Get Updates
Get notified of breaking news, exclusive insights, and must-see stories!

ಮಧುಕರಶೆಟ್ಟಿ ಜನ್ಮ ಜಯಂತಿ ಭ್ರಷ್ಟಾಚಾರ ವಿರೋಧಿ ದಿನವಾಗಲಿ: ನಿವತ್ತ ನ್ಯಾ. ಎನ್.ಕೆ. ಸುಧೀಂದ್ರರಾವ್

ಬೆಂಗಳೂರು ಡಿ. 18: ಮಧುಕರಶೆಟ್ಟಿ ಅಭಿಮನ್ಯ ಇದ್ದಂಗೆ. ಕೌರವರ ಸಂಖ್ಯೆ ಜಾಸ್ತಿ ಇದ್ದರೂ ಯುದ್ಧದಲ್ಲಿ ಜಯಿಸಿದ್ದು ಪಾಂಡವರು. ಮಧುಕರಶೆಟ್ಟಿಯಂತಹವರ ಸಂಖ್ಯೆ ಕಡಿಮೆ ಇದ್ದರೂ ಒಂದು ದಿನ ಭ್ರಷ್ಟಾಚಾರ ನಿರ್ಮೂಲನೆ ಯುದ್ಧದಲ್ಲಿ ಗೆಲುವು ಸಿಗುತ್ತದೆ. ಮಧುಕರಶೆಟ್ಟಿ ಅವರ ಜನ್ಮ ದಿನ ಭ್ರಷ್ಟಾಚಾರ ನಿರ್ಮೂಲನ ದಿನವಾಗಿ ರೂಪಾಂತರವಾಗಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾ. ಎನ್. ಕೆ. ಸುಧೀಂದ್ರರಾವ್ ಅಭಿಪ್ರಾಯಪಟ್ಟರು.

ಡಾ. ಕೆ. ಮಧುಕರಶೆಟ್ಟಿ ಅವರ ಅಭಿಮಾನ ಬಳಗ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ 'ದಿ.ಡಾ.ಕೆ. ಮಧುಕರಶೆಟ್ಟಿ ಅವರ 50ನೇ ಜಯಂತಿ' ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

'ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಎಂಬ ಎರಡು ಕ್ಯಾನ್ಸರ್‌ಗಳಿಂದ ಸಮಾಜ ನಲುಗುತ್ತಿದೆ. ಒಬ್ಬ ವ್ಯಕ್ತಿ ತನ್ನ ಬದಕಿಗೆ ಮೀರಿ ಮಾಡಿದ ಆಸ್ತಿಯೆಲ್ಲವೂ ಅಕ್ರಮ ಆಸ್ತಿಯೇ. ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಎಂಬ ಕ್ಯಾನ್ಸರ್ ತೊಡದು ಹಾಕಬೇಕಾದರೆ ಮಧುಕರಶೆಟ್ಟಿಯಂತಹ ಪ್ರಾಮಾಣಿಕ ವ್ಯಕ್ತಿತ್ವಗಳು ರೂಪಗೊಳ್ಳಬೇಕು. ಪ್ರಾಮಾಣಿಕರ ಸಂಖ್ಯೆ ಕಡಿಮೆ ಇದ್ದರೂ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ' ಎಂದು ಮಾರ್ಮಿಕವಾಗಿ ನುಡಿದರು.

Madhukar Shetty Birthday Should Be Celebrated as Corruption Eradication Day: NK Sudhindra Rao

ದಿವಂಗತ ಎಂಬ ಪದಕ್ಕೆ ಮಧುಕರಶೆಟ್ಟಿ ಅರ್ಹರು. ಅವರು ಸ್ವರ್ಗ ಲೋಕದಲ್ಲಿ ಸಿಂಹಾಸನ ರೂಢರಾಗಿರುತ್ತಾರೆ. ನಾನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿ ನಿಯೋಜನೆಗೊಂಡ ವೇಳೆ ಮಧುಕರಶೆಟ್ಟಿ ಭೇಟಿ ಮಾಡಿದ್ದರು. ಭ್ರಷ್ಟಾಚಾರ ಪ್ರಕರಣಗಳ ವಿಚಾರದಲ್ಲಿ ಸಾಕಷ್ಟು ಬಾರಿ ನನ್ನೊಂದಿಗೆ ಚರ್ಚಿಸಿದ್ದರು. ಅವರ ಜನ್ಮ ಜಯಂತಿ ಭ್ರಷ್ಟಾಚಾರ ವಿರೋಧಿ ಆಂದೋಲನವಾಗಿ ರೂಪಾಂತರವಾಗಲಿ ಎಂದು ನ್ಯಾ. ಸುಧೀಂದ್ರರಾವ್ ಆಶಿಸಿದರು.

