ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಪ್ರವೇಶ ಶುಲ್ಕ ಏರಿಕೆ

Posted By:
Subscribe to Oneindia Kannada

ಮಂಡ್ಯ, ಏಪ್ರಿಲ್ 11 : ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣ ಇಲಾಖೆ ವ್ಯಾಪ್ತಿಗೆ ಈ ಅರಮನೆ ಒಳಪಡುತ್ತದೆ.

ಕೇಂದ್ರ ಸರ್ಕಾರ ಏ.1ರಿಂದಲೇ ಜಾರಿಗೆ ಬರುವಂತೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಭಾರತೀಯ ಪ್ರವಾಸಿಗರು 15 ರೂ. ಮತ್ತು ವಿದೇಶಿಯರು 200 ರೂ. ಪ್ರವೇಶ ಶುಲ್ಕವನ್ನು ಪಾವತಿ ಮಾಡಬೇಕಾಗಿದೆ.[ಶ್ರೀರಂಪಟ್ಟಣ ಪ್ರವಾಸದ ಬಗ್ಗೆ ಓದಿ]

tipu sultan

ಟಿಪ್ಪುಸುಲ್ತಾನ್ ಬೇಸಿಗೆ ಅರಮನೆ (ದರಿಯಾ ದೌಲತ್‌)ಯಲ್ಲಿ ಮೊದಲು ಭಾರತೀಯರಿಗೆ 5 ರೂ. ಮತ್ತು ವಿದೇಶಿಗರಿಗೆ 100 ರೂ. ಪ್ರವೇಶ ಶುಲ್ಕವಿತ್ತು. ಏ.1ರಿಂದಲೇ ಜಾರಿಗೆ ಬರುವಂತೆ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. [ಬೆಂ-ಮೈ ಜೋಡಿ ಹಳಿಗೆ ಅಡ್ಡಿಯಾದ ಟಿಪ್ಪು ಮದ್ದಿನ ಮನೆ]

ಸಾರ್ಕ್ ದೇಶಗಳಾದ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್, ನೇಪಾಳ, ಶ್ರೀಲಂಕಾ ಮತ್ತು ಪಾಕಿಸ್ತಾನದ ಪ್ರವಾಸಿಗರಿಗೆ ಭಾರತೀಯ ಪ್ರವಾಸಿಗರಿಗೆ ಇರುಷ್ಟು ಶುಲ್ಕ ವಿರುತ್ತದೆ. ಹೊಸ ದರ ಹೊಂದಿರುವ ಟಿಕೆಟ್ ಇನ್ನೂ ಮುದ್ರಣಗೊಳ್ಳದ ಕಾರಣ, ಹಿಂದಿನ ದರ ವಿರುವ ಟಿಕೆಟ್‌ ಅನ್ನು ಪ್ರವಾಸಿಗರಿಗೆ ನೀಡಲಾಗುತ್ತಿದೆ.

ದರಿಯಾ ದೌಲತ್‌ ಕುರಿತು : 1784 ರಲ್ಲಿ ನಿರ್ಮಾಣಗೊಂಡ ದರಿಯಾ ದೌಲತ್ ಬಾಗ್ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಎಂದು ಖ್ಯಾತಿಗಳಿಸಿದೆ. ಹೈದರಾಲಿ ಈ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದನು, ಇದನ್ನು ಪೂರ್ಣಗೊಳಿಸಿದವನು ಟಿಪ್ಪುಸುಲ್ತಾನ್. 1959ರಲ್ಲಿ ಈ ಅರಮನೆ ರಾಷ್ಟ್ರೀಯ ಸ್ಮಾರಕದ ಸ್ಥಾನಮಾನ ಪಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Department of Archaeological Survey of India hiked Srirangapatna Tipu Sultan summer palace entry fee.
Please Wait while comments are loading...