ಕರಾವಳಿಯಲ್ಲಿ ಬಿಡದ ಮಳೆ, ಬೆಂಗಳೂರಲ್ಲಿ ತುಂತುರು ಸಾಧ್ಯತೆ
Recommended Video

ಕರ್ನಾಟಕದ ಮುಂದಿನ ಕೆಲವು ದಿನಗಳ ಹವಾಮಾನ ವರದಿ | Oneindia Kannada
ಬೆಂಗಳೂರು, ಜೂನ್ 27: ಉಡುಪಿ, ದಕ್ಷಿಣ ಕನ್ನಡ, ಮಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಇಂದು ಸಹ ಮುಂದುವರೆಯಲಿದ್ದು, ಇನ್ನೂ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ತಿಂಗಳಿನಿಂದಲೂ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ, ಮಣ್ಣು ಕುಸಿತ, ಸೇತುವೆ ಕುಸಿತಗಳಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದೆ.

ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದ್ದು, ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು ಅಲ್ಲಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆ ಇದೆ.

ಜೂನ್ 24, 25ರಂದು ಮುಂಬೈನಲ್ಲಿ ಸುರಿದಿದ್ದ ಭಾರಿ ಮಳೆ ಇಂದು ಸ್ವಲ್ಪ ಬಿಡುವು ನೀಡುವ ಸಾಧ್ಯತೆ ಇದ್ದು, ಉತ್ತನ ಕೊಂಕಣ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.












Click it and Unblock the Notifications