ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ: ಮಂಡಕ್ಕಿ ದರ ಹೆಚ್ಚಿಸಿದ ಕಾರ್ಖಾನೆಗಳು

|
Google Oneindia Kannada News

ದಾವಣಗೆರೆ, ಮೇ 28: ನೀವೇನಾದರು ಕುರುಕಲು ತಿಂಡಿ ಪ್ರಿಯರಾಗಿದ್ದು, ಸಂಜೆ ಹೊತ್ತು ಹೊರಗಡೆ ಹೋಗಿ ಚುರುಮುರಿ, ಗಿರ್ಮಿಟ್, ಮಸಾಲೆ ಮಂಡಕ್ಕಿ, ಖಾರ ಮಂಡಕ್ಕಿ, ಒಗ್ಗರಣೆ ಮಂಡಕ್ಕಿ, ಬೇಲ್ ಪುರಿ ತಿನ್ನುವ ಅಭ್ಯಾಸ ಏನಾದರು ನಿಮಗಿದ್ದರೆ, ಇನ್ಮುಂದೆ ಸ್ವಲ್ಪ ಜಾಸ್ತಿ ಹಣ ಖರ್ಚು ಮಾಡಬೇಕಾಗುತ್ತೆ. ಹೌದು, ತಕ್ಷಣ ಜಾರಿಗೆ ಬರುವಂತೆ ಮಂಡಕ್ಕಿ ಬೆಲೆಯನ್ನು ಹೆಚ್ಚಿಸಲಾಗಿದೆ.

ದಾವಣಗೆರೆಯಲ್ಲಿ 800ಕ್ಕೂ ಹೆಚ್ಚು ಮಂಡಕ್ಕಿ ಭಟ್ಟಿ (ಕಾರ್ಖಾನೆ)ಗಳಿವೆ. ಇಲ್ಲಿ ತಯಾರಾಗುವ ಮಂಡಕ್ಕಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಮೈಸೂರು, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಸಹ ಮಂಡಕ್ಕಿ ಭಟ್ಟಿಗಳನ್ನು ನೋಡಬಹುದಾಗಿದೆ.

ಕರ್ನಾಟಕದಲ್ಲಿ ಕಡಿಮೆ ಬೆಳೆ: ಮಾವಿಗೆ ಬಂಪರ್ ಬೆಲೆಕರ್ನಾಟಕದಲ್ಲಿ ಕಡಿಮೆ ಬೆಳೆ: ಮಾವಿಗೆ ಬಂಪರ್ ಬೆಲೆ

ಈಗಾಗಲೇ ದೇಶದಲ್ಲಿ ಆಹಾರ ಸೇರಿದಂತೆ ಹಲವು ಮೂಲಭೂತ ವಸ್ತುಗಳ ಬೆಲೆ ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಮಂಡಕ್ಕಿ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳು, ವಿದ್ಯುತ್ ದರ, ಕಾರ್ಮಿಕರ ಕೂಲಿ, ಸಾಗಾಟ ವೆಚ್ಚ ಹೆಚ್ಚಾಗುತ್ತಿದ್ದು ಅನಿವಾರ್ಯವಾಗಿ ಮಂಡಕ್ಕಿ ಬೆಲೆ ಹೆಚ್ಚಿಸಲು ಕಾರ್ಖಾನೆಗಳು ತೀರ್ಮಾನಿಸಿವೆ.

ಈಗಾಗಲೇ ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿರುವ ಮಂಡಕ್ಕಿ ಭಟ್ಟಿಗಳು ಈಗೀಗ ಸುಧಾರಿಸಿಕೊಳ್ಳುತ್ತಿದ್ದವು. ಈಗ ಏಕಾಏಕಿ ಹೆಚ್ಚಾದ ಉತ್ಪಾದನಾ ವೆಚ್ಚದಿಂದ ನಷ್ಟವನ್ನು ತಪ್ಪಿಸಲು ಕಾರ್ಖಾನೆ ಮಾಲೀಕರು ಅನಿವಾರ್ಯವಾಗಿ ಬೆಲೆ ಏರಿಕೆಗೆ ತೀರ್ಮಾನಿಸಿದ್ದಾರೆ.

