ಕರ್ನಾಟಕದ ನಾಯಕರಿಗೆ ಮತ್ತೆ ಬಿಜೆಪಿ ಹೈಕಮಾಂಡ್ ಬುಲಾವ್ : ಇಲ್ಲಿದೆ ಕಮಲ ಕಲಿಗಳ ಪೈನಲ್‌ ಲಿಸ್ಟ್?‌

ಬೆಂಗಳೂರು, ಮಾರ್ಚ್​ 09: ಲೋಕಸಭೆ ಚುನಾವಣೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಇತ್ತ ಬಿಜೆಪಿ ಟಿಕೆಟ್‌ ಬಿಡುಗಡೆಯಾಗುತ್ತಿದ್ದಂತೆ ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದ 28 ಕ್ಷೇತ್ರಗಳ ಪಟ್ಟಿ ಬಿಡುಗಡೆಗೆ ಇನ್ನೊಂದು ಸುತ್ತಿನ ಸಭೆ ನಡೆಸಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ.

ಬಿಜೆಪಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಗೆ ಮುಂದಾಗಿದ್ದು, ಈ ಹಿನ್ನಲೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಮತ್ತೆ ಬುಲಾವ್ ನೀಡಿದೆ. ಹೀಗಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ.

Lok Sabha polls 2024 BJP High Command Called Karnataka Leaders Once Again

ಭಾನುವಾರ ಸಂಜೆ ದೆಹಲಿಯಲ್ಲಿ ಬಿಜೆಪಿ ಸಿಇಸಿ ಸಭೆ ನಡೆಯಲಿದ್ದು ಅದಕ್ಕೂ ಮುನ್ನ ರಾಜ್ಯ ನಾಯಕರ ಜೊತೆ ಮೂರನೇ ಸುತ್ತಿನ ಚರ್ಚೆ ನಡೆಸುವುದು ಹೈಕಮಾಂಡ್ ನಿರ್ಧರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಸೇರಿದಂತೆ ಹಲವು ರಾಜ್ಯ ನಾಯಕರು ದೆಹಲಿಗೆ ತೆರಳಿ ರಾಜ್ಯದ ಅಭ್ಯರ್ಥಿಗಳ ಆಯ್ಕೆ ಕುರಿತು ದೆಹಲಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು, ಇದೀಗ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಬಿಜೆಪಿ ಹೈಕಮಾಂಡ್‌ ಬುಲಾವ್‌ ನೀಡಿದೆ.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿ ಸಂಸದರಿದ್ದು, ಈ ಬಾರಿ ಕೆಲವು ಹಿರಿಯ ಸಂಸದರಿಗೆ ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಇದೆ. ಈಗಾಗಲೇ ಕೆಲವು ಹಾಲಿ ಕ್ಷೇತ್ರಗಳಲ್ಲಿ ಸಂಸದರಿಗೆ ವಿರೋಧ ವ್ಯಕ್ತವಾಗಿದ್ದು, ರಾಜ್ಯ ಬಿಜೆಪಿ ನಾಯಕರ ಜೊತೆಗೆ ಚರ್ಚೆ ನಡೆಸಿ ಅಂತಿಮವಾಗಿ ಪಟ್ಟಿ ಬಿಡುಗಡೆ ಮಾಡಲು ಹೈಕಮಾಂಡ್‌ ನಿರ್ಧರಿಸಿದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!

ಬೆಳಗಾವಿ - ಜಗದೀಶ್‌ ಶೆಟ್ಟರ್‌

ಚಿಕ್ಕೋಡಿ - ಅಣ್ಣಾ ಸಾಹೇಬ್‌ ಜೊಲ್ಲೆ

ಬೀದರ್‌ - ಭಗವಂತ್‌ ಖೂಬಾ

ಕಲಬುರಗಿ - ಉಮೇಶ್‌ ಜಾಧವ್‌

ವಿಜಯಪುರ - ರಮೇಶ್‌ ಜಿಗಜಿಣಗಿ

ಬಾಗಲಕೋಟೆ - ಪಿಸಿ ಗದ್ದಿಗೌಡರ್

ರಾಯಚೂರು - ರಾಜಾ ಅಮರೇಶ್ವರ್‌ ನಾಯಕ / ಬಿವಿ ನಾಯಕ

ಕೊಪ್ಪಳ - ಸಂಗಣ್ಣ ಕರಡಿ / ಡಾ ಬಸವರಾಜ್‌ ಕ್ಯಾವಟರ್‌

ಧಾರವಾಡ - ಪ್ರಹ್ಲಾದ್‌ ಜೋಶಿ

ಹಾವೇರಿ - ಬಿಸಿ ಪಾಟೀಲ್‌ / ಕೆಇ ಕಾಂತೇಶ್‌

ಬಳ್ಳಾರಿ - ಬಿ ಶ್ರೀರಾಮುಲು

ದಕ್ಷಿಣ ಕನ್ನಡ - ನಳಿನ್‌ ಕುಮಾರ್‌ ಕಟೀಲ್‌ / ನಿರ್ಮಲಾ ಸೀತಾರಾಮನ್‌

ಉತ್ತರ ಕನ್ನಡ - ಅನಂತ ಕುಮಾರ್‌ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿ

ಉಡುಪಿ - ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ

ಶಿವಮೊಗ್ಗ - ಬಿವೈ ರಾಘವೇಂದ್ರ

ಚಿತ್ರದುರ್ಗ - ಎ ನಾರಾಯಣಸ್ವಾಮಿ

ದಾವಣಗೆರೆ - ಜಿಎಂ ಸಿದ್ದೇಶ್ವರ್‌

ತುಮಕೂರು - ವಿ ಸೋಮಣ್ಣ

ಬೆಂಗಳೂರು ಉತ್ತರ - ನಿರ್ಮಲಾ ಸೀತಾರಾಮನ್‌

ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ

ಬೆಂಗಳೂರು ಸೆಂಟ್ರಲ್‌ - ಜೈಶಂಕರ್‌ / ಪಿಸಿ ಮೋಹನ್‌

ಬೆಂಗಳೂರು ಗ್ರಾಮಾಂತರ - ಡಾ ಸಿಎನ್‌ ಮಂಜುನಾಥ್‌

ಚಿಕ್ಕಬಳ್ಳಾಪುರ - ಡಾ ಕೆ ಸುಧಾಕರ್‌ / ಅಲೋಕ್‌ ವಿಶ್ವನಾಥ್‌

ಮೈಸೂರು - ಪ್ರತಾಪ್‌ ಸಿಂಹ / ಸಾರಾ ಮಹೇಶ್‌

ಚಾಮರಾಜನಗರ - ಡಾ ಮೋಹನ್‌ ಕುಮಾರ್‌ / ಎಸ್‌ ಬಾಲರಾಜ್‌

ಜೆಡಿಎಸ್‌ ಗೆ ಮೂರು ಕ್ಷೇತ್ರ!

ಮಂಡ್ಯ
ಕೋಲಾರ
ಹಾಸನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+