ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಿಂದ ಬಿಡುಗಡೆಯಾದ ರೈತರು ಹೇಳಿದ್ದೇನು?

By Madhusoodhan
|
Google Oneindia Kannada News

ಧಾರವಾಡ/ಚಿತ್ರದುರ್ಗ/ಬಳ್ಳಾರಿ ಆಗಸ್ಟ್, 13: 'ಇಲ್ಲಿಯವರೆಗೆ ನಮ್ಮ ಕುಡಿಯುವ ನೀರಿನ ಹೋರಾಟಕ್ಕೆ ಬರಿ ಉತ್ತರ ಕರ್ನಾಟಕದ ಬೆಂಬಲ ಮಾತ್ರ ಇದೆ ಅಂದುಕೊಂಡಿದ್ದೇವು, ಆದರೆ ಈಗ ಗೊತ್ತಾಗಿದೆ ನಮ್ಮ ಹೋರಾಟಕ್ಕೆ ಇಡೀ ಕರ್ನಾಟಕದ ಬೆಂಬಲ ಇದೆ, ಇದು ಇಲ್ಲಿಗೆ ನಿಲ್ಲುವುದಿಲ್ಲ' ಹೀಗೆಂದು ವಿಜಯದ ಸಂಕೇತ ತೋರಿಸುತ್ತಲೇ ಮಹದಾಯಿ ಹೋರಾಟಗಾರರು ಶನಿವಾರ ಜೈಲಿನಿಂದ ಹೊರಬಂದರು.[ತವರಿಗೆ ಹೋರಾಟಗಾರರು: ನವಲಗುಂದದಲ್ಲಿ ನಿಷೇಧಾಜ್ಞೆ]

ಧಾರವಾಡ ನ್ಯಾಯಾಲಯ ಶುಕ್ರವಾರ ರೈತರಿಗೆ ಷರತ್ತುಬದ್ಧ ಜಾಮೀನು ನೀಡಿದ ನಂತರ ಚಿತ್ರದುರ್ಗ ಮತ್ತು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿರುವ 186 ರೈತರು ತವರಿಗೆ ಹೊರಟಿದ್ದಾರೆ. ಜೈಲಿನಿಂದ ಬಿಡುಗಡೆಯಾದ ರೈತರನ್ನು ಕನ್ನಡ ಪರ ಸಂಘಟನೆಗಳು ಬರಮಾಡಿಕೊಂಡವು.[ಮಹದಾಯಿ ಹೋರಾಟಗಾರರಿಗೆ ಮುರುಘಾ ಶ್ರೀ ಆತಿಥ್ಯ]

ಚಿತ್ರ ಕೃಪೆ: G.M. Rohini

ಊಟಕ್ಕೆ ಯಾವ ಅಡ್ಡಿ ಆತಂಕ ಎದುರಾಗಲಿಲ್ಲ. ಪೊಲೀಸರು ನಮಗೆ ಸಹಕಾರ ನೀಡಿದರು. ಸರ್ಕಾರ ರೈತರ ಮೇಲೆ ಇನ್ನು ಮುಂದೆ ಈ ಬಗೆಯ ದೌರ್ಜನ್ಯ ನಡೆಸಬಾರದು ಎಂದು ರೈತ ಹೋರಾಟಗಾರರು ಹೇಳಿದರು.

ಎಲ್ಲರ ಬಿಡುಗಡೆ

ಎಲ್ಲರ ಬಿಡುಗಡೆ

ಮಹದಾಯಿ ಹೋರಾಟದ ವೇಳೆ ಬಂಧಿತರಾಗಿದ್ದ ಒಟ್ಟು 187 ರೈತರಲ್ಲಿ 57 ರೈತರು ಚಿತ್ರದುರ್ಗದ ಜೈಲಿನಲ್ಲಿದ್ದರು. ಉಳಿದವರು ಬಳ್ಳಾರಿ ಹಾಗೂ ಧಾರವಾಡ ಜೈಲಿನಲ್ಲಿದ್ದರು.

ಷರತ್ತು ಬದ್ಧ ಜಾಮೀನು

ಷರತ್ತು ಬದ್ಧ ಜಾಮೀನು

ಶುಕ್ರವಾರ ಧಾರವಾಡ ನ್ಯಾಯಾಲಯ ಎಲ್ಲ ರೈತರಿಗೂ( ತಾಂತ್ರಿಕ ಕಾರಣದಿಂದ ಇಬ್ರಾಹಿಂ ಸಾಬ್ ಹೊರತುಪಡಿಸಿ) ಷರತ್ತುಬದ್ಧ ಜಾಮೀನು ನೀಡಿತ್ತು.

ಕನ್ನಡ ಸಂಘಟನೆಗಳ ಬೆಂಬಲ

ಕನ್ನಡ ಸಂಘಟನೆಗಳ ಬೆಂಬಲ

ಜೈಲಿನಿಂದ ಬಿಡುಗಡೆಯಾದ ಹೋರಾಟಗಾರರನ್ನು ಕನ್ನಡ ಪರ ಸಂಘಟನೆಗಳು ಎದುರುಗೊಂಡವು. ರೈತರಿಗೆ ಜಯಘೋಷಗಳನ್ನು ಕೂಗಿದರು.

ಸಹಕಾರಕ್ಕೆ ಚಿರಋಣಿ

ಸಹಕಾರಕ್ಕೆ ಚಿರಋಣಿ

ಹೋರಾಟಗಾರರು, ಜೈಲಿನಲ್ಲಿ ಪೊಲೀಸರು ನೀಡಿದ ಸಹಕಾರಕ್ಕೆ ನಾವು ಚಿರಋಣಿ. ನಿಜಕ್ಕೂ ಜನರ ಬೆಂಬಲ ಕಂಡು ಸಂತಸವಾಗಿದೆ ಎಂದು ಜೈಲಿನಿಂದ ಬಿಡುಗಡೆಯಾದ ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.

ಹೋರಾಟ ಬದಲಾಗುವುದೇ?

ಹೋರಾಟ ಬದಲಾಗುವುದೇ?

ತವರಿಗೆ ಆಗಮಿಸುವ ರೈತರು ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಮಂಗಳವಾರದ ವೇಳೆಗೆ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.

English summary
Hubballi: After the Dharwad session court granted conditional bail 186 Farmers released from Chitradurga and Ballari Jail. 'Mahadayi is not only a struggle for Uttara Karnataka People but also south Karnataka and Whole Karnataka. We are obsequious to all Kannada Organizations who are gave the moral support, said farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X