ಮಂಡ್ಯದಲ್ಲಿ ಶನಿವಾರ ಉದ್ಯೋಗ ಮೇಳ
ಮಂಡ್ಯ, ನ. 21 : ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಶ್ರಯದಲ್ಲಿ ನವೆಂಬರ್ 22 ಶನಿವಾರ ಬೆಳಗ್ಗೆ 10.30 ರಿಂದ ಉದ್ಯೋಗ ಮೇಳ ನಡೆಯಲಿದೆ.
ಪ್ರಾದೇಶಿಕ ಸಾರಿಗೆ ಕಚೇರಿ ಎದುರಿನ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನಡೆಯುವ ಮೇಳದಲ್ಲಿ 18 ರಿಂದ 30 ವರ್ಷ ವಯೋಮಿತಿಯೊಳಗಿನ ಎಸ್ಎಸ್ಎಲ್ ಸಿ, ಪಿಯುಸಿ ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು.[130 ವಿಲೇಜ್ ಅಕೌಂಟೆಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ]

ಯಾವ ಯಾವ ಕಂಪನಿಗೆ ಉದ್ಯೋಗಿಗಳು ಬೇಕು?
ಬೆಂಗಳೂರಿನ ಫಸ್ಟ್ ಅಮೆರಿಕನ್, ಹನಿವೆಲ್ ಎಕ್ಸಿಕ್ಯೂಟೀವ್ಸ್ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಿದ್ದಾರೆ. 18 ರಿಂದ 30 ವರ್ಷ ವಯೋಮಿತಿಯೊಳಗಿನ ಐಟಿಐ (ಫಿಟ್ಟರ್, ವೆಲ್ಡರ್, ಮೆಕ್ಯಾನಿಸ್ಟ್) ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳನ್ನು ವೀಡಿಯೋಕಾನ್ ಕಂಪನಿ ತರಬೇತಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಿದೆ.[ಎಸ್ ಬಿಐನಲ್ಲಿ 6425 ಕ್ಲರ್ಕ್ ಹುದ್ದೆಗಳಿವೆ ಅರ್ಜಿ ಹಾಕಿ]
ಆಸಕ್ತರು ವಿದ್ಯಾರ್ಹತೆಯ ಮೂಲ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ 08232-220126/239400ನ್ನು ಸಂಪರ್ಕಿಸಬಹುದು.












Click it and Unblock the Notifications