ಸಾವಿರಾರು ಕಾರ್ಮಿಕರಿಗೆ ಜೀವನಾಧಾರ

ಸಾವಿರಾರು ಕಾರ್ಮಿಕರಿಗೆ ಜೀವನಾಧಾರ

ಸಾವಿರಾರು ಕೂಲಿಕಾರ್ಮಿಕರಿಗೆ ಈ ಮಂಡಕ್ಕಿ ಭಟ್ಟಿಗಳು ಜೀವನಾಧಾರವಾಗಿದೆ. ಮಡಕ್ಕಿಯಿಂದ ತಯಾರಿಸುವ ವಿವಿಧ ಖಾದ್ಯಗಳನ್ನು ತಯಾರಿಸುವ, ಮಾರಾಟ ಮಾಡುವ, ಸರಬರಾಜು ಮಾಡುವ ಲಕ್ಷಾಂತರ ಜನರಿಗೆ ಮಂಡಕ್ಕಿ ಪರೋಕ್ಷವಾಗಿ ಉದ್ಯೋಗ ನೀಡುತ್ತಿದೆ.

ಕಚ್ಚಾ ವಸ್ತು, ವಿದ್ಯುತ್ ದರ ಮತ್ತು ಕಾರ್ಮಿಕರ ಕೂಲಿ ಹೆಚ್ಚಳವಾಗಿರುವ ಕಾರಾಣ ಭಟ್ಟಿಗಳು ಮಂಡಕ್ಕಿ ಬೆಲೆ ಹೆಚ್ಚಿಸಲು ತೀರ್ಮಾನಿಸಿದೆ. ದಾವಣಗೆರೆಯ ಮಂಡಕ್ಕಿ ಭಟ್ಟಿ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘ ಈ ವಿಚಾರ ತಿಳಿಸಿದೆ.

ಉತ್ಪಾದನಾ ವೆಚ್ಚ ಹೆಚ್ಚಾಗಿದೆ

ಉತ್ಪಾದನಾ ವೆಚ್ಚ ಹೆಚ್ಚಾಗಿದೆ

ಬೆಲೆ ಏರಿಕೆಗೆ ಕಾರಣ ವಿವರಿಸಿದ ಅವರು, " ಮಂಡಕ್ಕಿ ತಯಾರಿಸಲು ಸೂಕ್ತವಾದ ಭತ್ತದ ಬೆಲೆ 1,100-1,500 ರೂ.ಗಳಿಂದ 1,900 ರೂ.ಗಳಿಗೆ ಹೆಚ್ಚಾಗಿದೆ. ಮಾತ್ರವಲ್ಲದೆ, ತಿಂಗಳಿಗೆ ಸರಾಸರಿ 1,500 ರೂ. ಬರುತ್ತಿದ್ದ ವಿದ್ಯುತ್ ಬಿಲ್ ಈಗ 2,500 ರೂ.ಗಳಿಗೆ ಹೆಚ್ಚಳವಾಗಿದೆ" ಎಂದು ಹೇಳಿದರು.

ದಾವಣಗೆರೆಯಲ್ಲಿ ಮಂಡಕ್ಕಿ ಭಟ್ಟಿಗಳನ್ನು ಹೊಂದಿರುವ ಮಹಾನಗರ ಪಾಲಿಕೆ ಸದಸ್ಯರೂ ಆಗಿರುವ ರಹೀಂ ಮಾತನಾಡಿ, "ಪ್ಲಾಸ್ಟಿಕ್ ನಿಷೇಧ ಮಾಡಿರುವುದರಿಂದ ಮಂಡಕ್ಕಿ ಸಾಗಾಟಕ್ಕೆ ಪ್ಲಾಸ್ಟಿಕ್ ಚೀಲಗಳ ಲಭ್ಯತೆ ಕಡಿಮೆಯಾಗಿದೆ. ಒಂದು ಗೋಣಿಚೀಲದ ಬೆಲೆ 70 ರೂ.ಗಳಿದ್ದು. ಪ್ಲಾಸ್ಟಿಕ್ ಚೀಲಗಳು 15 ರೂ.ಗಳಿಗೆ ದೊರೆಯುತ್ತಿತ್ತು. ಇನ್ನು ಭಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕೂಲಿ ಸರಾಸರಿ 600 ರೂ.ಗಳಿಗೆ ಹೆಚ್ಚಳವಾಗಿದೆ. ಈ ಎಲ್ಲಾ ವೆಚ್ಚವನ್ನು ಪರಿಗಣಿಸಿ ಮಂಡಕ್ಕಿ ದರ ಹೆಚ್ಚಿಸಲಾಗಿದೆ" ಎಂದು ತಿಳಿಸಿದರು.

