Madras Eye: ಹೆಚ್ಚುತ್ತಿರುವ ಮದ್ರಾಸ್ ಐ ಪ್ರಕರಣ: ರೋಗ ಲಕ್ಷಣ ಹಾಗೂ ಮುಂಜಾಗ್ರತಾ ಕ್ರಮಗಳು

ರಾಜ್ಯದಲ್ಲಿ ಮದ್ರಾಸ್ ಐ ಅಥವಾ ಕಂಜಕ್ಟಿವೈಟಿಸ್ (Conjunctivitis) ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗಿವೆ.

ಪ್ರಕರಣಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಆರೋಗ್ಯ ಇಲಾಖೆ ಮದ್ರಾಸ್ ಐ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ ಮತ್ತು ನಿರ್ವಹಣೆ ಬಗ್ಗೆ ಸಲಹೆ ನೀಡಿದೆ. ರೋಗ ಲಕ್ಷಣಗಳನ್ನು ಗುರುತಿಸಲಾಗಿದ್ದು ಅದರ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದ್ದು, ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಲು ಕೋರಿದೆ.

madras-eye

ಮಳೆಗಾದಲ್ಲಿ ಸಾಮಾನ್ಯವಾಗಿ ಮದ್ರಾಸ್ ಐ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಹವಾಮಾನ ಬದಲಾವಣೆ ಕಾರಣ ಈ ಬಾರಿ ಹೆಚ್ಚಾಗಿ ಕಾಡುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಮದ್ರಾಸ್ ಐ ರೋಗ ಲಕ್ಷಣಗಳು

1) ಅತಿಯಾಗಿ ಕಣ್ಣೀರು ಬರುವುದು
2) ಕಣ್ಣಿನಲ್ಲಿ ತುರಿಕೆ
3) ಕಣ್ಣಿನ ಬಣ್ಣ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುವುದು. ನೀರು ಸೋರುತ್ತಿರುವುದು
4) ಸತತವಾಗಿ ಕಣ್ಣು ನೋವು ಮತ್ತು ಚುಚ್ಚಿದ ಅನುಭವ ಆಗುವುದು
5) ಬೆಳಕನ್ನು ನೋಡಲು ಆಗದೇ ಇರುವುದು
6) ದೃಷ್ಟಿ ಮಂಜಾಗುವುದು
7) ಕಣ್ಣಿನ ರೆಪ್ಪೆಗಳಲ್ಲಿ ಕೀವು ಮಿಶ್ರತವಾಗಿರುವುದು
8) ಕಣ್ಣುಗುಡ್ಡೆ ಊದಿಕೊಳ್ಳುವುದು

ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡರೆ ಅದು ಮದ್ರಾಸ್ ಐ ಎಂದು ಪರಿಗಣಿಸಬಹುದು. ಮದ್ರಾಸ್ ಐ ಬಂದಾಗ ಆತಂಕಪಡುವ ಅಗತ್ಯವಿಲ್ಲ, ಹಾಗೆಂದು ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ, ರೋಗ ಲಕ್ಷಣ ಕಂಡುಬಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಸರಿಯಾದ ಚಿಕಿತ್ಸೆ ಪಡೆಯಬೇಕು.

ಮುಂಜಾಗ್ರತಾ ಕ್ರಮ ಪಾಲಿಸಿ

ಕಣ್ಣಿಗೆ ಸಂಬಂಧಿಸಿದ (ಮದ್ರಾಸ್ ಐ) ಇತರೆ ಸಾಂಕ್ರಾಮಿಕ ರೋಗಗಳು ಉಂಟಾಗುವ ಸಂಭವ ಇರುವದರಿಂದ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ರೋಗ ಹರಡುವುದನ್ನು ತಡೆಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.

1) ಮದ್ರಾಸ್‌- ಐ ರೋಗದಿಂದ ಕಾಪಾಡಿ ಕೊಳ್ಳಲು ಜನ ದಟ್ಟಣೆ ಇರುವ ಕಡೆಗಳಲ್ಲಿ ಹೋಗುವುದನ್ನು ತಪ್ಪಿಸಬೇಕು.
2) ನೀರನ್ನು ಕುದಿಸಿ, ಆರಿಸಿ ಕುಡಿಯುವದು.
3) ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ, ಸೊಳ್ಳೆಗಳು ಉತ್ಪತ್ತಿ ಯಾಗದಂತೆ ನೋಡಿಕೊಳ್ಳುವದು.
4) ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು.
5) ಕಣ್ಣು ಮತ್ತು ಕೈಗಳ ನಡುವಿನ ಸಂಪರ್ಕವನ್ನು ತಪ್ಪಿಸಬೇಕು.
6) ಕಣ್ಣುಗಳ ಆಯಾಸ ತಡೆಯಲು ಟಿ.ವಿ. ಮತ್ತು ಮೊಬೈಲ್ ವೀಕ್ಷಣೆ ಕಡಿಮೆ ಮಾಡಬೇಕು.
7) ಸೋಂಕಿತರು ಬಳಸಿದ ಟವೆಲ್ ಬಳಕೆಯನ್ನು ತಪ್ಪಿಸುವುದು.
8) ಸೋಂಕಿತ ವ್ಯಕ್ತಿಗಳು ಮನೆಯಲ್ಲೇ ಇರುವುದು.
9) ವೈದ್ಯರ ಸಲಹೆ ಪಡೆದು ಕಣ್ಣಿನ ಔಷಧಗಳನ್ನು ಬಳಕೆ ಮಾಡುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+