ಜ.1ಕ್ಕೆ 18 ತುಂಬುವಂತಿದ್ದರೆ ಈಗಲೇ ವೋಟರ್ಸ್ ನೋಂದಣಿ
ಬೆಂಗಳೂರು,
ನ.4: ಮುಂದಿನ ಲೋಕಸಭಾ ಚುನಾವಣೆಗೆ ಸರ್ವತ್ರ ತಯಾರಿಗಳು ಭರದಿಂದ ಸಾಗುತ್ತಿವೆ. ಒಂದು ಕಡೆಯಿಂದ ರಾಜಕೀಯ ಪಕ್ಷಗ ಸಿದ್ಧತೆ ಆರಂಭಿಸಿರುವ ಬೆನ್ನಿಗೇ ಚುನಾವಣಾ ಆಯೋಗವು ಬಹುದೊಡ್ಡ ಕೆಲಸಕ್ಕೆ ಕೈಹಾಕಿದೆ. id="toptextpromo"> id='are-slot-1' class='oiad oi-axt oiadv'>ಪ್ರತಿ
ಬಾರಿ ಚುನಾವಣೆ ನಡೆದಾಗಲೂ ಚುನಾವಣಾ ಆಯೋಗವು ಮತದಾರರ ನೋಂದಣಿ ಅಭಿಯಾನ ನಡೆಸುವುದು ಸಾಮಾನ್ಯ. ಆದರೆ ಈ ಬಾರಿ 2014 ರ ಚುನಾವಣೆ ವೇಳೆಗೆ 12 ಕೋಟಿ ಯುವ ಮತದಾರರು ಮತ ಚಲಾಯಿಸುವ ಹಕ್ಕನ್ನು ಪಡೆಯಲಿದ್ದಾರೆ. ಅವರನ್ನೆಲ್ಲಾ ಮತದಾನಕ್ಕೂ ಮುನ್ನ Voters Listನಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರೇರೇಪಿಸಬೇಕಿದೆ. id='are-slot-2' class='oiad oi-axt oiadv'>ಕರ್ನಾಟಕದಲ್ಲೂ
ಚುನಾವಣಾ ಆಯೋಗವು ಈಗಾಗಲೇ ಮತದಾರರ ನೋಂದಣಿ ಅಭಿಯಾನ ಶುರು ಹಚ್ಚಿಕೊಂಡಿದೆ. ಆಯಾ ಜಿಲ್ಲೆಗಳ ಜಲ್ಲಾಧಿಕಾರಿಗಳು ಈ ಹೊಣೆ ಹೊತ್ತಿದ್ದಾರೆ.
greater participation for stronger democracy
'ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ' ಎಂಬ ಹೆಸರಿನಲ್ಲಿ ಕರ್ನಾಟಕ ಚುನಾವಣೆ ಆಯೋಗವು ಕರ್ನಾಟಕದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಹಾಲಿ ನೋಂದಾಯಿತ ಮತದಾರರ ಮಟ್ಟಿಯನ್ನು ಅಕ್ಟೋಬರ್ 30ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಅದರಲ್ಲಿ ನಿಮ್ಮ ಹೆಸರು ದಾಖಲಾಗಿದೆಯೇ ಎಂಬುದನ್ನು ಮತದಾರರು ಖುದ್ದಾಗಿ ತಾವೇ ಪರಾಮರ್ಶಿಸುವ ಹೊಣೆಹೊರಬೇಕು. ಸಂಬಂಧಪಟ್ಟ ಕಚೇರಿಯಲ್ಲಿ Voters List ಪರಿಶೀಲಿಸಬಹುದು. ಅಥವಾ ಆಯೋಗದ ವೆಬ್ ಸೈಟಿನಲ್ಲೂ cross check ಮಾಡಬಹುದು.

ಮುಂದಿನ ಜನವರಿಗೆ 18 ತುಂಬಿದ್ದರೆ
01-01-2014ಕ್ಕೆ ನಿಮಗೆ 18 ತುಂಬುವಂತಿದ್ದರೆ ಈಗಲೇ ವೋಟರ್ಸ್ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ. ಆ ಮೇಲೆ ಕೊನೆಯ ಘಳಿಗೆಯಲ್ಲಿ ಅವಾಂತರವಾಗುವುದು ಬೇಡ.

ವೆಬ್ ಸೈಟ್ ಸದ್ಯಕ್ಕೆ ಸ್ಥಗಿತ
ಹಾಗಂತ ಇಂದೇ ಆಯೋಗದ ಈ ವೆಬ್ ಸೈಟಿಗೆ ಭೇಟಿ ನೀಡಬೇಡಿ. ಏಕೆಂದರೆ ಅದು ಸದ್ಯಕ್ಕೆ ಸ್ಥಗಿತಗೊಂಡಿದೆ. ಈ ವಾರಾಂತ್ಯಕ್ಕೆ ಮರು ಚಾಲ್ತಿಗೆ ಬರುವ ಅಂದಾಜಿದೆ.

ನ. 29ರೊಳಗೆ ಆಯೋಗದ ಗಮನಕ್ಕೆ ತನ್ನಿ
ನಿಮ್ಮ ಹೆಸರು ಸರಿಯಿಲ್ಲದಿದ್ದರೆ ಅಥವಾ ಇನ್ಯಾವುದೇ ನ್ಯೂನತೆಗಳು ಕಂಡುಬಂದರೆ ನವೆಂಬರ್ 29ರೊಳಗಾಗಿ ಆಯೋಗದ ಗಮನಕ್ಕೆ ತಂದು ಸರಿಪಡಿಸಿಕೊಳ್ಳಿ.












Click it and Unblock the Notifications