ಮಂಡ್ಯ: ಜಿಲ್ಲಾ ಮತ್ತು ಸತ್ರ ಜಡ್ಜ್ ಕಚೇರಿಯಲ್ಲಿ ವಿವಿಧ ಹುದ್ದೆಗಳಿವೆ
ಮಂಡ್ಯ, ಜ.11: ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಟೈಪಿಸ್ಟ್ -ಕಾಪಿಸ್ಟ್, ಜವಾನ, ಸ್ಟೆನೋ ಮುಂತಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಜ.24ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಂಡ್ಯ ಹುದ್ದೆಗಳ ವಿವರ:
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ: 46
1. ಸ್ಟೆನೊಗ್ರಾಫರ್: 10
2. ಟೈಪಿಸ್ಟ್: 10
3. ಟೈಪಿಸ್ಟ್-ಕಾಪಿಸ್ಟ್: 04
4. ಪ್ರೊಸೆಸ್ ಸರ್ವರ್: 08
5. ಜವಾನ(peon): 14
ವಯಸ್ಸಿನ ಮಿತಿ: 24/01/2015 ರ ಅನ್ವಯ
* ಸಾಮಾನ್ಯ ಅಭ್ಯರ್ಥಿಗಳಿಗೆ ವಯೋಮಿತಿ 18-35 ವರ್ಷ
* 2A, 2B, 3A ಹಾಗೂ 3B ವರ್ಗದ ಅಭ್ಯರ್ಥಿಗಳಿಗೆ 38 ವರ್ಷ.
* ಎಸ್ ಸಿ/ಎಸ್ ಟಿ ಹಾಗೂ ಕೆಟಗೆರಿ 1 ಅಭ್ಯರ್ಥಿಗಳಿಗೆ 40 ವರ್ಷ
* ಅಂಗವಿಕಲರಿಗೆ ಹಾಗೂ ವಿಧವೆಯರಿಗೆ ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.

ವಿದ್ಯಾರ್ಹತೆ:
* ಹುದ್ದೆ ಸಂಖ್ಯೆ 1,2 ಹಾಗೂ 3ಕ್ಕೆ ಅಭ್ಯರ್ಥಿಗಳು ಎಸೆಸ್ಸೆಲ್ಸಿ ಪಾಸ್ ಆಗಿರಬೇಕು ಸ್ಟೆನೋಗ್ರಾಫಿ ಹಾಗೂ ಟೈಪಿಂಗ್ ಜ್ಞಾನ ಹೊಂದಿರಬೇಕು.
* ಹುದ್ದೆ ಸಂಖ್ಯೆ 4ಕ್ಕೆ ಎಸೆಸ್ಸೆಲ್ಸಿ ಜೊತೆಗೆ HMV ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.
* ಹುದ್ದೆ ಸಂಖ್ಯೆ 5ಕ್ಕೆ ಏಳನೇ ತರಗತಿ ಪಾಸ್ ಜೊತೆಗೆ ಕನ್ನಡ ಭಾಷೆ ಗೊತ್ತಿರಬೇಕು.
ಅಯ್ಕೆ ಪ್ರಕ್ರಿಯೆ: ವಿದ್ಯಾರ್ಹತೆ ಆಧಾರ ಹಾಗೂ ಟೈಪಿಂಗ್ ಪರೀಕ್ಷೆ. ಕರ್ನಾಟಕ ಅಧೀನ ನ್ಯಾಯಾಲಯ(ಲಿಪಿಕ ಮತ್ತು ಇತರೆ ಹುದ್ದೆಗಳ ನೇಮಕಾತಿ ನಿಯಮ 2007(ತಿದ್ದುಪಡಿ) ರಂತೆ ನೇಮಕಾತಿ ನಡೆಯಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ಅರ್ಜಿ ನಮೂನೆ ಭರ್ತಿ ಮಾಡಿ ಪಾಸ್ ಪೋರ್ಟ್ ಸೈಜಿನ ಭಾವಚಿತ್ರದ ಜೊತೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಬೇಕು.
ಅರ್ಜಿ ತಲುಪ ಬೇಕಾದ ಕೊನೆ ದಿನಾಂಕ: 24/01/2015, ಸಂಜೆ 4PM
ವಿಳಾಸ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಮಂಡ್ಯ
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಪ್ರತಿಗಳಿಗಾಗಿ ವೆಬ್ ಸೈಟ್ ಗೆ ಭೇಟಿ ಕೊಡಿ












Click it and Unblock the Notifications