ಪಹಲ್ಗಾಮ್‌ ಉಗ್ರರ ದಾಳಿ ಸಮರ್ಥಿಸಿಕೊಂಡ ಮಂಗಳೂರಿನ ಕಿಡಿಗೇಡಿ

ಮಂಗಳೂರು, ಏಪ್ರಿಲ್‌ 25: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಇಬ್ಬರು ಕನ್ನಡಿಗರು ಸೇರಿದಂತೆ ಸುಮಾರು 28 ಪ್ರವಾಸಿಗರು ಉಗ್ರರ ದಾಳಿಗೆ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ಸಂಪೂರ್ಣ ದೇಶವೇ ತಲ್ಲಣಿಸಿ ಹೋಗಿದೆ. ದೇಶದ ಪ್ರತಿಯೊಬ್ಬರು ಕೂಡ ಉಗ್ರರ ವಿರುದ್ಧ ಪ್ರತಿಕಾರಕ್ಕೆ ಕಾಯುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡಿದ್ದಾನೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಯನ್ನು ಸಮರ್ಥಿಸಿಕೊಂಡು ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ವಿಕೃತಿ ಮೆರೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈಗಾಗಲೇ ಈ ಕಿಡಿಗೇಡಿಯ ವಿರುದ್ಧ ದೂರು ದಾಖಲಾಗಿದ್ದು, ಪೋಸ್ಟ್‌ ಹಾಕಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Mangaluru Unknown Person Defends Terrorist Attack In Pahalgam

ನಿಚ್ಚು ಮಂಗಳೂರು ಫೇಸ್‌ಬುಕ್‌ ಖಾತೆಯಲ್ಲಿ ಉಗ್ರರ ಕೃತ್ಯಕ್ಕೆ ಬೇರೆಯೇ ವ್ಯಾಖ್ಯಾನ ಮಾಡಲಾಗಿದೆ. 2023ರಲ್ಲಿ ಮಹಾರಾಷ್ಟದ ಪಾಲ್ಗರ್‌ನಲ್ಲಿ ಚೇತನ್‌ ಸಿಂಗ್‌ ಎನ್ನುವಾತ ನೀವು ಮುಸ್ಲಿಮರಾ ಅಂತಾ ಕೇಳಿ ಮೂವರು ಮುಸ್ಲಿಮರನ್ನು ಹತ್ಯೆ ಮಾಡಿರುವುದು ನೆನಪಿಸಿಕೊಳ್ಳಬೇಕು. ಅಂದು ಆರೋಪಿ ಚೇತನ್ ಸಿಂಗ್‌ ಎನ್ನುವಾತನಿಗೆ ಸಾರ್ವಜನಿಕವಾಗಿ ಹಗ್ಗ ಹಾಕಿದ್ದರೆ ಇಂದು ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ ಎಂದು ಕಾಶ್ಮೀರದಲ್ಲಿ ಉಗ್ರರು ಧರ್ಮ ಕೇಳಿ ಹತ್ಯೆ ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದಾನೆ.

Take a Poll

ಕಿಡಿಗೇಡಿಯ ಈ ಪೋಸ್‌ ವೈರಲ್‌ ಆಗುತ್ತಿದ್ದಂತೆ ನಿಚ್ಚು ಮಂಗಳೂರು ಫೇಸ್‌ಬುಕ್‌ ಖಾತೆಯ ವಿರುದ್ಧ ಹಾಗೂ ಖಾತೆ ಹೊಂದಿರುವವರ ವಿರುದ್ಧ ಉಳ್ಳಾದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ಈ ವಿವಾದಾತ್ಮಕ ಫೇಸ್‌ಬುಕ್‌ ಪೋಸ್ಟ್‌ ಸಂಬಂಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಬಿಎನ್‍ಎಸ್ ಸೆಕ್ಷನ್ 192 ಮತ್ತು 353 (1) (ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆ ಫೇಸ್‌ಬುಕ್‌ ಖಾತೆಯ ಡಿಪಿಯಲ್ಲಿರುವ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಪ್ಯಾಂಟ್‌ ಬಿಚ್ಚಿ ಚೆಕ್‌ ಮಾಡಿ ಕೊಂಡ ಉಗ್ರರು

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಟ್ಟಹಾಸ ಮೆರೆದಿರುವ ಉಗ್ರರು ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಮೊದಲು ಪ್ರವಾಸಿಗರನ್ನು ಮಾತನಾಡಿಸಿದ ಉಗ್ರರು ಬಳಿಕ ಅವರ ಧರ್ಮಗಳನ್ನು ತಿಳಿದುಕೊಂಡು ದಾಳಿ ಮಾಡಲು ಆರಂಭಿಸಿದ್ದಾರೆ. ಇಬ್ಬರು ಸ್ಥಳೀಯರು ಸೇರಿ ಒಟ್ಟು 8 ಉಗ್ರರು ಎಕೆ-47 ಗನ್ ಬಳಸಿ ಓಪನ್ ಫೈರ್ ಮಾಡಿದ್ದಾರೆ. ಉಗ್ರರು ಧರ್ಮವನ್ನು ತಿಳಿದುಕೊಂಡು ದಾಳಿ ಮಾಡಿರುವುದು ತಿಳಿದು ಬಂದಿದ್ದು, ನೀವು ಹಿಂದೂಗಳಾ ಎಂದು ಕೇಳಿ ಪ್ರವಾಸಿಗರನ್ನು ಟಾರ್ಗೆಟ್ ಮಾಡಿದ್ದಾರೆ. ಹಿಂದೂ ಪ್ರವಾಸಿಗರನ್ನೇ ಕೊಲ್ಲುವ ಉದ್ದೇಶವಿಟ್ಟುಕೊಂಡು ದಾಳಿ ಮಾಡಿದ್ದ ಉಗ್ರರು, ಗುಂಡೇಟಿಗೂ ಮುನ್ನ ಪ್ರತಿಯೊಬ್ಬ ವ್ಯಕ್ತಿಯ ಧರ್ಮ ಕೇಳಿ ಬಳಿಕ ಪ್ಯಾಂಟ್ ಬಿಚ್ಚಿಸಿ ಧರ್ಮ ಚೆಕ್ ಮಾಡಿ ಕೊನೆಗೆ ಹತ್ಯೆ ಮಾಡಿದ್ದಾರೆ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+