ಕೆಆರ್.ಪೇಟೆ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವೇ ಸೂರು!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ,ಜನವರಿ,14: ಆಕಾಶವೇ ಸೂರು, ನೆಲವೇ ಹಾಸಿಗೆ, ಬಿಸಿಲು, ಚಳಿ ಇರಲಿ ಜಗ್ಗದೆ, ಕುಗ್ಗದೆ ಮರದಡಿ ಕುಳಿತು ಪಾಠ ಕೇಳುವ ಮಕ್ಕಳು. ಏಕೆಂದರೆ ಇಲ್ಲಿರುವುದು ಒಂದೇ ಶಾಲಾ ಕೊಠಡಿ, ಎಪ್ಪತ್ತಕ್ಕೂ ಹೆಚ್ಚು ಮಕ್ಕಳು, ಶಿಕ್ಷಕರು ಐವರು.

ನಿಮಗೆ ಈ ಸ್ಥಿತಿಗೆ ಕಣ್ಣಿಗೆ ಬೀಳುವುದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ಗಣಪತಿ ಪಾರ್ಕಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಒಟ್ಟಿನಲ್ಲಿ ಇಲ್ಲಿನ ಶಾಲಾ ಶಿಕ್ಷಕರು ಮತ್ತು ಮಕ್ಕಳಿಗೆ ಎಲ್ಲವನ್ನು ಸಹಿಸಿಕೊಂಡು ಭವಿಷ್ಯದ ಕಡೆಗೆ ಹೆಜ್ಜೆ ಇಡುವ ಧಾವಂತ.[ಆರ್‌ಟಿಇಯಡಿ ಎಲ್‌ಕೆಜಿ, ಯುಕೆಜಿ ಪ್ರವೇಶಕ್ಕೆ ತಡೆ ನೀಡಿದ ಹೈಕೋರ್ಟ್]

Mandya KR pet Government school at worst stage

ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ಗಣಪತಿ ಪಾರ್ಕಿನ ಬಳಿ ಇರುವ ಈ ಶಾಲೆಗೆ ಬರುವ ಮಕ್ಕಳು ಬಡಮಕ್ಕಳು. ಈ ಶಾಲೆ ಆರಂಭವಾಗಿರುವುದು 1998ರಲ್ಲಿ. ಇದು ಆರಂಭವಾಗಿ 15ವರ್ಷ ಕಳೆದರೂ ಒಂದಕ್ಕೂ ಹೆಚ್ಚು ಕೊಠಡಿಗಳಿಲ್ಲ.[ಶಾಲೆ ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮವಿತ್ತ ಬಾಲಕಿ]

ಇಲ್ಲಿ ಒಟ್ಟು 78 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಇರುವ ಒಂದೇ ಕೊಠಡಿಯಲ್ಲಿ ಮಕ್ಕಳನ್ನು ಕೂಡಿ ಹಾಕಿಕೊಂಡು ಶಿಕ್ಷಕರು ಪಾಠ ಮಾಡುವುದಾದರೂ ಹೇಗೆ? ಹೀಗಾಗಿ ಶಿಕ್ಷಕರು ಅನ್ಯ ಮಾರ್ಗವಿಲ್ಲದೆ ಮರದ ನೆರಳಲ್ಲಿ ಮಕ್ಕಳನ್ನು ಕೂರಿಸಿ ತಮ್ಮ ಕರ್ತವ್ಯವನ್ನು ಪಾಲಿಸುತ್ತಿದ್ದಾರೆ.["ಶಾಲೆಗೆ ಸೇರಲು ಆಧಾರ್ ಕಾರ್ಡ್ ಕಡ್ಡಾಯವೇನಲ್ಲ]

ಜನ ಇತ್ತೀಚೆಗೆ ಖಾಸಗಿ ಶಾಲೆಯತ್ತ ಮುಖ ಮಾಡಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿದೆ ಎಂದು ಉದ್ದಾನುದ್ದ ಭಾಷಣ ಮಾಡುವ ಜನಪ್ರತಿನಿಧಿಗಳು ಪೋಷಕರು ಯಾಕೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವುದಿಲ್ಲ. ಇಲ್ಲಿ ಏಕೆ ಮಕ್ಕಳ ಕೊರತೆ ಇದೆ ಎಂದು ಕೊಂಚ ಯೋಚಿಸಿದರೆ ಪರಿಸ್ಥಿತಿಯ ಅರಿವಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mandya KR pet Government school at worst stage. No shelter, No rooms. But 78 students studying here, have 5 teachers.
Please Wait while comments are loading...