ಮೈಸೂರು ಮಂಡಕ್ಕಿಯೂ ದುಬಾರಿ

ಮೈಸೂರು ಮಂಡಕ್ಕಿಯೂ ದುಬಾರಿ

ಗಟ್ಟಿ ಮಂಡಕ್ಕಿ ಅಥವಾ ಮೈಸೂರು ಮಂಡಕ್ಕಿ ಇದು ಮತ್ತೊಂದು ರೀತಿಯ ಮಂಡಕ್ಕಿಯಾಘಿದ್ದು ಭದ್ರಾವತಿಯಲ್ಲಿ ಉತ್ಪಾದಿಸಲಾಗುತ್ತದೆ. ಈ ಮಂಡಕ್ಕಿ ತಯಾರಿಸಲು ಬಳಸುವ ಭತ್ತದ ವೆಚ್ಚ ಪ್ರತಿ ಚೀಲಕ್ಕೆ ರೂ. 2,200 ರೂ.ಗಳಿಗೆ ಹೆಚ್ಚಾಗಿದೆ.

ವಿದ್ಯುತ್ ದರ, ಕೂಲಿ, ಪ್ಯಾಕೇಜಿಂಗ್ ವೆಚ್ಚವೂ ದುಬಾರಿಯಾಗಿರುವುದರಿಂದ ಪ್ರತಿ ಚೀಲ ಮಂಡಕ್ಕಿ ಬೆಲೆಯನ್ನು 330 ರೂ.ಗಳಿಂದ 450 ರೂ.ಗಳಿಗೆ ಹೆಚ್ಚಿಸದೆ ಅನ್ಯ ದಾರಿಯಿಲ್ಲ ಎಂದು ಭದ್ರಾವತಿ ಮೂಲದ ಮಂಡಕ್ಕಿ ಕಾರ್ಖಾನೆ ಮಾಲೀಕ್ ಅಬೀದ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮಂಡಕ್ಕಿ ಬೆಲೆ ಹೆಚ್ಚಳದ ಬಗ್ಗೆ ಪ್ರತಿಕ್ರಿಯೆ ನೀಡಿದ ಚಾಟ್ಸ್ ಅಂಗಡಿಯ ಮಾಲೀಕ ಶಿವಣ್ಣ ಮಾತನಾಡಿ, ''ನಾನು ಬೆಲೆ ಏರಿಕೆ ಮಾಡಲು ನಿರ್ಧರಿಸಿಲ್ಲ. ಆದರೆ ಮಂಡಕ್ಕಿ ಬೆಲೆ ಏರಿಕೆಯಿಂದಾಗಿ ನನ್ನ ಲಾಭದ ಪ್ರಮಾಣ ಕಡಿಮೆಯಾಗಲಿದೆ" ಎಂದು ಹೇಳಿದರು.

100 ಲೀಟರ್ ಮಂಡಕ್ಕಿಗೆ 450 ರೂ.

100 ಲೀಟರ್ ಮಂಡಕ್ಕಿಗೆ 450 ರೂ.

ಈ ಮೊದಲು ಒಂದು ಲೀಟರ್ ಚಿಲ್ಲರೆ ಮಂಡಕ್ಕಿ ದರ 5 ರೂ. ಇತ್ತು ಈಗ ಭಟ್ಟಿಗಳೇ 100 ಲೀಟರ್ ಮಂಡಕ್ಕಿ ದರವನ್ನು 450 ರೂ.ಗಳಿಗೆ ಹೆಚ್ಚಿಸಲು ತೀರ್ಮಾನಿಸಿದ್ದು ಚಿಲ್ಲರೆ ಮಾರಾಟ ದರ ಪ್ರತಿ ಲೀಟರ್ ಬೆಲೆ 6-7 ರೂ.ಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ.

ಭದ್ರಾವತಿಯಲ್ಲಿ ನಡೆದ ಸಹ್ಯಾದ್ರಿ ಮಂಡಕ್ಕಿ ಉತ್ಪಾದನೆ ಹಾಗೂ ಮಾರಾಟ ಮತ್ತು ವಿವಿಧ ಸಹಕಾರ ಸಂಘದ ಸಭೆಯಲ್ಲಿ ಬೆಲೆ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ರಾಜ್ಯದಲ್ಲಿ ತರಕಾರಿ, ಹಣ್ಣು, ಪೆಟ್ರೊಲ್, ಡೀಸೆಲ್ ದರವೂ ಹೆಚ್ಚಾಗಿದ್ದು ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಈಗ ಬೆಲೆ ಏರಿಕೆಯಿಂದ ಕುಟುಂಬದವರು, ಸ್ನೇಹಿತರ ಜೊತೆ ಹೊರಗಡೆ ಆರಾಮಾಗಿ ಚುರುಮುರಿ ತಿನ್ನಲೂ ಒಮ್ಮೆ ಯೋಚಿಸುವಂತಾಗಿದೆ.

English summary
The price of puffed rice has gone up with immediate effect. the increased cost of raw material, electricity and labour have forced these factories to hike the price of puffed rice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X