ಅಂದು ಕೊಂಡಂತೆ ಎರಡಂಕಿ ದಾಟಿದ ಕಾಂಗ್ರೆಸ್; ಗೆಲ್ಲಬಹುದಾದ ಕ್ಷೇತ್ರಗಳು ಇಲ್ಲಿವೆ ನೋಡಿ
ಬೆಂಗಳೂರು, ಜೂನ್ 04: ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ 3-4 ಸ್ಥಾನ ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಮಾಹಿತಿ ತೋರಿಸುತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಅದರಂತೆ ಕಾಂಗ್ರೆಸ್ ಎರಡಂಕಿಯನ್ನ ಕಾಂಗ್ರೆಸ್ ದಾಟಲಿದೆ.
ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಬರೋಬ್ಬರಿ 20 ಕ್ಷೇತ್ರಗಳನ್ನ ಗೆಲ್ಲಬೇಕು ಎಂದು ಟಾರ್ಗೆಟ್ ನೀಡಿತ್ತು. ರಾಜ್ಯ ಕಾಂಗ್ರೆಸ್ ನಾಯಕರು ಕನಿಷ್ಠ 15 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ರು. ಇದೀಗ ಕಾಂಗ್ರೆಸ್ ನಾಯಕರ ವಿಶ್ವಾಸದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನಗಳನ್ನು ಗೆಲುವು ಸಾಧಿಸಲಿದೆ ಎನ್ನಲಾಗಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಸುನೀಲ್ ಬೋಸ್, ಬೀದರ್‌ನಲ್ಲಿ ಸಾಗರ್ ಖಂಡ್ರೆ , ಚಿಕ್ಕೋಡಿಯಲ್ಲಿ ಪ್ರಿಯಾಂಕ್ ಜಾರಕಿಹೊಳಿ, ಕೊಪ್ಪಳ ಕ್ಷೇತ್ರದಲ್ಲಿ ರಾಜಶೇಖರ್ ಹಿಟ್ನಾಳ್ ಗೆಲುವು ಸಾಧಿಸಲಿದೆ ಎಂದು ತಿಳಿದು ಬಂದಿದೆ.

ಇನ್ನೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್-, ಬಳ್ಳಾರಿ ಕ್ಷೇತ್ರದಿಂದ ಇ ತುಖಾರಂ ಹಾಗೂ ಹಾಸನ ಲೋಕಸಭಾ ಕ್ಷೇತ್ರದಿಂದ ಶ್ರೇಯಸ್ ಪಟೇಲ್ , ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮುಸ್ಲೀ ಅಭ್ಯರ್ಥಿ ಮನ್ಸೂರ್ ಅಲಿ ಖಾನ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಚಂದ್ರಪ್ಪ ಅವರು ಗೆಲುವು ಸಾಧಿಸಲಿದ್ದಾರೆ.
ಸಚಿವ ಎಂ ಬಿ ಪಾಟೀಲ್ ಮಾತನಾಡಿ, ಎಕ್ಸಿಟ್ ಪೋಲ್ ನ ಫಲಿತಾಂಶವನ್ನು ನಂಬಲು ಸಾಧ್ಯವಿಲ್ಲ. ನಮ್ಮ ಗ್ಯಾರಂಟಿಗಳು ಎಲ್ಲರನ್ನೂ ವಿಶೇಷವಾಗಿ ಮಹಿಳೆಯರನ್ನು ತಲುಪಿದೆ. ಬೆಂಗಳೂರಿನಲ್ಲಿ 2 ಕ್ಷೇತ್ರಗಳು ಸೇರಿದಂತೆ ರಾಜ್ಯದಲ್ಲಿ ಕನಿಷ್ಠವೆಂದರೂ14, ಗರಿಷ್ಠ 20 ಕ್ಷೇತ್ರಗಳಲ್ಲಿ ನಾವು ಜಯಗಳಿಸುತ್ತೇವೆಂಬ ವಿಶ್ವಾಸವಿದೆ. ಅಂತೆಯೇ ದೇಶದಲ್ಲಿ ನಮ್ಮ 'ಇಂಡಿಯಾ' ಕೂಟ 295 ಸೀಟುಗಳನ್ನು ಗೆಲ್ಲಲಿದೆ. ಈ ಬಾರಿ ಮೋದಿ ಅಲೆ ಎಲ್ಲೂ ಇಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಗೆಲ್ಲುವ ಕ್ಷೇತ್ರಗಳು ಇಲ್ಲಿವೆ
* ಬೆಳಗಾವಿ - ಜಗದೀಶ್ ಶೆಟ್ಟರ್ - ಬಿಜೆಪಿ
* ಬಾಗಲಕೋಟೆ - ಪಿಸಿ ಗದ್ದಿಗೌಡರ್ - ಬಿಜೆಪಿ
* ವಿಜಯಪುರ - ರಮೇಶ್ ಜಿಗಜಿಣಗಿ - ಬಿಜೆಪಿ
* ಕಲಬುರಗಿ - ಉಮೇಶ್ ಜಾದವ್- ಬಿಜೆಪಿ
* ರಾಯಚೂರು - ರಾಜಾ ಅಮರೇಶ್ವರ ನಾಯಕ - ಬಿಜೆಪಿ
* ಹಾವೇರಿ - ಬಸವರಾಜ ಬೊಮ್ಮಾಯಿ - ಬಿಜೆಪಿ
* ಧಾರವಾಡ - ಪ್ರಹ್ಲಾದ್ ಜೋಶಿ - ಬಿಜೆಪಿ
* ಉತ್ತರ ಕನ್ನಡ - ವಿಶ್ವೇಶ್ವರ ಹೆಗಡೆ ಕಾಗೇರಿ - ಬಿಜೆಪಿ
* ಶಿವಮೊಗ್ಗ - ಬಿವೈ ರಾಘವೇಂದ್ರ - ಬಿಜೆಪಿ
* ದಕ್ಷಿಣ ಕನ್ನಡ - ಬ್ರಿಜೇಶ್ ಚೌಟಾ - ಬಿಜೆಪಿ
* ಉಡುಪಿ - ಚಿಕ್ಕಮಗಳೂರು - ಕೋಟಾ ಶ್ರೀನಿವಾಸ ಪೂಜಾರಿ - ಬಿಜೆಪಿ
* ತುಮಕೂರು - ವಿ ಸೋಮಣ್ಣ - ಬಿಜೆಪಿ
* ಮೈಸೂರು - ಯದುವೀರ್ ಒಡೆಯರ್ - ಬಿಜೆಪಿ
* ಬೆಂಗಳೂರು ಗ್ರಾಮಾಂತರ - ಡಾ. ಮಂಜುನಾಥ್- ಬಿಜೆಪಿ
* ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ - ಬಿಜೆಪಿ
* ಬೆಂಗಳೂರು ಸೆಂಟ್ರಲ್ - ಪಿಸಿ ಮೋಹನ್ - ಬಿಜೆಪಿ
* ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ - ಬಿಜೆಪಿ
* ಚಿಕ್ಕಬಳ್ಳಾಪುರ - ಡಾ ಕೆ ಸುಧಾಕರ್ - ಬಿಜೆಪಿ












Click it and Unblock the Notifications