದೆ. ಈ ಸಂಬಂಧ ಅಧಿವೇಶನದಲ್ಲಿ ಕೈಗಾರಿಕೆ ಎಂಬಿ ಪಾಟೀಲ್ ಅವರು ನೀಡಿದ್ದ ಉತ್ತರವನ್ನು ಎಕ್ಸ್ ಪೋಸ್ಟ್ ಮಾಡಿದೆ. ಇದರ ಬೆನ್ನಲ್ಲೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಪತ್ರಕ್ಕೆ ಎಂ.ಬಿ ಪಾಟೀಲ್ ಅವರು ಮರುತ್ತರಿಸಿ ಬುಧವಾರ ಪತ್ರ ಬರೆದಿದ್ದಾರೆ. ಸರ್ಕಾರ ಜಾಗ ನೀಡುತ್ತಿಲ್ಲವೇ? ಸದನದಲ್ಲಿ ಸರ್ಕಾರ ತಪ್ಪು ಮಾಹಿತಿ ನೀಡಿತಾ? ಈವರೆಗೆ ಆಗಿದ್ದೇನು?...

ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್‌ಡಿ ಕುಮಾರಸ್ವಾಮಿ ಅವರು ಅಮೆರಿಕಾ ಮೂಲದ ಸ್ಯಾನ್ಸನ್ ಗ್ರೂಪ್‌ನ ಕಂಪನಿಯು ಸೆಮಿ ಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕವನ್ನು ಮಂಡ್ಯ ಜಿಲ್ಲೆಗೆ ತರಲು ಪ್ರಯತ್ನಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸುಮಾರು 30 ರಿಂದ 40 ಸಾವಿರ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಮಂಡ್ಯ ಜಿಲ್ಲೆಯ ಸುತ್ತಮುತ್ತ 100 ಎಕರೆ ಬಯಲು ಭೂಮಿಗೆ ಪ್ರಾಥಮಿಕ ಅವಶ್ಯಕತೆಗಳನ್ನು ಕಂಪನಿಯು ಬೇಡಿಕೆ ಇಟ್ಟಿದೆ. ಈ ಸಂಬಂಧ ಕೇಂದ್ರ ಸಚಿವರು, ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಕೈಗಾರಿಕೆಗೆ ಅಗತ್ಯ ಜಾಗ ಒದಗಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜೆಡಿಎಸ್ ದೂರಿದೆ.

MB Patil Clarifies 100 acres Land Availability for US Semiconductor Plant in Mandya after JDS alleges

ಮಂಡ್ಯ ಕಾಂಗ್ರೆಸ್‌ ಶಾಸಕರೇ 500 ಎಕರೆ, 100 ಎಕರೆ ಜಾಗ ಕೊಡುತ್ತೇವೆ ಎಂದು ಮಾಧ್ಯಮದವರ ಮುಂದೆ ಬುರುಡೆ ಭಾಷಣ ಮಾಡಿದ್ದಾರೆ ಎಂದು ಜೆಡಿಎಸ್ ಕಿಡಿ ಕಾರಿದೆ. ತರಲೆ ಮಾತನಾಡುವ ಮುನ್ನ ಕಾಂಗ್ರೆಸ್ ಸರ್ಕಾರ ಜಾಗ ಇದಿಯೋ, ಇಲ್ಲವೋ ಎಂಬುದರ ಬಗ್ಗೆ ಸದನದಲ್ಲೇ ಕೊಟ್ಟಿರುವ ಉತ್ತರ ಇಲ್ಲಿದೆ ನೋಡಿ ಎಂದು ಎಂಬಿ ಪಾಟೀಲ್ ಅವರು ಲಿಖಿತವಾಗಿ ನೀಡದ ಉತರವನ್ನು ಜೆಡಿಎಸ್ ಹಂಚಿಕೊಂಡಿದೆ. ಇತ್ತ ಬುಧವಾರ ಎಚ್‌ಡಿಕೆ ಅವರಿಗೆ ಎಂಬಿ ಪಾಟೀಲ್ ಪತ್ರ ಬರೆದು ಜಾಗದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಸದನದಲ್ಲಿ ಸರ್ಕಾರದಿಂದ ಸಿಕ್ಕ ಉತ್ತರವೇನು?

