ಮಂಗಳೂರಿನ ವಿದ್ಯಾರ್ಥಿಗಳ ಪರಿಸರ ಪ್ರೇಮ: ಮಳೆ ನೀರು ಸಂರಕ್ಷಣೆಯ ಈ ಯೋಜನೆ ಕರ್ನಾಟಕಕ್ಕೇ ಮಾದರಿ!

ಮಂಗಳೂರಿನ ವಿದ್ಯಾರ್ಥಿಗಳು ಮಾಡಿರುವ ವಿಷಯವು ಇದೀಗ ದೇಶದ ಗಮನ ಸೆಳೆಯುತ್ತಿದೆ. ಮಂಗಳೂರಿನ ವಿದ್ಯಾರ್ಥಿಗಳು ತಾವು ಶಾಲೆಯಲ್ಲಿ ಕಲಿತ ವಿಷಯವನ್ನು ಅನುಷ್ಠಾನಕ್ಕೆ ತರುವ ಮೂಲಕ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಲಿಕೆ ಕೇವಲ ಪರೀಕ್ಷೆ ಹಾಗೂ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ. ಪರಿಸರ ಸಂರಕ್ಷಣೆ ಮಾಡುವುದಕ್ಕೂ ವಿದ್ಯಾರ್ಥಿಗಳು ಬಳಸಿದ್ದಾರೆ. ಈ ವಿಷಯವು ಇದೀಗ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಗಳ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪಠ್ಯದಲ್ಲಿ ಕಲಿತ ವಿಷಯಗಳನ್ನು ವಿದ್ಯಾರ್ಥಿಗಳು ಹಂತ ಹಂತವಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಳೆಗಾಲದ ಸಮಯದಲ್ಲಿ ಮಳೆನೀರು ಸಂರಕ್ಷಿಸಲು ಇಂಗು ಗುಂಡಿಗಳನ್ನು ತಾವೇ ತೋಡಿದ್ದಾರೆ. ಈ ಇಂಗು ಗುಡಿಗಳು ಇದೀಗ ಗ್ರಾಮದ ಜನರ ಗಮನ ಸೆಳೆದಿದೆ.

ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಯ "ಹಸಿರು ಭವಿಷ್ಯ ಪರಿಸರ ಸಂಘ"ದಿಂದ ಮಾರ್ಗದರ್ಶನದಲ್ಲಿ ಕಳೆದ ಏಳು ವರ್ಷಗಳಿಂದ ಈ ಅಭಿಯಾನ ನಡೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮತ್ತು ನೀರು ಸಂರಕ್ಷಣೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವುದು ಈ ಸಂಘದ ಮುಖ್ಯ ಉದ್ದೇಶವಾಗಿದೆ.

Mangaluru

ಈ ಸಂಘದ ನೇತೃತ್ವ ಹಾಗೂ ಸಹಾಯದ ಮೂಲಕ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕೆಲಸದಲ್ಲಿ ತೊಡಗಿದ್ದಾರೆ. ಈ ಸಂಘದ ಮೂಲಕ ಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ತಮ್ಮ ಮನೆಯ ಬಳಿ, ಶಾಲಾ ಆವರಣದಲ್ಲಿ, ರಸ್ತೆ ಬದಿ ಹಾಗೂ ಬೆಟ್ಟದ ಇಳಿಜಾರು ಸೇರಿದಂತೆ ಸೂಕ್ತ ಸ್ಥಳಗಳಲ್ಲಿ ಇಂಗು ಗುಂಡಿಗಳನ್ನು ತೋಡುತ್ತಿದ್ದಾರೆ. ಇದರಿಂದ ಮಳೆ ಬಂದಾಗ ಮಳೆಯ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ಈ ರೀತಿ ಇಂಗು ಗುಂಡಿ ನಿರ್ಮಿಸುವ ಕೆಲಸವನ್ನು ವಿದ್ಯಾರ್ಥಿಗಳು ಕಳೆದ ಏಳು ವರ್ಷಗಳಿಂದಲೂ ಮಾಡುತ್ತಿದ್ದಾರೆ.

ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಪರಿಸರ ಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶಾಲೆಯ ಪರಿಸರ ಸಂಘದ ಮಾರ್ಗದರ್ಶಕ ಹಾಗೂ ಶಿಕ್ಷಕ ರೋಷನ್ ಪಿಂಟೋ ಅವರ ಪ್ರಕಾರ, ಮಂಗಳೂರಿನ ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ಏಳು ವರ್ಷಗಳಿಂದಲೂ ಈ ರೀತಿ ಇಂಗು ಗುಂಡಿಗಳನ್ನು ತೋಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ವರೆಗೂ ಅಂದಾಜು 1,007ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ತೋಡಿದ್ದಾರೆ. ಈ ವರ್ಷ ಮಾತ್ರವೇ 180 ಗುಂಡಿಗಳನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ.

ಇನ್ನೂ ಅಚ್ಚರಿಯ ಸಂಗತಿ ಎಂದರೆ, ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರು ಸಹ ಈ ಕೆಲಸಕ್ಕೆ ಕೈಜೋಡಿಸಿದ್ದಾರೆ. ಇದೇ ವರ್ಷ ಜೂನ್‌ನಿಂದ ಆಗಸ್ಟ್‌ವರೆಗೆ ನಡೆದ ಅಭಿಯಾನದಲ್ಲಿ ಕೆಲವು ವಿದ್ಯಾರ್ಥಿಗಳೊಂದಿಗೆ ಪೋಷಕರು ಸಹ ಕೈ ಜೋಡಿಸಿದ್ದಾರೆ. ಮಳೆಗಾಲದ ರಜೆಯಲ್ಲಿ ಇಂಗು ಗುಂಡಿಗಳನ್ನು ತೋಡಿದ್ದಾರೆ. ಇದಾದ ಮೇಲೆ ಅವರ ಮಾಡಿರುವ ಇಂಗು ಗುಂಡಿಗಳ ಫೋಟೋವನ್ನು ಶಿಕ್ಷಕರಿಗೆ ತೋರಿಸಿದ್ದಾರೆ.

ಇಂಗು ಗುಂಡಿಗಳನ್ನು ನಿರ್ಮಿಸುವುದು ಪ್ರಾಯೋಗಿಕ ವಿಜ್ಞಾನ ಪಠ್ಯಕ್ರಮದ ಭಾಗವಾಗಿ ಕೈಗೊಳ್ಳಲಾಗಿದ್ದು, ಮಳೆನೀರು ಕೊಯ್ಲಿನ ಬಗ್ಗೆ ಕಲಿತ ವಿಷಯಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಇದು ಸಹಾಯ ಮಾಡಿದೆ ಎಂದು ಶಾಲೆಯ ಶಿಕ್ಷಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+