ಕರ್ನಾಟಕ-ಆಂಧ್ರ ಪ್ರದೇಶ ತೆರಳುವ ವಿವಿಧ ರೈಲುಗಳ ಸಂಚಾರ ರದ್ದು, ವೇಳಾಪಟ್ಟಿ

ಬೆಂಗಳೂರು, ಸೆಪ್ಟಂಬರ್ 02: ಹವಾಮಾನ ವೈಪರಿತ್ಯದಿಂದಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರು ಹಾಗೂ ಮೈಸೂರಿನಿಂದ ಆಂಧ್ರಪ್ರದೇಶ ಮಾರ್ಗವಾಗಿ ತೆರಳುವ ವಿವಿಧ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಲವು ಮಾರ್ಗಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕುರಿತು ನೈಋತ್ಯ ರೈಲ್ವೆ ವಯಲಾಧಿಕಾರಿಗಳು ಸಾಮಾಜಿಕ ಜಾಲತಾಣ ಮೂಲಕ ಮಾಹಿತಿ ನೀಡಿದ್ದಾರೆ.

ನೆರೆಯ ಆಂಧ್ರಪ್ರದೇಶದ ರಾಯನಪಾಡು ರೈಲು ನಿಲ್ದಾಣವು ಭಾರಿ ಮಳೆಗೆ ಜಲಾವೃತಗೊಂಡಿದೆ. ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಹಳಿಗಳ ಮೇಲೆ ನೀರು ನಿಂತಿದೆ. ಹೀಗಾಗಿ ದಕ್ಷಿಣ ಮಧ್ಯೆ ರೈಲು ಹಾಗೂ ನೈಋತ್ಯ ರೈಲ್ವೆ ವ್ಯಾಪ್ತಿಯ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಹಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

Many Trains has Cancelled Between Karnataka-Andhra Pradesh Due Heavy Rain Flood Check Full List

ರದ್ದಾದ ರೈಲುಗಳು ಪಟ್ಟಿ

* ಕರ್ನಾಟಕದ ಮೈಸೂರಿನಿಂದ ಹೌರಾಗೆ ತೆರಳುವ ರೈಲು (ಸಂಖ್ಯೆ 22818) ಹಾಗೂ ಮರಳಿ ಹೌರಾದಿಂದ ಮೈಸೂರಿಗೆ ಮರಳುವ ರೈಲು (ಸಂಖ್ಯೆ 22818) ಸಂಚಾರ ರದ್ದುಗೊಳಿಸಲಾಗಿದೆ.

* ಕಾಕಿನಾಡ ಟೌನ್- ಎಸ್​ಎಂವಿಟಿ ಬೆಂಗಳೂರು ರೈಲು (ಸಂಖ್ಯೆ 17210)

* ಎಸ್​ಎಂವಿಟಿ ಬೆಂಗಳೂರು- ನಾಗರಕೊಯಿಲ್ ರೈಲು (ಸಂಖ್ಯೆ 17235)

* ನಾಗರಕೊಯಿಲ್- ಎಸ್​ಎಂವಿಟಿ ಬೆಂಗಳೂರು ರೈಲು (ಸಂಖ್ಯೆ 17236)

* ಎಸ್​ಎಂವಿಟಿ ಬೆಂಗಳೂರು- ಕಾಕಿನಾಡ ಟೌನ್ ರೈಲು (ಸಂಖ್ಯೆ 17209)

* ಎಸ್​ಎಂವಿಟಿ ಬೆಂಗಳೂರು - ಪಾಟಲಿಪುತ್ರ ರೈಲು (ಸಂಖ್ಯೆ 22352)

* ಭುವನೇಶ್ವರ - ಕೆಎಸ್‌ ಆರ್‌ ಬೆಂಗಳೂರು ರೈಲು (ಸಂಖ್ಯೆ 18463)

* ಕೆಎಸ್‌ ಆರ್‌ ಬೆಂಗಳೂರು ಭುವನೇಶ್ವರ ರೈಲು (ಸಂಖ್ಯೆ 18464)

* ಬೆಂಗಳೂರು ಎಸ್‌ಎಂವಿಟಿ- ಹಾಟಿಯಾ ರೈಲುಗಳ (ಸಂಖ್ಯೆ 12836) ಸಂಚಾರ ರದ್ದುಗೊಂಡಿದೆ ಎಂದು ನೈಋತ್ಯ ರೈಲ್ವೆಯು ಟ್ವೀಟ್ ಮೂಲಕ ಸೋಮವಾರ ಮಾಹಿತಿ ನೀಡಿದೆ.

ತೆಲಂಗಾಣದಲ್ಲಿ ಅನೇಕ ಕಡೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಈವರೆಗೆ ಸುಮಾರು ಹತ್ತು ಮಂದಿ ಮೃತಪಟ್ಟಿರುವುದಾಗಿ ವರದಿ ಆಗಿದೆ. ವಾಯುಭಾರ ಕುಸಿತ ಪರಿಣಾಮ ಇನ್ನು ಕೆಲವು ದಿನಗಳ ಕಾಲ ಮಳೆ ಆಗುವ ಲಕ್ಷಣಗಳು ಇವೆ. ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ತೆಲಂಗಾಣ ಆಂಧ್ರಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯ ಕಾರಣಕ್ಕೆ ಈವರೆಗೆ ಸುಮಾರು 100 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ಹಳಿಗಳ ಮೇಲೆ ನೀರು ನಿಂತ ಪರಿಣಾಮ ಅದು ತೆರವಾಗುವವರೆಗೂ ಪ್ರಯಾಣಿಕರ ಹಿತದೃಷ್ಟಿಯಿಂದಾಗಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+