ಅಮೆರಿಕಾ ಮೂಲದ ತಂತ್ರಜ್ಞಾನ ಉದ್ಯಮ ಸ್ಯಾನ್ಸನ್ ಗ್ರೂಪ್‌ನ ಕಂಪನಿ ಭಾರತದಲ್ಲಿ ಸಿಲಿಕಾಲ್ ಮತ್ತೆ ಸಿಲಿಕಾನ್ ಕಾರ್ಬ್ರೈಟ್ (SIC) ಉತ್ಪಾದನಾ ಸೌಲಭ್ಯಕ್ಕಾಗಿ ಎಂಡ್ ಟು ಎಂಡ್ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪಿಸುವ ಉದ್ದೇಶ ಹೊಂದಿದೆ. ಎಲೆಕ್ಟ್ರಾನಿಕ್ ಸಂಬಂಧಿತ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಇದನ್ನು ಮಂಡ್ಯ ಜಿಲ್ಲೆಗೆ ತಂದರೆ ಸಾವಿರಾರು ಉದ್ಯೋಗ ಸಿಗುತ್ತಗೆ. ಆದ್ದರಿಂದ ರಾಜ್ಯ ಸರ್ಕಾರ ಕಂಪನಿ ಬೇಡಿಕೆಗೆ ಅನುಸಾರ ಅಗತ್ಯ ಜಾಗ ನೀಡುವಂತೆ ಎಚ್‌ಡಿ ಕುಮಾರಸ್ವಾಮಿ ಕಚೇರಿಯಿಂದ ಪತ್ರ ಬರೆಯಲಾಗಿತ್ತು.

ಇದಕ್ಕೆ ಸದನದಲ್ಲಿ ಉತ್ತರಿಸಿದ್ದ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ಎಚ್‌ಡಿಕೆ ಅವರು 100ಎಕರೆ ಭೂಮಿ ಕೇಳಿದ್ದು, ಅದು ಪರಿಶೀಲನೆಯಲ್ಲಿದೆ. ಅಮೆರಿಕಾ ಮೂಲದ ಕಂಪನಿ ಸರ್ಕಾರಕ್ಕೆ ಯಾವುದೇ ಮನವಿ ಸಲ್ಲಿಸಿಲ್ಲ. ನೊದೇಕೊಪ್ಪಲು ಗ್ರಾಮದಲ್ಲಿ ಭೂಸ್ವಾಧಿನಕ್ಕೆ ವಿರೋಧವಿದೆ. ಮದ್ದೂರು ತಾಲೂಕಿನ ಕುದರುಗುಂಡಿ ಗ್ರಾಮದಲ್ಲಿ ಭೂಮಿ ಸ್ವಾಧೀನ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಜಿಲ್ಲೆಯ ನಾಗಮಂಗಲ, ಚೆನ್ನಾಪುರ ಇತರ ಭಾಗಗಳಲ್ಲೂ ಭೂ ಸ್ವಾಧೀನಕ್ಕೆ ವಿರೋಧ ಇದೆ. ಮೇಲೆ ತಿಳಿಸಿದ ಕೈಗಾರಿಕಾ ಪ್ರದೇಶ ಭೂಮಿ ಪ್ರಸ್ತುತದಲ್ಲಿ ಲಭ್ಯವಿರುವುದಿಲ್ಲ ಎಂದಿದ್ದರು. ಜೊತೆಗೆ ಕಂಪನಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ನಿಯಮಾನುಸಾರ ಭೂಮಿ ನೀಡಲಾಗುವುದು ಎಂದು ತಿಳಿಸಿದ್ದರು. ಇದು ಜೆಡಿಎಸ್ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರದಿಂದ 100 ಎಕ್ರೆ ಜಾಗ: ಎಚ್‌ಡಿಕೆಗೆ ಎಂಬಿ ಪಾಟೀಲ್ ಪತ್ರ