ಇದಕ್ಕೂ ಮೊದಲು ಮಾತನಾಡಿದ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥ, ಹಿರಿಯ ಐಪಿಎಸ್ ಅಧಿಕಾರಿ ಅರುಣ್ ಚಕ್ರವರ್ತಿ, ಮಧುಕರ ಶೆಟ್ಟಿ ಐಪಿಎಸ್ ಮಾಡುವ ಮೊದಲೇ ಒಡನಾಟವಿತ್ತು. ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದೆವು. ಮಧುಕರ ಶೆಟ್ಟಿ ಸುದ್ದಿಗಾಗಿ ಸೇವೆ ಮಾಡಲಿಲ್ಲ, ಸೇವೆ ಮಾಡಿ ಸುದ್ದಿಯಾಗಲಿಲ್ಲ. ಸುದ್ದಿಯಿಲ್ಲದೇ ಸೇವೆ ಮಾಡಿದರು. ಮಧುಕರಶೆಟ್ಟಿ ಅವರು ಐಪಿಎಸ್ ಮಾಡುವ ಬಗ್ಗೆ ನಾನು ಹೇಳಿದ ಭವಿಷ್ಯ ಮೂರೇ ವರ್ಷದಲ್ಲಿ ನಿಜವಾಗಿತ್ತು. ಮಧುಕರಶೆಟ್ಟಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಮಾದರಿ ಆಲೋಚನೆ ಮಾಡುತ್ತಿದ್ದರು. ಬಾಬಾ ಸಹೇಬ್ ಅವರ ಜನ ಪರ ಅಲೋಚನೆಗಳಿಗೆ ಸಮಾಜದಿಂದ ವಿರೋಧ ವ್ಯಕ್ತವಾಗಿತ್ತು, ಅದೇ ರೀತಿ ಮಧುಕರಶೆಟ್ಟಿ ಅವರ ಆಲೋಚನೆಗಳಿಗೆ ವಿರೋಧ ವ್ಯಕ್ತವಾದರೂ ಅವರ ತಳ ಸಮುದಾಯದ ಶ್ರೇಯೋಭಿವೃದ್ಧಿಯ ವಿನೂತನ ಕೊಡುಗೆ ಕೊಡುವ ರೀತಿ ಇರುತ್ತಿದ್ದವು. ಇಂದು ಕೆಲವು ಅಧಿಕಾರಿಗಳು ತಮ್ಮ ಪ್ರಚಾರಕ್ಕೆ ಫೇಸ್‌ಬುಕ್ ಪೇಜ್ ಗಳನ್ನು ಕ್ರಿಯೇಟ್ ಮಾಡಿದ್ದಾರೆ. ದಿನ ಬೆಳಗಾದರೆ ಎಷ್ಟು ಲೈಕ್, ಕಮೆಂಟ್ ಬಂದಿವೆ ಎಂದು ನೋಡುತ್ತಿರುತ್ತಾರೆ. ಒಂದು ಲೈಕ್ ಬೀಳದಿದ್ದರೆ ಅವರು ಖಿನ್ನತೆಗೆ ಒಳಗಾಗುತ್ತಾರೆ. ಮಧುಕರಶೆಟ್ಟಿ ಅವರನ್ನು ನೋಡದಿದ್ದರೂ ಅವರ ಗುಣಕ್ಕೆ ಮನಸೋತು ಶೇ. 90 ರಷ್ಟು ಅಭಿಮಾನಿ ಬಳಗವಿದೆ ಎಂದು ಫೇಸ್‌ಬುಕ್ ಸಿಂಗಂಗಳ ಪ್ರಚಾರ ಪ್ರಿಯತೆ ಬಗ್ಗೆ ಮಾರ್ಮಿಕವಾಗಿ ನುಡಿದರು.

