ಸಚಿವ ದಿನೇಶ್ ಗುಂಡೂರಾವ್ ಕೊರಳಿಗೆ ಭೂ ಕಂಟಕ

ಬೆಂಗಳೂರು, ನ.12 : ಸಚಿವ ದಿನೇಶ್‌ ಗುಂಡೂರಾವ್‌ ಕುಟುಂಬದಿಂದಾದ ಭೂಕಬಳಿಕೆ ಬಗ್ಗೆ ಅವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೋರ್ಡಾನ್‌ನಲ್ಲಿ ಸಮ್ಮೇಳನವೊಂದರಲ್ಲಿ ಪಾಲ್ಗೊಂಡಿರುವ ಸಚಿವರು ಟ್ವಿಟರ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದಿನ ಸುದ್ದಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಮತ್ತೊಬ್ಬ ಸಚಿವರ ಕೊರಳಿಗೆ ಭೂ ಹಗರಣ ಸುತ್ತಿಕೊಂಡಿದೆ. ಸಚಿವ ದಿನೇಶ್‌ ಗುಂಡೂರಾವ್‌ ಕುಟುಂಬದಿಂದಾದ ಭೂಕಬಳಿಕೆ ಕುರಿತು ಐದು ವಾರದೊಳಗೆ ವಾಸ್ತವಾಂಶ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಲೋಕಾಯುಕ್ತ ವೈ.ಭಾಸ್ಕರರಾವ್ ಸೂಚನೆ ನೀಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ನವರತ್ನ ಅಗ್ರಹಾರ ಗ್ರಾಮದ ಸರ್ವೆ ನಂ.3 ಹಾಗೂ 13ರಲ್ಲಿ ಇರುವ 10.9 ಎಕರೆ ಸರ್ಕಾರಿ ಜಮೀನನ್ನು ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ಅವರ ಕುಟುಂಬ ಸದಸ್ಯರು ಕಬಳಿಸಿದ್ದಾರೆ ಎಂಬುದು ಆರೋಪ. [ದಿನೇಶ್ ಗುಂಡೂರಾವ್ ವಿರುದ್ಧ ಭೂ ಅಕ್ರಮ ಆರೋಪ]

dinesh gundu rao

ಪ್ರಕರಣದ ವಿವರ : ಸಚಿವ ದಿನೇಶ್ ಗುಂಡೂರಾವ್ ಕುಟುಂಬ ಭೂ ಕಬಳಿಕೆ ಮಾಡಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಮೊದಲು ಆರೋಪಿಸಿದ್ದರು. ಭೂಮಿಯ ಮಾರುಕಟ್ಟೆ ಮೌಲ್ಯ 120 ಕೋಟಿ ರೂ. ಇದನ್ನು ಸಚಿವರಿಂದ ತುಂಬಿಕೊಡುವಂತೆ ಸೂಚಿಸಬೇಕು ಮತ್ತು ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದ್ದರು. [ಸಚಿವರ ಭೂ ಹಗರಣ, ವರದಿ ಕೇಳಿದ ಸಿಂಗ್]

ಸಚಿವರ ಭೂ ಕಬಳಿಕೆ ಕುರಿತು ರಾಜ್ಯಪಾಲರಿಗೆ ದೂರು ನೀಡಿ ಅದರ ಪ್ರತಿಯನ್ನು ಲೋಕಾಯುಕ್ತರಿಗೂ ಸಲ್ಲಿಸಿದ್ದರು. ದೂರನ್ನು ಪರಿಗಣಿಸಿದ ಲೋಕಾಯುಕ್ತರು ಪ್ರಕರಣದ ತನಿಖೆ ನಡೆಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದ್ದರು.

ಜಮೀನು ಕಬಳಿಕೆ ಬಗ್ಗೆ ವರದಿ ನೀಡುವಂತೆ ಬೆಂಗಳೂರು ಉತ್ತರ ತಾಲೂಕು ತಹಸೀಲ್ದಾರ್‌ಗೆ ಲೋಕಾಯುಕ್ತ ಪೊಲೀಸರು ಸೂಚನೆ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬೆಂಗಳೂರು ಉತ್ತರ ತಾಲೂಕು ತಹಸೀಲ್ದಾರ್‌ ಬಾಳಪ್ಪ ಹಂದಿಗುಂದ ಅವರು, ಜಮೀನು ಕಬಳಿಸಿರುವುದು ದೃಢಪಟ್ಟಿದೆ ಎಂದು ವರದಿ ನೀಡಿದ್ದಾರೆ.

ದಿನೇಶ್ ಗುಂಡೂರಾವ್ ಅವರ ಚಿಕ್ಕಮ್ಮ ಜಮುನಾ ಎಂಬುವವರು ಇದೇ ಪ್ರದೇಶದಲ್ಲಿ 17.22 ಎಕರೆ ಜಮೀನು ಹೊಂದಿದ್ದಾರೆ. ಇದು ಕೂಡ ಸರ್ಕಾರಿ ಜಮೀನು ಇರಬಹುದು ತಹಸೀಲ್ದಾರ್‌ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಯಲಹಂಕ ತಹಸೀಲ್ದಾರ್‌ ನೀಡಿರುವ ವರದಿಯನ್ನು ಪರಿಶೀಲಿಸಿದ ನಂತರ, ಇನ್ನೊಮ್ಮೆ ಪರಿಶೀಲಿಸಿ ವಾಸ್ತವಾಂಶದ ವರದಿ ನೀಡುವಂತೆ ಲೋಕಾಯುಕ್ತರು ಮಂಗಳವಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+