ಸ್ಯಾನ್ಸನ್ ಗ್ರೂಪ್ ಕಂಪನಿಗೆ ಮಂಡ್ಯದಲ್ಲಿ ಘಟಕ ಸ್ಥಾಪಿಸಲು 100 ಎಕರೆ ಭೂಮಿ ನೀಡಲು ಸರ್ಕಾರ ಉತ್ಸುಕವಾಗಿದೆ. ಆದರೆ ಕಂಪನಿಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರೂ ಅವರು ಸಿಕ್ಕಿಲ್ಲ. ಈ ಯೋಜನೆ ರಾಜ್ಯಕ್ಕೆ ಬಂದು ನೆಲೆಯೂರಬೇಕು ಎಂದು ಸಚಿವ ಎಂ.ಬಿ ಪಾಟೀಲ ಅವರು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬುಧವಾರ (ಡಿ.24) ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರು ಈ ಬಗ್ಗೆ ಅ.31ರಂದು ನಮಗೆ ಪತ್ರ ಬರೆದಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ನಾವು ನ.24ರಂದು ಪ್ರತ್ಯುತ್ತರ ಬರೆದಿದ್ದೆವು. ಕಂಪನಿಯ ಯೋಜನೆಯ ವಿವರಗಳನ್ನು ತಿಳಿದುಕೊಳ್ಳಲು ಸ್ಯಾನ್ಸನ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಭಾರತೀಯ ವ್ಯವಹಾರಗಳ ಮುಖ್ಯಸ್ಥ ಅಭಯ್ ಕೆ.ರೈ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಗಿದೆ. ಆದರೆ ಅವರ ಕಡೆಯಿಂದ ಇದುವರೆಗೂ ಉತ್ತರ ಬಂದಿಲ್ಲ' ಎಂದಿದ್ದಾರೆ.

ಮಂಡ್ಯದಯಲ್ಲಿ ನೀರು, ವಿದ್ಯುತ್, ಸಂಪರ್ಕ ಸೌಲಭ್ಯವಿರುವ ಕಡೆಯಲ್ಲೇ 100 ಎಕರೆ ಕೊಡಲು ಅಡ್ಡಿಯೇನಿಲ್ಲ. ಕಂಪನಿಯ ಕಡೆಯಿಂದ ಮನವಿ ಬಂದರೆ ಭೂ ಮಂಜೂರಾತಿಯ ಕಾರ್ಯಸಾಧ್ಯತೆ ಜೊತೆಗೆ ಇನ್ನಿತರ ಅಗತ್ಯ ಅನುಮೋದನೆಗಳು ಮತ್ತು ಮೂಲಸೌಕರ್ಯಗಳನ್ನು ಪರಿಗಣಿಸಿ, ತ್ವರಿತವಾಗಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು. ಈ ಹೊಣೆಯನ್ನು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರಿಗೆ ವಹಿಸಲಾಗಿದೆ. ಹೈಟೆಕ್ ಉದ್ಯಮಗಳನ್ನು ಬೆಳೆಸಲು ಸರ್ಕಾರ ಬದ್ಧ. ಈ ಉದ್ದೇಶಿತ ಹೂಡಿಕೆ ಯೋಜನೆ ಕೈತಪ್ಪಬಾರದು. ಇದರಿಂದ ಬೆಂಗಳೂರಿನ ಹೊರಗಿನ ಭಾಗಗಳಲ್ಲಿ ಉದ್ಯೋಗಸೃಷ್ಟಿ ಮತ್ತು ಉದ್ದಿಮೆಗಳ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದು ಪಾಟೀಲರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+