Madhukar Shetty Birthday Should Be Celebrated as Corruption Eradication Day: NK Sudhindra Rao

ಹಿರಿಯ ಐಎಎಸ್ ಅಧಿಕಾರಿ ಡಾ. ಹರ್ಷಗುಪ್ತ ಮಾತನಾಡಿ, ಮಧುಕರಶೆಟ್ಟಿ ಅವರೊಂದಿಗಿನ ಒಡನಾಟ ಸ್ಮರಿಸಿದರು. ಮಧುಕರಶೆಟ್ಟಿ ಅವರ ಜನಪರ ಆಲೋಚನೆಗಳನ್ನು ಸ್ಮರಿಸಿದರು. ನಾನು ಬೀದರ್ ನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ರಸ್ತೆ ಅಗಲೀಕರಣ ಮಾಡಲು ಮನೆಗಳನ್ನು ನೆಲಸಮ ಮಾಡಬೇಕಿತ್ತು. ಜನರು ಜಿಲ್ಲಾಡಳಿತದ ವಿರುದ್ಧ ತಿರುಗಿ ಬೀಳುವ ವಾತಾವರಣವಿತ್ತು. ಮಧುಕರಶೆಟ್ಟಿ ನೀಡಿದ ಸಲಹೆ ಮೇರೆಗೆ ಜನರ ಮನವೊಲಿಸಲಾಗಿತ್ತು. ಪ್ರತಿಭಟನೆ ಮಾಡಬೇಕಿದ್ದ ಜನರು ನನಗೆ ಹೂವಿನ ಹಾರ ಹಾಕಿ ಸ್ಮರಿಸಿದ್ದರು. ಜನಪರ ಅಲೋಚನೆ ಮಾಡುವಲ್ಲಿ ಮಧುಕರಶೆಟ್ಟಿ ಅವರಿಗೆ ಪರ್ಯಾಯವಿಲ್ಲ. ನಾನು ಹಿರಿಯನಾಗಿದ್ದರೂ ಅವರ ಬಳಿ ಸಲಹೆ ಪಡೆಯುತ್ತಿದ್ದೆ. ಚಿಕ್ಕಮಗಳೂರಿನಲ್ಲಿ ನಾನು ಜಿಲ್ಲಾಧಿಕಾರಿಯಾಗಿದ್ದಾಗ ಮಧುಕರಶೆಟ್ಟಿ ಎಸ್ಪಿಯಾಗಿದ್ದರು. ಜಿಲ್ಲೆಯನ್ನು ಪ್ರವಾಸೋದ್ಯದಮ ತಾಣವನ್ನಾಗಿ ಬದಲಿಸುವ ಪ್ರಸ್ತಾಪ ವಿಟ್ಟಾಗ, ಅದರಿಂದ ಸ್ಥಳೀಯರಿಗೆ ನೆರವಾಗುವ ನಿಟ್ಟಿನಲ್ಲಿ 'ಹೋಮ್ ಸ್ಟೇ' ಕಲ್ಪನೆ ನೀಡಿದ್ದೇ ಅವರು. ಇವತ್ತು ಹೋಮ್ ಸ್ಟೇನಿಂದ ಜನ ಸಾಮಾನ್ಯರಿಗೆ ಆದಾಯದ ಮೂಲ ಆಗಿದೆ ಎಂದರೆ ಅದು ಮಧುಕರಶೆಟ್ಟಿ ಅವರ ಕಲ್ಪನೆ ಎಂದು ಕೊಂಡಾಡಿದರು.

Madhukar Shetty Birthday Should Be Celebrated as Corruption Eradication Day: NK Sudhindra Rao

ಸಮಾರಂಭದಲ್ಲಿ ಐಪಿಎಸ್ ಅಧಿಕಾರಿಗಳಾದ ದೇವರಾಜ್, ಅಬ್ದುಲ್ ಅಹಾದ್, ಉಮಾ ಪ್ರಶಾಂತ್ ಮತ್ತಿತರರು ಪಾಲ್ಗೊಂಡಿದ್ದರು. ಮಧುಕರಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+