ಯಡಿಯೂರಪ್ಪ ವಿರುದ್ಧ 13ನೇ ಎಫ್‌ಐಆರ್ ದಾಖಲು
ಬೆಂಗಳೂರು, ಜೂ.27 : ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮತ್ತೊಂದು ಎಫ್‌ಐಆರ್‌ಅನ್ನು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದಾರೆ. ಇದುವರೆಗೂ ಅವರ ವಿರುದ್ಧ 13 ಎಫ್‌ಐಆರ್ ದಾಖಲಾಗಿದ್ದು, ಮೂರು ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಮೇರಿದ್ದಾರೆ.
2010ರ ಮೇ7ರಂದು ನಾಗರಭಾವಿ 1ನೇ ಹಂತದಲ್ಲಿ 25 ಗುಂಟೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ 13ನೇ ಎಫ್‌ಐಆರ್ ದಾಖಲಾಗಿದೆ. ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಮಕ್ಕಳು ಖರೀದಿ ಮಾಡಿದ್ದ ಜಾಗವನ್ನು ಡಿನೋಟಿಫಿಕೇಷನ್ ಮಾಡುವಂತಿಲ್ಲ ಎಂದು ಬಿಡಿಎ ವರದಿ ನೀಡಿತ್ತು. [ಯಡಿಯೂರಪ್ಪ ವಿರುದ್ಧ 3 ಎಫ್ ಐಆರ್]

ಈ ವರದಿಯನ್ನು ಉಲ್ಲಂಘನೆ ಮಾಡಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂಬುದು ಆರೋಪ. ಡಿ.ಸಿ.ತಮ್ಮಣ್ಣ, ಹಾಗೂ ಅವರ ಮಕ್ಕಳಾದ ಡಿ.ಟಿ.ಸಂತೋಷ್, ಡಿ.ಟಿ.ಸಂಗೀತಾ, ಡಿ.ಟಿ.ಶೃತಿ ಹಾಗೂ ಜಮೀನು ನೋಂದಣಿ ಮಾಡಿಕೊಟ್ಟಿದ್ದ ಅಂದಿನ ಸಬ್ ರಿಜಿಸ್ಟ್ರಾರ್ ವಿರುದ್ಧವೂ ದೂರು ದಾಖಲಿಸಲಾಗಿದೆ. [ಎಚ್ಡಿಕೆ, ಯಡಿಯೂರಪ್ಪ ವಿರುದ್ಧ ಎಫ್ ಐಆರ್]
2012ರ ಸಿಎಜಿ ವರದಿಯಲ್ಲಿ ಈ ಅಕ್ರಮ ಡಿನೋಟಿಫಿಕೇಷನ್ ಬಗ್ಗೆ ಪ್ರಸ್ತಾಪವಿತ್ತು. ಸಾಮಾಜಿಕ ಕಾರ್ಯಕರ್ತ ಜಯಕುಮಾರ ಹಿರೇಮಠ ಈ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡುವಂತೆ ಸೂಚನೆ ನೀಡಿತ್ತು. [ಯಡಿಯೂರಪ್ಪ ಅವರ ಮುಂದಿನ ನಡೆಯೇನು?]
ಹೈಕೋರ್ಟ್‌ಗೆ ಯಡಿಯೂರಪ್ಪ : ತಮ್ಮ ವಿರುದ್ಧ ದುರುದ್ದೇಶಪೂರ್ವಕವಾಗಿ ಎಫ್ಐಆರ್ ದಾಖಲು ಮಾಡಲಾಗುತ್ತಿದೆ. ಮೂರು ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. [ಯಡಿಯೂರಪ್ಪಗೆ ಧೈರ್ಯ ತುಂಬಿದ ಎಚ್ಡಿಕೆ]
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಎನ್.ವೇಣುಗೋಪಾಲಗೌಡ ಅವರ ಪೀಠ ಲೋಕಾಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ. ವಡೇರಹಳ್ಳಿ, ಬಿಳೇಕಹಳ್ಳಿ ಮತ್ತು ಜೆ.ಬಿ.ಕಾವಲ್‌ನಲ್ಲಿನ ಎಫ್ಐಆರ್‌ಗಳನ್ನು ರದ್ದುಗೊಳಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.












Click it and Unblock the Notifications