Singapore Ship: ಸಿಂಗಾಪುರ್ ಕಂಟೈನರ್ ಹಡಗಿನಲ್ಲಿ ಬೃಹತ್ ಬೆಂಕಿ, 18 ಮಂದಿ ರಕ್ಷಣೆ, 4 ಮಂದಿ ಕಾಣೆ

ಮಂಗಳೂರು, ಜೂನ್ 10: ಅರಬ್ಬಿ ಸಮುದ್ರ ಮಾರ್ಗವಾಗಿ ಶ್ರೀ ಲಂಕಾದ ಕೊಲಂಬೊ ದಿಂದ ಮುಂಬೈಗೆ ಬರುತ್ತಿದ್ದ ಕಂಟೈನರ್ ಹಡಗಿನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ನೀರ ಮಧ್ಯ ನಡೆದ ಈ ದರುಂತದಲ್ಲಿ ಒಟ್ಟು 04 ಮಂದಿ ಕಾಣೆಯಾಗಿದ್ದಾರೆ. ಹಡಗಿನಲ್ಲಿದ್ದ 18 ಮಂದಿ ಸಿಬ್ಬಂದಿಗಳನ್ನು ಭಾರತೀಯ ನೌಕ ಪಡೆ ರಕ್ಷಣೆ ಮಾಡಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾಣೆಯಾದವರಿಗೆ ಶೋಧ ಕಾರ್ಯ ಮುಂದುವರಿದಿದೆ.

ಮುಂಬೈಗೆ ಹೋಗುತ್ತಿದ್ದ ಸಿಂಗಾಪುರ ಕಂಟೈನರ್ ಹಡಗು (Singapore's MV Wan Hai 503) ಇದಾಗಿದೆ. ಕೇರಳದ ಬೇಪೋರ್ ಕಡಲ ತೀರದಿಂದ 78 ನಾಟಿಕಲ್ ಮೈಲ್ಸ್ ದೂರದ ಆಳದಲ್ಲಿ ಘಟನೆ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ನೌಕಾಪಡೆ ಹಲವು ಜೀವ ಉಳಿಸಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐವರನ್ನು ದಾಖಲಿಸಲಾಗಿದೆ.

Massive Fire on Singapore s Container Ship in Arabian Sea 4 Missing Indian Nave Rescue 18 staff

ಕಾಣೆಯಾದವರ ಹುಡುಕಾಟ

ಸಣ್ಣ ಪುಟ್ಟ ಗಾಯಗಳಾದವರಿಗೆ ಮಂಗಳೂರು ಕರಾವಳಿಯ ಕೋಸ್ಟ್ ಗಾರ್ಡ್ ಆರೋಗ್ಯ ಸಿಬ್ಬಂದಿಗಳಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಣೆಯಾದವರಿಗಾಗಿ ಸಮುದ್ರದ ಆಳದಲ್ಲಿ ತೀವ್ರ ಹುಡುಕಾಟ ಮುಂದುವರಿಸಿದೆ. ಸಮುದ್ರ ಮಧ್ಯ ಹೊತ್ತಿ ಉರಿದ ಕಂಟೈನರ್ ಹಡಗಿನ ಬೆಂಕಿ ಜ್ವಾಲೆಯನ್ನು ಭಾರತೀಯ ನೌಕಾ ಪಡೆಯ ಐಸಿಜಿಎಸ್ ಸಚೇತ್ ಮತ್ತು ಐಸಿಜಿಎಸ್ ಪ್ರೆಹರಿ ಕೂಡಿಕೊಂಡು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಗೆ ನಾಡಿನ ಜನರು ಕಳವಳ ವ್ಯಕ್ತಪಡಿಸಿದ್ದಾರೆ.

ತೈವಾನ್, ಮ್ಯಾನ್ಮಾರ್, ಇಂಡೋನೇಷಿಯಾದ ಹಾಗೂ ಚೀನಾದವರು ಸೇರಿ ಒಟ್ಟು 18 ಮಂದಿ ಸಹ ಇದ್ದರು ಎನ್ನಲಾಗಿದೆ. ಇದರಲ್ಲಿ ಬಹುತೇಕರನ್ನು ರಕ್ಷಿಸಲಾಗಿದೆ. ಆದರೆ ಕಾಣೆಯಾಗಿರುವವರಿಗಾಗಿ ಹುಡುಕಾಟ ಆರಂಭವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+