Maize Rate Today: ಇಂದು ಕರ್ನಾಟಕದಲ್ಲಿ ಮೆಕ್ಕೆಜೋಳದ ಮಾರುಕಟ್ಟೆ ದರವೆಷ್ಟು? ಪಟ್ಟಿ
Karnataka Maize Price: ಕರ್ನಾಟಕದಲ್ಲಿ ಈ ಬಾರಿ ಕಬ್ಬಿಗೆ ಮಾತ್ರವಲ್ಲದೇ ಮೆಕ್ಕೆಜೋಳಕ್ಕೂ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಅದರ ಆದಾಯ ನೆಚ್ಚಿಕೊಂಡಿದ್ದ ಬೆಳೆಗಾರರಿಗೆ ಆರ್ಥಿಕ ತೊಂದರೆ ಆಗಿದೆ. ಹೀಗಾಗಿ ಸೂಕ್ತ ಬೆಲೆ ನೀಡುವಂತೆ ಕೋರಿದ್ದರು. ಇದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿತ್ತು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಎಂಎಸ್‌ಪಿ ನಿಗದಿತ ಬೆಲೆಗೆ ಒಂದು ಕ್ವಿಂಟಾಲ್‌ಗೆ 2400 ರೂಪಾಯಿಗೆ ಖರೀದಿ ಮಾಡುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೆ ರಾಜ್ಯದ ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳದ ದರ ಎಷ್ಟಿದೆ?
ಕೇಂದ್ರದ ಮೇಲೆ ಆರೋಪ ಮಾಡದೇ 2400 ರೂ.ಗೆ ಕರ್ನಾಟಕ ಸರ್ಕಾರ 600 ರೂ. ಸೇರಿಸಿ ಒಟ್ಟು 3000 ರೂಪಾಯಿಗೆ ಪ್ರತಿ ಕ್ವಿಂಟಾಲ್‌ಗೆ ಕೊಟ್ಟಿ ಖರೀದಿಸುವಂತೆ ಆಗ್ರಹ ಕೇಳಿ ಬಂದಿದೆ. ಮಕ್ಕೆಜೋಳ ಖರೀದಿ ಕೇಂದ್ರ ಆರಂಭಕ್ಕೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ. ಇಂದಲ್ಲ ನಾಳೆ ಬೆಳೆ ಸಿಗುತ್ತೆ ಎಂದು ಕಾಯುತ್ತಿರುವ ರೈತರು ಕೈಗೆ ಬಂದ ಬೆಳೆಯನ್ನು ಕಾಯ್ದಿಟ್ಟುಕೊಂಡಿದ್ದಾರೆ. ಸದ್ಯ ರಾಜ್ಯ ಸರ್ಕಾರ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ ಎನ್ನಲಾಗಿದೆ.

ರಾಜ್ಯದಲ್ಲಿ ಉತ್ತರ ಕರ್ನಾಟಕ ಹಾಗೂ ಇತರ ಕಡೆಗಳಲ್ಲಿ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಕೆಲವರು ಆರಂಭಿಕ ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ. ಇನ್ನೂ ಹಲವು ರೈತರು ಉತ್ತಮ ಬೆಲೆ ಬಂದ ಕೂಡಲೇ ಮಾರಲು ತಿರ್ಮಾನಿಸಿದ್ದಾರೆ. ಈ ಮಧ್ಯ ಸರ್ಕಾರವೇ 10 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ನಿರ್ಧರಿಸಿದೆ. ಹಾಗಾದರೆ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾರುಕಟ್ಟೆಗಳಲ್ಲಿ ಇಂದಿನ ಬೆಲೆ ಎಷ್ಟಿದೆ.
ಮಾರುಕಟ್ಟೆಗಳಲ್ಲಿ ಇಂದಿನ ಮೆಕ್ಕೆಜೋಳದ ಬೆಲೆ
* ರಾಜ್ಯದ ಇತರ ಮಾರುಕಟ್ಟೆಗಳಲ್ಲಿ ನವೆಂಬರ್ 21 ಮತ್ತು 20ರ ಬೆಲೆಗಳೇ ಇಂದು ಭಾನುವಾರ ಮುಂದುವರಿದಿವೆ.
* ಉತ್ತರ ಕನ್ನಡದ ಹಳಿಯಾಳ ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳದ ಕನಿಷ್ಠ 1650 ರೂ. ಮತ್ತು 1870 ರೂಪಾಯಿ ಇದೆ.
* ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕನಿಷ್ಠ ದರ 1610 ರೂಪಾಯಿ ಮತ್ತು ಗರಿಷ್ಠ ಬೆಲೆ 1800 ರೂಪಾಯಿ
* ಶಿವಮೊಗ್ಗ ಮಾರುಕಟ್ಟೆಯಲ್ಲಿ ಇಂದು ಮೆಕ್ಕೆಜೋಳದ ಕನಿಷ್ಠ ದರ 1950 ರೂಪಾಯಿ ಮತ್ತು 2600 ರೂಪಾಯಿ.
* ಚಾಮಜರಾನಗರ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆ 1950 ರೂಪಾಯಿ ಮತ್ತು 2600 ರೂಪಾಯಿ.
* ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಕನಿಷ್ಠ ದರ 1910 ರೂಪಾಯಿ ಮತ್ತು 1910 ರೂಪಾಯಿ.
* ಚಿತ್ರದುರ್ಗದ ಹಿರಿಯೂರಲ್ಲಿ ಮೈಜ್ ಕನಿಷ್ಠ ದರ 2000 ರೂಪಾಯಿ ಮತ್ತು ಗರಿಷ್ಠ 2000 ರೂಪಾಯಿ.
* ಚಾಮರಾಜನಗರ ಗುಂಡ್ಲುಪೇಟೆಯಲ್ಲಿ ಕನಿಷ್ಠ 1800 ರೂಪಾಯಿ ಮತ್ತು ಗರಿಷ್ಠ 1800 ರೂಪಾಯಿ ಇದೆ.
ಆದಷ್ಟು ಶೀಘ್ರವೇ ಕರ್ನಾಟಕ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ಈಗಾಗಲೇ ಘೋಷಿಸಿದಂತೆ ಹತ್ತು ಲಕ್ಷ ಮೆ.ಟನ್ ಮೆಕ್ಕೆಜೋಳವನ್ನು ಎಂಎಸ್‌ಪಿ ನಿಗದಿತ ದರದಲ್ಲಿ ರೈತರಿಂದ ಖರೀದಿ ಮಾಡಲಿದೆ.












Click it and Unblock the Notifications