Breaking: ಸಿಎಂ ಕಾರ್ಯಕ್ರಮದಲ್ಲಿ ಭದ್ರತೆ ಲೋಪ: ಸಿದ್ದರಾಮಯ್ಯ ಮೇಲೆ ಶಾಲು ಎಸೆದ ಯುವಕ!

ಬೆಂಗಳೂರು ಸೆಪ್ಟೆಂಬರ್ 15: ಸಿಎಂ ಇರುವ ವೇದಿಕೆಗೆ ಯುವಕನೊಬ್ಬ ನುಗ್ಗಿದ ಘಟನೆ ವಿಧಾನಸೌಧ ಮುಂಭಾಗದಲ್ಲಿ ನಡೆದಿದೆ. ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಭದ್ರತೆಯ ಲೋಪ ಕಂಡು ಬಂದಿದೆ. ವೇದಿಕೆಯ ಮೇಲೆ ಸಿಎಂ ಜೊತೆಗೆ ಸಚಿವರು, ಶಾಸಕರು ಭಾಗಿಯಾಗಿದ್ದ ವೇಳೆ ಯುವಕನೊಬ್ಬ ಏಕಾಏಕಿ ಎತ್ತರದ ವೇದಿಕೆಯತ್ತ ಓಡಿ ಬಂದು ವೇದಿಕೆ ಹತ್ತಲು ಮುಂದಾಗುತ್ತಾನೆ. ಈ ವೇಳೆ ಸಿಎಂ ಸೇರಿದಂತೆ ಸಚಿವರು ಕೂಡ ಗಾಬರಿಗೊಂಡಿರುವುದು ಕಂಡುಬಂದಿದೆ.

ಇಂದು ಪ್ರಜಾಪ್ರಭುತ್ವ ದಿನಾಚಾರಣೆಯ ಕಾರ್ಯಕ್ರಮವನ್ನು ವಿಧಾನಸೌಧ ಮುಂಭಾಗದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಚಾಲನೆ ನೀಡಿದರು. ಸಿಎಂ ಇದ್ದ ವೇದಿಕೆಯಲ್ಲಿ ಯುವಕನೊಬ್ಬ ಗಾಬರಿ ಮೂಡಿಸಿದ್ದಾನೆ. ಪ್ರಜಾಪ್ರಭುತ್ವ ದಿನಾಚಾರಣೆಯ ಕಾರ್ಯಕ್ರಮದಲ್ಲಿ ಹೆಚ್‌ ಸಿ ಮಹದೇವಪ್ಪ ಮಾತನಾಡುತ್ತಿದ್ದರು.

Man threw a shawl on cm siddaramaiah at the democracy day stage

ಈ ವೇಳೆ ಏಕಾಏಕಿ ವೇದಿಕೆಯತ್ತ ಓಡಿ ಬಂದು ಯುವಕ ವೇದಿಕೆ ಹತ್ತಿದ್ದಾನೆ. ಸಿಎಂ ಸಿದ್ದರಾಮಯ್ಯ ಅವರತ್ತ ಶಾಲು ಎಸೆದಿದ್ದಾನೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಸಿಎಂ ಕಾರ್ಯಕ್ರಮದಲ್ಲಿ ದೊಡ್ಡ ಮಟ್ಟದ ಭದ್ರತಾ ವೈಫಲ್ಯ ಕಂಡು ಬಂದಿದೆ.

ಈ ವ್ಯಕ್ತಿ ಯಾರು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಸಿಎಂ ಸಿದ್ದರಾಮಯ್ಯ ಅಭಿಮಾನಿ ಎಂದು ಹೇಳಲಾಗುತ್ತಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+