ಹೃದಯ ಉಳಿಸಲು ಮತ್ತೆ ಬಂದ್ರು ಡಾ.ಸಿ.ಎನ್‌. ಮಂಜುನಾಥ್‌, ಪಾಲಿಟಿಕ್ಸ್‌ ಬಳಿಕ ಬೆಂಗಳೂರು ಆಸ್ಪತ್ರೆಯಲ್ಲಿ ಡಾಕ್ಟರ್‌!

ಬೆಂಗಳೂರು, ಮೇ 11: ‌ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿತ್ತು. ಅದರಂತೆ ಡಿ ಕೆ ಬ್ರದರ್ಸ್‌ ಭದ್ರಕೋಟೆಯನ್ನ ವಶಪಡಿಸಿಕೊಳ್ಳಲು ಕಮಲ -ದಳ ನಾಯಕರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿಸಿದ್ದು, ಏಪ್ರಿಲ್‌ 26 ರಂದು ಚುನಾವಣೆ ನಡೆದಿದ್ದು, ಹೃದಯ ಉಳಿಸಿದ ಡಾಕ್ಟರ್‌ ಇದೀಗ, ಮತ್ತೆ ವೈದ್ಯ ವೃತ್ತಿ ಮರಳಿದ್ದಾರೆ.

ಹೌದು, ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿರುವ ಬೆಂಗಳೂರು ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಹೃದ್ರೋಗ (ಕಾರ್ಡಿಯಾಲಜಿ) ವಿಭಾಗಕ್ಕೆ ಚಾಲನೆ ಸಿಕ್ಕಿದ್ದು, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಸ್ಥಾನದಿಂದ ನಿವೃತ್ತಿಯಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ.ಸಿ.ಎನ್‌. ಮಂಜುನಾಥ್‌ ಅವರ ವೈದ್ಯಕೀಯ ಸೇವೆ ಮತ್ತೆ ಮರಳಿದ್ದಾರೆ.

Lok Sabha Poll Dr Cn Manjunath Returns To Medical Profession Started

ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿರುವ ಬೆಂಗಳೂರು ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಹೃದ್ರೋಗ (ಕಾರ್ಡಿಯಾಲಜಿ) ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾಗಿ ಡಾ ಸಿಎನ್‌ ಮಂಜುನಾಥ್‌ ಕಾರ್ಯಾರಂಭಿಸಿದ್ದಾರೆ. ಸದ್ಯ ಏಪ್ರಿಲ್‌ 26 ರಂದು ಮತದಾನ ನಡೆದಿದ್ದು, ಇಷ್ಟು ದಿನ ಚುನಾವಣಾ ಪ್ರಚಾರದಲ್ಲಿದ್ದ ಮಂಜುನಾಥ ಅವರು ಇದೀಗ ವೈದ್ಯ ವೃತ್ತಿಗೆ ಮರಳಿದ್ದಾರೆ. ವಾರದಲ್ಲಿ ಮೂರು ದಿನ ಈ ಆಸ್ಪತ್ರೆಯಲ್ಲಿ ಡಾ. ಮಂಜುನಾಥ್‌ ಅವರು ಸೇವೆ ನೀಡಲಿದ್ದಾರೆ. ಅಲ್ಲದೇ ಬಡವರಿಗೆ ಉಚಿತವಾಗಿಯೂ ಸೇವೆ ಸಲ್ಲಿಸಲು ಡಾ ಸಿಎನ್‌ ಮಂಜುನಾಥ್‌ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಡಾ ಸಿಎನ್‌ ಮಂಜುನಾಥ್‌ ಅವರು ಮಾತನಾಡಿ, ಬೆಂಗಳೂರು ಆಸ್ಪತ್ರೆ ವಿಶ್ವದರ್ಜೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಇಲ್ಲಿ 150 ಬೆಡ್‌ಗಳಿವೆ. ಎನ್‌ಆರ್‌ಐ ಕೃಷ್ಣ ಸ್ವರೂಪ್‌ ಈ ಆಸ್ಪತ್ರೆಯನ್ನು ಖರೀದಿಸಿ, ನವೀಕರಣ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಆಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. 260 ಡಿಗ್ರಿ ಕೋನದಲ್ಲಿ ಹೃದ್ರೋಗ ವಿಭಾಗ ನಿರ್ಮಿಸಲಾಗಿದೆ.

ಈ ಆಸ್ಪತ್ರೆಯ ಮೂಲ ಉದ್ದೇಶ ಗುಣಮಟ್ಟದ ಚಿಕಿತ್ಸೆ ನೀಡುವುದಾಗಿದೆ. ಯಶಸ್ವಿನಿ ಮತ್ತು ಸುವರ್ಣ ಆರೋಗ್ಯ ಸೇರಿ ಸರಕಾರದ ಎಲ್ಲ ಯೋಜನೆಗಳ ಸೌಲಭ್ಯ ಇಲ್ಲಿ ಸಿಗಲಿದೆ. ಅಲ್ಲದೇ ಏಕಗವಾಕ್ಷಿ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಇಸಿಜಿ, ಎಕೋ, ಟಿಎಂಟಿ , ಲ್ಯಾಬ್‌, ತಪಾಸಣಾ ಕೇಂದ್ರ ಮತ್ತು ತುರ್ತು ಮತ್ತು ಅಪಘಾತ ಕೊಠಡಿಗಳನ್ನು ಒಂದೇ ಕಡೆ ನಿರ್ಮಿಸಲಾಗಿದೆ. ಇದರಿಂದ ರೋಗಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+